Karnataka Assembly Election: 2023ರ ಚುನಾವಣೆಯತ್ತ ಬಿಜೆಪಿ ಚಿತ್ತ
* ಡಿ. 28, 29ಕ್ಕೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಣಿ
* ಪಕ್ಷ ಸಂಘಟನೆ, ಚುನಾವಣೆ ಮತ್ತಿತರ ವಿಚಾರಗಳ ಚರ್ಚೆ
* 11 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಕಾರ್ಯಕಾರಿಣಿ ಆಯೋಜನೆ
ಹುಬ್ಬಳ್ಳಿ(ಡಿ.25): ನಗರದಲ್ಲಿ ಡಿ. 28, 29ರಂದು ಬಿಜೆಪಿ(BJP) ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಸಭೆಗೆ ಆಗಮಿಸುವರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಎಂಎಲ್‌ಸಿ, ಸ್ಥಳೀಯ ಚುನಾವಣೆ ಫಲಿತಾಂಶ, ಪಕ್ಷ ಸಂಘಟನೆ ಮತ್ತಿತರ ಆಂತರಿಕ ವಿಚಾರಗಳ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ಆಗಲಿದೆ.
ಮೂರು ತಿಂಗಳಿಗೊಮ್ಮೆ ನಡೆಯಲಿರುವ ಕಾರ್ಯಕಾರಿಣಿ ಸಭೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ(Hubballi) 11 ವರ್ಷದ ಬಳಿಕ ಆಯೋಜನೆ ಆಗುತ್ತಿದೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್(Nalin Kuamar Kateel), ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh), ಸಹ ಉಸ್ತುವಾರಿ ಡಿ.ಕೆ.ಅರುಣಾ, ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್(Nirmala Sitharaman), ಪ್ರಹ್ಲಾದ ಜೋಶಿ(Pralhad Joshi), ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ, ರಾಜೀವ ಚಂದ್ರಶೇಖರ್ ಆಗಮಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಸೇರಿ ಎಲ್ಲ ಸಚಿವರು, ಸಂಸದರು, ಶಾಸಕರು ಸೇರಿ ಒಟ್ಟಾರೆ ಕಾರ್ಯಕ್ರಮಕ್ಕೆ 568 ಅಪೇಕ್ಷಿತರು ಆಗಮಿಸಲಿದ್ದಾರೆ.
Anti conversion Bill : ಕಾಂಗ್ರೆಸ್ - ಬಿಜೆಪಿ ನಡುವೆ ಮ್ಯಾಚ್ ಫಿಕ್ಸಿಂಗ್ : ರೇವಣ್ಣ
ಡಿ.28ರಂದು ಎರಡು ವಿಶೇಷ ಸಭೆ ನಡೆಯಲಿದೆ. ಮೊದಲ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಎರಡನೇ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಅವರು ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳ ಎಲ್ಲ ಪ್ರಭಾರಿಗಳು,ಸಂಘಟನಾ ಕಾರ್ಯದರ್ಶಿ, ಸಹ ಸಂಘಟನಾ ಕಾರ್ಯದರ್ಶಿಗಳ ಸಭೆ ಕೈಗೊಳ್ಳುವರು. ಉಸ್ತುವಾರಿ ಅರುಣ ಸಿಂಗ್ ಉಪಸ್ಥಿತರಿರುವರು.
ಕೋವಿಡ್ ನಿಯಮಾವಳಿ(Covid Guidelines) ಪಾಲಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ವಿಶಾಲವಾದ ಅಂದರೆ ಸುಮಾರು 4 ಸಾವಿರ ಜನ ಸೇರುವಂತಹ ಸ್ಥಳದಲ್ಲಿ ಸಭೆ ನಡೆಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿರಲಿದೆ ಎಂದರು.
