Asianet Suvarna News Asianet Suvarna News

Shourya sanchalana: ಇಸ್ಲಾಂ ದಾಳಿ​ಗೆ ಜಗ್ಗದೇ ಉಳಿದ ಹಿಂದೂ ಧರ್ಮ: ಸುನೀಲ್‌

ಇಸ್ಲಾಂ ಆಕ್ರಮಣ ಮಾಡಿದ ಕಡೆಗಳ ಎಲ್ಲ ಸಂಸ್ಕೃತಿ ನಾಶವಾಗಿವೆ. ಆದರೆ, ಭಾರತದಲ್ಲಿ ಹಿಂದೂ ಧರ್ಮ ಉಳಿದುಕೊಂಡಿದೆ ಎಂದು ಬಜರಂಗದಳದ ಪ್ರಾಂತ ಸಂಚಾಲಕ ಕೆ.ಆರ್‌. ಸುನೀಲ್‌ ಹೇಳಿದರು.

Shourya sanchalana Hinduism exists Despite the attack Islam
Author
First Published Jan 9, 2023, 3:02 PM IST

ಶಿವಮೊಗ್ಗ (ಜ.೯) : ಇಸ್ಲಾಂ ಆಕ್ರಮಣ ಮಾಡಿದ ಕಡೆಗಳ ಎಲ್ಲ ಸಂಸ್ಕೃತಿ ನಾಶವಾಗಿವೆ. ಆದರೆ, ಭಾರತದಲ್ಲಿ ಹಿಂದೂ ಧರ್ಮ ಉಳಿದುಕೊಂಡಿದೆ ಎಂದು ಬಜರಂಗದಳದ ಪ್ರಾಂತ ಸಂಚಾಲಕ ಕೆ.ಆರ್‌. ಸುನೀಲ್‌ ಹೇಳಿದರು.

ನಗರದ ಕೋಟೆ ರಸ್ತೆಯಲ್ಲಿನ ವಾಸವಿ ಶಾಲಾ ಆವರಣ(Vasavi School ground )ದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದಿಂದ ಭಾನುವಾರ ಆಯೋಜಿಸಿದ್ದ ಶೌರ್ಯ ಸಂಚಲನಾ(Shourya sanchalana) ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ನರು ಕೂಡ 300 ವರ್ಷ ದೇಶದಲ್ಲಿ ಆಳ್ವಿಕೆ ಮಾಡಿದರೂ ಆದರೂ, ಹಿಂದೂ ಸಮಾಜ ಉಳಿದಿದೆ. ಸಾವಿರ ಸಾವಿರ ವರ್ಷಗಳಲ್ಲಿ ಹಿಂದೂ ಧರ್ಮದ ಮೇಲೆ ನಡೆದಷ್ಟುದಾಳಿಗಳು ಬೇರೆ ಯಾವುದೇ ಧರ್ಮಗಳ​ ಮೇಲೆ ನಡೆದಿಲ್ಲ. ಪ್ರತಿ ಬಾರಿ ದಾಳಿಯಾದಾಲೂ ಬಲಿದಾನಗಳು ನಡೆದಿವೆ. ನಾವು ಯಾವುದೇ ಬಲಿದಾನಿಗಳನ್ನು ಮರೆತಿಲ್ಲ. ಅವರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದರು.

ರಾಮಮಂದಿರದ ನಿರಂತರ ಹೋರಾಟಕ್ಕೆ ಈ ಶೌರ್ಯಯಾತ್ರೆ ಸಾಕ್ಷಿ. ಶ್ರೀರಾಮ ಮಂದಿರ ನಿರ್ಮಾಣಕ್ಕೆ 3 ಲಕ್ಷ ಜನರ ಬಲಿದಾನವಾಗಿದೆ. ಘೋರಿಯಿಂದ ಹಿಡಿದು ಈವರೆಗೂ ಹಿಂದೂ ಧರ್ಮವನ್ನ ಮುಗಿಸುವ ಪ್ರಯತ್ನ ನಡೆಯಿತು. ಛತ್ರ​ಪತಿ ಶಿವಾಜಿ, ರಾಣಾಪ್ರತಾಪ್‌, ಝಾನ್ಸಿ ಅವರಂತಹ ವೀರ ಪುರುಷ- ಮಹಿಳೆಯರು ಹಿಂದೂ ಧರ್ಮದ ರಕ್ಷಣೆ ಮಾಡಿದ್ದಾರೆ ಎಂದು ತಿಳಿಸಿದರು.

