ರಾಯಚೂರು: ಮಂತ್ರಾಲಯದಲ್ಲಿ ರಾಯರ ವರ್ಧಂತೋತ್ಸವದ ಸಂಭ್ರಮ
ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ |ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ವರ್ಧಂತೋತ್ಸವ|ವರ್ಧಂತೋತ್ಸವ ನಿಮಿತ್ತ ರಾಯರ ಮೂಲಬೃಂದಾವನಕ್ಕೆ ವಿಶೇಷ ಪೂಜೆ-ಪುನಸ್ಕಾರ|
ರಾಯಚೂರು[ಮಾ.02]: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆದಿದೆ. ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಶ್ರೀಗುರುವೈಭವೋತ್ಸವಕ್ಕೆ ಇಂದು[ಸೋಮವಾರ] ಕೊನೆಯ ದಿನವಾಗಿದೆ.
ಮಂತ್ರಾಲಯದಲ್ಲಿ ಶ್ರೀಗುರುವೈಭವೋತ್ಸವದ ಕೆಲ ಫೋಟೋಸ್
ವರ್ಧಂತೋತ್ಸವ ನಿಮಿತ್ತ ರಾಯರ ಮೂಲಬೃಂದಾವನಕ್ಕೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಯಿತು. ಬಳಿಕ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ಯಿಂದ ತರಲಾರ ಶ್ರೀನಿವಾಸಶೇಷವಸ್ತ್ರವನ್ನು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸ್ವೀಕರಿಸಿ ಮೆರವಣಿಗೆ ಮೂಲಕ ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಿದರು. ನಂತರ ರಾಯರ ಪ್ರತಿಮೆಯನ್ನು ರಥದಲ್ಲಿರಿಸಿ ಶ್ರೀಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ರಥೋತ್ಸವವನ್ನು ನಡೆಸಲಾಯಿತು. ಇದೇ ವೇಳೆ ತಮಿಳುನಾಡಿನ ನಾದಹಾರ ಟ್ರಸ್ಟ್‌ನ ಕಲಾವಿದರು ವಿವಿಧ ಸಂಗೀತ ವಾದ್ಯಗಳು ಹಾಗೂ ಗಾಯನದ ಮೂಲಕ ರಾಯರಿಗೆ ಸೇವೆ ಸಲ್ಲಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗುರುವೈಭವೋತ್ಸವದ ಕೊನೆ ದಿನ ನಿಮಿತ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಅಭಿನಂದನಾ-ಅಭಿವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಗಣ್ಯರಿಗೆ ಶ್ರೀಮಠದಿಂದ ಸನ್ಮಾನ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.