ನಡ್ಡಾ ಸಮ್ಮುಖದಲ್ಲಿ ಧಾರವಾಡ ವಿಭಾಗ ಸಭೆ
29ರಂದು ಸಂಜೆ ಗೋಕುಲ ರಸ್ತೆಯ ಬಿಗ್ ಬಝಾರ್ ಪಕ್ಕದ ಸ್ಥಳದಲ್ಲಿ ಧಾರವಾಡ(Dharwad) ವಿಭಾಗದ ಶಕ್ತಿ ಕೇಂದ್ರ ಮೇಲ್ಪಟ್ಟಕಾರ್ಯಕರ್ತರ ವಿಶೇಷ ಸಭೆಯು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ನಡೆಯಲಿದೆ. ವಿಭಾಗದ ಜಿಲ್ಲೆಗಳ ಶಕ್ತಿ ಕೇಂದ್ರ ಪ್ರಮುಖರು, ಜಿಲ್ಲೆಯ ಪದಾಧಿಕಾರಿಗಳು, ಮೋರ್ಚಾದ ಪ್ರಮುಖರು ಸೇರಿ ಸುಮಾರು ಒಂದೂವರೆ ಸಾವಿರ ಪದಾಧಿಕಾರಿಗಳು ಪಾಲ್ಗೊಳ್ಳುವರು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಈಗಿನಿಂದಲೇ ಪಕ್ಷವನ್ನು ಇನ್ನಷ್ಟು ಹುರಿಗೊಳಿಸಲು ಸದ್ಯ ರಾಜ್ಯದಲ್ಲೊನ ಬಿಜೆಪಿ ಮುಖಂಡರ ಮಧ್ಯದಲ್ಲಿ ಉಂಟಾಗಿರುವ ಕಂದಕ, ವೈಮನಸ್ಸು, ಪರಸ್ಪರ ಅವಿಶ್ವಾಸಗಳನ್ನು ದೂರ ಮಾಡಿ ಒಗ್ಗಟ್ಟಿನಿಂದ ಹೆಜ್ಜೆ ಇಡುವಂತೆ ಮಾಡುವ ನಿಟ್ಟಿನಲ್ಲಿ ತಪ್ಪು ಮಾಡಿದವರನ್ನು ಎಚ್ಚರಿಸುವುದು ವರಿಷ್ಟರಗೀಗ ಅನಿವಾರ್ಯವಾಗಿದೆ.
ಸ್ಮರಣಿಕೆ ಬದಲಾಗಿ ಉತ್ತರ ಕರ್ನಾಟಕ ತಿನಿಸು
ಹುಬ್ಬಳ್ಳಿಯ ಡೆನ್ನಿಸನ್ಸ್ ಹೊಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಮರಣಿಕೆ ಬದಲಾಗಿ ಉತ್ತರ ಕರ್ನಾಟಕ ಭಾಗದ ಶೇಂಗಾ ಚಟ್ನಿ, ಕರಂಡಿ, ಧಾರವಾಡ ಪೇಢಾ, ಅಗಸಿ ಚೆಟ್ನಿ ನೀಡಲು ನಿರ್ಧರಿಸಿದ್ದೇವೆ. ಜತೆಗೆ ಲಕ್ಷ್ಮೇಶ್ವರದ ಲಡ್ಕಿಪಾಕ್ ಖಾದ್ಯವನ್ನು ನೀಡಲಾಗುವುದು. ಅದರ ಜತೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಪುಟ್ಟಮೂರ್ತಿಯನ್ನು ನೀಡಲಾಗುವುದು ಎಂದು ಟೆಂಗಿನಕಾಯಿ ತಿಳಿಸಿದರು.
Karnataka Politics: 'ಬಿಜೆಪಿಯಿಂದ ಅಭಿವೃದ್ಧಿಯಾದ್ರೆ ರಾಜಕೀಯದಿಂದಲೇ ನಿವೃತ್ತಿ'
ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ಕೊಟ್ಟ ಎಸ್.ಟಿ ಸೋಮಶೇಖರ್
ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ರಾಜಕೀಯ ನಾಯಕರುಗಳು ಭರ್ಜರಿ ತಯಾರಿಗಳು ನಡೆದಿವೆ.
ಹೌದು...ಮಂದಿನ ರಾಜಕೀಯ ಭವಿಷ್ಯಕ್ಕೆ ಕೆಲ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಂಪ್ ಆಗುತ್ತಿದ್ದಾರೆ. ಅದರಲ್ಲೂ ಜೆಡಿಎಸ್(JDS) ನಾಯಕರು ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಇದರ ಮಧ್ಯೆ ಸಚಿವ ಎಸ್‌ಟಿ ಸೋಮಶೇಖರ್(ST Somashekhar) ಅವರು ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಶುಕ್ರವಾರ ಬೆಳಗಾವಿಯಲ್ಲಿ(Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಗೆ ಇನ್ನೂ ಸಮಯವಿದೆ. ಕಾಂಗ್ರೆಸ್ ಸೇರುವ ಬಗ್ಗೆ ಏನೂ ಯೋಚಿಸಿಲ್ಲ. ಸದ್ಯ ಬಿಜೆಪಿಯಲ್ಲಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.