Shourya sanchalan: ಜ.8ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಬಜ​ರಂಗ​ದ​ಳ​ದಿಂದ ‘ಶೌರ್ಯ ಸಂಚಲನ’!

ಲವ್‌ ಜಿಹಾದ್‌(Love jihad) ಎಂದು ಹೇಳಿದಾಗ ಹಿಂದು ಸಮಾಜ ಒಪ್ಪಲಿಲ್ಲ. ಪ್ರೀತಿ ಪ್ರೇಮದ ವಿರೋಧಿ ಎನ್ನಲಾಯಿತು. ಹಿಂದೂ ಹೆಣ್ಣು ಮಕ್ಕಳನ್ನು ಬಳಸಿಕೊಂಡು, ಇಸ್ಲಾಮೀಕರಣದ ಸಂಚು ಮಾಡಲಾಗುತ್ತಿದೆ. ಕಳೆದ ಕೆಲವೇ ವರ್ಷದಲ್ಲಿ 26 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಾಳಿ ಆಯ್ತು, ಮುಸ್ಲಿಂನೊಬ್ಬನ ಭಾವನೆಗಳಿಗೆ ದಾಳಿಯಾದಾಗ ಹತ್ಯೆ ಆಗುತ್ತದೆ. ಆದರೆ, ಹಿಂದೂಗಳ ಭಾವನೆಗಳನ್ನು ಕೆಣಕಿದಾಗ ಸುಮ್ಮನಿರಬೇಕಾ? ಮುಂದಿನ ದಿನಗಳಲ್ಲಿ ಜಿಹಾದಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಹರಿಹಾಯ್ದರು.

ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್‌ ಮಾತನಾಡಿ, ಜಗತ್ತಿನಲ್ಲಿ ಭಾರತದ ಹಿಂದೂಗಳು ಶೌರ್ಯ, ಪರಾಕ್ರಮಕ್ಕೆ ಹೆಸರುವಾಗಿದ್ದಾರೆ ಎಂದು ವಿದೇಶಿ ಶಕ್ತಿಗಳ ಅಯೋಧ್ಯೆಯಲ್ಲಿನ ಶ್ರೀರಾಮನ ಮಂದಿರವನ್ನು ಅತಿಕ್ರಮಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರು ಎಂದರು.

ದೇವಸ್ಥಾನವನ್ನು ಮರಳಿ ಪಡೆಯಲು ಹಿಂದೂಗಳು ಐದುನೂರು ವರ್ಷಗಳಲ್ಲಿ 70ಕ್ಕೂ ಹೆಚ್ಚು ಯುದ್ಧ ಮಾಡಿದ್ದಾರೆ. ಗೋ ಸಂರಕ್ಷಣೆ, ಮತಾಂತರ, ಲವ್‌ ಜಿಹಾದ್‌ ನಂತಹ ಕೃತ್ಯಗಳನ್ನು ಬಜರಂಗದಳದ ಕಾರ್ಯಕರ್ತರು ಟೊಂಕಕಟ್ಟಿನಿಂತಿದ್ದಾರೆ. ನಗರವನ್ನು ದೇಶದ್ರೋಹಿಗಳ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವವರಿಗೆ ಇಂದು ನಡೆಸಿದ ಶೌರ್ಯ ಸಂಚಲನಾ ಯಾತ್ರೆ ಮೂಲಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.

