Asianet Suvarna News Asianet Suvarna News

Hubballi: ರೈತರಿಗೆ ಸಮಸ್ಯೆ ಎದುರಾದಾಗ ಒಂದಾಗಿ: ಸಿಎಂ ಬೊಮ್ಮಾಯಿ

*  ರೈತರ ಸಹಕಾರ ಸಂಸ್ಥೆಯ ಜತೆಗೆ ಸರ್ಕಾರ ಇರಲಿದೆ
*  ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ ಭಾರತ 
*  ರೈತರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಕೋ ಆಪರೇಟಿವ್‌ ಸಂಘಗಳು ಮಾಡಬೇಕಿದೆ

Should Respond to Farmers Problems Says CM Basavaraj Bommai grg
Author
Bengaluru, First Published Dec 26, 2021, 8:48 AM IST

ಹುಬ್ಬಳ್ಳಿ(ಡಿ.26):  ರೈತರ ಸಮಸ್ಯೆ ಎದುರಾದಾಗ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಅಮರಗೋಳ ಎಪಿಎಂಸಿ ಯಾರ್ಡ್‌ನಲ್ಲಿ ಶನಿವಾರ ದಿ.ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರ(Farmers), ಸಹಕಾರ ಸಂಸ್ಥೆಯ ಜತೆಗೆ ಸರ್ಕಾರ ಇರಲಿದೆ. ಸಂಸ್ಥೆಯನ್ನು ಹಿರಿಯ ನಿರ್ದೇಶಕರು ಬಹಳಷ್ಟು ವರ್ಷಗಳ ಕಾಲ ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು. ಈ ಸಂಸ್ಥೆ ರೈತರ ಆಸ್ತಿಯಾಗಿದೆ. ಖಾಸಗೀಕರಣ(Privatization), ಜಾಗತೀಕರಣ(Globalization), ಆಧುನೀಕರಣದ(Modernization) ಅಬ್ಬರದ ನಡುವೆ ನಡೆಸಿಕೊಂಡು ಹೋಗುವುದು ಕಷ್ಟಕರ ಎಂದು ಹೇಳಿದರು.

Untimely Rain Effect: ಡಬಲ್ ಸೆಂಚುರಿ ಬಾರಿಸಿದ ಬದನೆಕಾಯಿ ದರ: ಕಂಗಾಲಾದ ಗ್ರಾಹಕ..!

ಶತಮಾನೋತ್ಸವ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi), ಸಹಕಾರಿ ಕ್ಷೇತ್ರವನ್ನು ಕೇಂದ್ರ ಸರ್ಕಾರದ(Central Government) ಅಡಿ ತರಲು ಮುಂದಾದಾಗ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇಂದು ವಿಪಕ್ಷದವರೇ ಮುಂದೆ ಬಂದು ಉತ್ತಮ ಕಾರ್ಯ ಮಾಡಿದ್ದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ದೇಶ ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಜಗತ್ತಿಗೆ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ. ಯಾವ ದೇಶಕ್ಕೆ ಯಾವ ಬೆಳೆ ಅಗತ್ಯ? ಅಲ್ಲಿ ಆಮದಿಗೆ ನಿಗದಿಯಾಗುವ ಗುಣಮಟ್ಟದ ಮಾನದಂಡವೇನು? ಎಂಬುದನ್ನು ಅರಿಯಬೇಕು. ರಫ್ತು ಯಾವ ರೀತಿ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಚಿಂತನೆ ಆಗಬೇಕಿದೆ. ರೈತರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಕೋ ಆಪರೇಟಿವ್‌ ಸಂಘಗಳು ಮಾಡಬೇಕಿದೆ. ವಿದೇಶಗಳಿಗೆ ಉತ್ತಮ ಗುಣಮಮಟ್ಟದ ಆಹಾರ ಪೂರೈಸಿದರೆ ಬೇಡಿಕೆ ಹೆಚ್ಚಾಗುತ್ತದೆ. ಸಾವಯವ ಕೃಷಿಯನ್ನು ಯಾವ ರೀತಿ ಲಾಭದಾಯಕ ಆಗಿಸುವ ಕಾರ್ಯ ಆಗಬೇಕು ಎಂಬುದನ್ನು ಅರಿಯಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಮಾತನಾಡಿ, ಸಹಕಾರಿ ಸಂಸ್ಥೆಯ ನೇತೃತ್ವ ವಹಿಸುವವರು ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿ ಬಿಟ್ಟು ಕೆಲಸ ಮಾಡಬೇಕು. ಖಾಸಗಿ ಕಂಪನಿಗಳಿಗೆ ಸ್ಪರ್ಧೆ ಒಡ್ಡುವ ಮಟ್ಟಿಗೆ ಸಂಸ್ಥೆಗಳನ್ನು ಬೆಳೆಸಬೇಕು. ಅಮರಗೋಳ ಎಪಿಎಂಸಿಯಿಂದ ಮಹಾನಗರ ಪಾಲಿಕೆ ತೆರಿಗೆ ವಸೂಲಿ ಸೇರಿದಂತೆ ಕೆಲ ಸಮಸ್ಯೆಗಳಿಗೆ ಇದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Karnataka Assembly Election: 2023ರ ಚುನಾವಣೆಯತ್ತ ಬಿಜೆಪಿ ಚಿತ್ತ

ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೃಷಿ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಆದರೆ, ಅದನ್ನು ಪ್ರಾಯೋಗಿಕವಾಗಿಯೂ ಅನುಷ್ಠಾನಕ್ಕೆ ಬಿಡದೆ ಪ್ರತಿಭಟನೆ ಮಾಡಿ ರದ್ದಾಗುವಂತೆ ಮಾಡಿದರು. ಆದರೆ ವಾಸ್ತವದಲ್ಲಿ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈಗಿನ ಮಾರುಕಟ್ಟೆ ವ್ಯವಸ್ಥೆಯೇ ಮುಂದುವರಿಯಬೇಕೆ ಅಥವಾ ಬದಲಾಗಬೇಕೆ ಎಂಬುದರ ಕುರಿತು ಚಿಂತನೆ ಆಗಬೇಕು ಎಂದರು.

ಸಭಾಪತಿ ಬಸವರಾಜ ಹೊರಟ್ಟಿ(Basavaraj Horratti), ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ(Shankar Patil Munenkoppa), ರೈತರಿಗೆ ಒಳಿತಾಗುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಸಹಕಾರ ನೀಡುವಂತೆ ಕೇಳಿಕೊಂಡರು. ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಪಿ.ಸಿ.ಸಿದ್ಧನಗೌಡ್ರ, ಸಿ.ಎಂ. ನಿಂಬಣ್ಣವರ, ಎಸ್‌.ಐ.ಚಿಕ್ಕನಗೌಡ್ರ, ಮೋಹನ್‌ ಲಿಂಬಿಕಾಯಿ, ಬಸವರಾಜ ಎಕಲಾಸಪುರ, ಚನ್ನು ಹೊಸಮನಿ, ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀ, ಜುಕ್ತಿಹಿರೇಮಠ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ರಾಮೂ ಮೂಲಗಿ ಜನಪದ ಹಾಡು ಹಾಡಿದರು.
 

Follow Us:
Download App:
  • android
  • ios