ಹಿಂದೂಗಳಲ್ಲಿ ಯಾತ್ರೆಯ ಮೂಲಕ ಧೈರ್ಯ ತುಂಬಿದ್ದೇವೆ. ಹಿಂದೂಗಳು ಸಹಿಷ್ಣುಗಳಾಗಿದ್ದಾರೆ. ಆದ್ದರಿಂದಲೇ ನಮ್ಮ ಮೇಲೆ ದಾಳಿ ಮಾಡಿದವರ ಮೇಲೆಯೂ ನಾವು ಪ್ರತಿದಾಳಿ ನಡೆಸುತ್ತಿಲ್ಲಘಿ. ಆದರೆ ಇದನ್ನು ನಮ್ಮ ಬಲಹೀನತೆ ಎಂದು ತಿಳಿಯಬಾರದು. ಪ್ರತಿ ಗ್ರಾಮ, ನಗರದ ಪ್ರತಿ ಗಲ್ಲಿಗಲ್ಲಿಗಳಲ್ಲೂ ಬಜರಂಗದಳ ಸಂಘಟನೆ ಗಟ್ಟಿಯಾಗಬೇಕು. ಸಂಘಟನೆಯನ್ನು ಇನ್ನಷ್ಟುಬಲಪಡಿಸಲು ಯುವಕರು ಶಪಥ ಮಾಡಬೇಕು ಎಂದು ಕರೆ ನೀಡಿದರು.

ಮತಾಂತರ ವಿರುದ್ಧ ಎಚ್ಚ​ರ ಅಗ​ತ್ಯ: ಬಸ​ವ​ರಾ​ಜ್‌

ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್‌ ಮಾತ​ನಾಡಿ, ಬಾಬರ್‌ ಮಾಡಿದ ಧ್ವಂಸವನ್ನ ಸರಿಪಡಿಸಲು 500 ವರ್ಷ ಹಿಡಿದಿದೆ. ಬಾಬರ್‌ ಧ್ವಂಸ ಮಾಡಿದ ದೇವಸ್ಥಾನವನ್ನು ಪುನರ್ನಿರ್ಮಿಸಲು 500 ವರ್ಷಗಳಲ್ಲಿ 79 ಯುದ್ಧ ನಡೆದಿವೆ. ಲಕ್ಷಾಂತರ ಯುವಕರು ಬಲಿದಾನ ನೀಡಿದ್ದಾರೆ. 1947ರಂದು ಸ್ವಾತಂತ್ರ್ಯ ಬಂದಿತು. ಆಗ ಹಿರಿಯರು ವಿಚಾರ ಮಾಡಬೇಕಿತ್ತು. ಆಗಲೂ ಸಾಧ್ಯವಾಗಲಿಲ್ಲ. ಅಪಮಾನವನ್ನ ಸರಿಪಡಿಸಿಕೊಳ್ಳಲು ಹೋರಾಟ ನಡೆಸಲಾಯಿತು ಎಂದು ತಿಳಿಸಿದರು.

ಗಮನಕ್ಕೆ ಬಾರದೇ ಮತಾಂತರ ಮಾಡುವ ಧರ್ಮದ ವಿರುದ್ಧವೂ ಎಚ್ಚರದಿಂದ ಇರಬೇಕು. ಹಿಂದೂ ಸಂಸ್ಕೃತಿ ರಕ್ಷಿಸಲು ಲಕ್ಷಾಂತರ ಮಂದಿ ಬಜರಂಗದಳ ಕಾರ್ಯಕರ್ತರು ಇದ್ದಾರೆ. 1 ಲಕ್ಷದ 40 ಸಾವಿರ ಗೋವುಗಳನ್ನು ಒಂದು ವರ್ಷದಲ್ಲಿ ರಕ್ಷಿಸಲಾಗಿದೆ. ಲವ್‌ ಜಿಹಾದ್‌ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ನಾಶಪಡಿಸಲು 10 ಸಾವಿರ ಜನ ಹೆಣ್ಣು ಮಕ್ಕಳನ್ನ ಪ್ರೀತಿ- ಪ್ರೇಮದ ಬಲೆಗೆ ಬೀಳಿಸಿಕೊಳ್ಳಲಾಗಿತ್ತು. ಅಂತಹ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಗೊತ್ತಾಗುವಂತೆ ಮತಾಂತರ ಮಾಡುವ ಧರ್ಮ ಒಂದು ಕಡೆ ಇದ್ದರೆ ಮತ್ತೊಂದಡೆ ಮತ್ತೊಂದು ಧರ್ಮೀಯರು ಗೊತ್ತಿಲ್ಲದಂತೆ ಮತಾಂತರ ಮಾಡುವ ಮೂಲಕ ಹಿಂದೂ ಸಮಾಜದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಗುಡುಗಿದರು.

ಅದ್ಧೂರಿ, ಯಶಸ್ವಿಯಾಗಿ ನಡೆದ ಶೌರ್ಯ ಯಾತ್ರೆ

ವಿಶ್ವ ಹಿಂದೂ ಪರಿಷತ್‌(Vishwa hindu parishath) ಹಾಗೂ ಬಜರಂಗದಳದ ವತಿಯಿಂದ ಭಾನುವಾರ ಶಿವಮೊಗ್ಗ ನಗರದಲ್ಲಿ ಬೃಹತ್‌ ಶೌರ್ಯ ಯಾತ್ರೆ ಅದ್ಧೂರಿ ಹಾಗೂ ಯಶ​ಸ್ವಿ​ಯಾಗಿ ನಡೆಸಲಾಯಿತು. ನಗರದ ಫ್ರೀಡಂ ಪಾರ್ಕ್ನಿಂದ ಪ್ರಾರಂಭವಾದ ಶೌರ್ಯ ಯಾತ್ರೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ವಾಸವಿ ಮೈದಾನದಲ್ಲಿ ಅಂತ್ಯಗೊಂಡಿತು.

ನಗರದ ಜೈಲು ರಸ್ತೆ, ನೆಹರು ರಸ್ತೆ, ಅರ್ಮೀ ಅಹ್ಮದ್‌ ವೃತ್ತ, ಗಾಂಧಿ ಬಜಾರ್‌ ಮೂಲಕ ಶೌರ್ಯ ಯಾತ್ರೆಯು ಶಾಂತಿಯುತ ವಾಗಿ ಪೊಲೀಸ್‌ ಬಿಗಿ ಬಂದೋಬಸ್‌್ತನಲ್ಲಿ ಯಶಸ್ವಿಯಾಗಿ ನಡೆಯಿತು. ಶೌರ್ಯ ಯಾತ್ರೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

 

ಇಸ್ಲಾಂ, ಕ್ರೈಸ್ತ ರಾಷ್ಟ್ರವಾಗಿಸಲು ಹಿಂದು ಸಮಾಜ ಬಿಡಲ್ಲ: ಯತ್ನಾಳ್

ರಾರಾಜೀಸಿದ ಕೇಸರಿ ಧ್ವಜಗಳು:

ಮೆರವಣಿಗೆ ಉದ್ದಕ್ಕೂ ಕಾರ್ಯಕರ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಹಿಂದೂ ಹರ್ಷ, ಸಾವರ್ಕರ್‌ ಪರ ಘೋಷಣೆಗಳು ಶೌರ್ಯ ಯಾತ್ರೆಯ ಉದ್ದಕ್ಕೂ ಮೊಳಗಿದವು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಜಿಲ್ಲಾ ಪೊಲೀಸ್‌ ವತಿಯಿಂದ ಬಿಗಿ ಪೊಲೀಸ್‌ ಬಂದೋಬಸ್‌್ತ ಜರು​ಗಿ​ಸ​ಲಾ​ಗಿ​ತ್ತು.

Follow Us:
Download App:
  • android
  • ios