‘ಲಕ್ಷಾಂತರ ಭಕ್ತರ ಬಯಕೆ ಈಡೇರಿಸಿದ್ದ ಮಾಣಿಕೇಶ್ವರಿ ಅಮ್ಮನ ಕೊನೆಯ ಆಸೆ ಈಡೇರಲೇ ಇಲ್ಲ’

ಮಾತೆ ಮಾಣಿಕೇಶ್ವರಿ ಅಗಲಿಕೆಗೆ ಕಂಬನಿ ಮಿಡಿದ ಅಮ್ಮನ ಶಿಷ್ಯ ಶಿವಯ್ಯ ಸ್ವಾಮಿ|ಮೂವತ್ತು ವರ್ಷಗಳಿಂದ ಅಮ್ಮನ ಸೇವಕನಾಗಿ ಸೇವೆ ಸಲ್ಲಿಸಿದ್ದ ಶಿವಯ್ಯ ಸ್ವಾಮಿ|ಜನರ ವ್ಯಸನ ದೂರ ಮಾಡಿ ಸಜ್ಜನ ಸಮಾಜ ನಿರ್ಮಾಣದ ಗುರಿ ಹೊಂದಿದ್ದ ಮಾತೆ ಮಾಣಿಕೇಶ್ವರಿ|

Shivayya Swamy Talks Over Mate Manikeshwari Amma

ಕಲಬುರಗಿ[ಮಾ.08]: ಭಕ್ತರ ಆರಾಧ್ಯ ದೈವವಾಗಿದ್ದ ಮಾತೆ ಮಾಣಿಕೇಶ್ವರಿ ಅಗಲಿಕೆಗೆ ಅಮ್ಮನ ಶಿಷ್ಯ  ಶಿವಯ್ಯ ಸ್ವಾಮಿ ಕಂಬನಿ ಮಿಡಿದಿದ್ದಾರೆ. ಮೂವತ್ತು ವರ್ಷಗಳಿಂದ ಅಮ್ಮನ ಸೇವಕನಾಗಿ ಸೇವೆ ಸಲ್ಲಿಸುತ್ತಿರುವ ಶಿವಯ್ಯ ಸ್ವಾಮಿ ಅವರು ಅಮ್ಮನ ಅಗಲಿಕೆ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ.

ಭಾನುವಾರ ಸುವರ್ಣ ನ್ಯೂಸ್ ಮಾತನಾಡಿದ ಅವರು, ಮಾಣಿಕೇಶ್ವರಿ ಅಮ್ಮ ಗುರುವಾಗಲು ಇಲ್ಲಿಗೆ ಬಂದವರಲ್ಲ. ಜನರ ವ್ಯಸನ ದೂರ ಮಾಡಿ ಸಜ್ಜನ ಸಮಾಜ ನಿರ್ಮಾಣದ ಗುರಿ ಹೊಂದಿದವರಾಗಿದ್ದರು. ಅವರು ಕೈಲಾಸ ಸೇರುವ ಬಗ್ಗೆ ನನಗೆ ಕರೆದು ಹೇಳಿದ್ದರು. ಇದಕ್ಕೂ ಮುನ್ನ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಮಾಡುವ ಬಯಕೆ ವ್ಯಕ್ತಪಡಿಸಿದ್ದರು ಎಂದು ನುಡಿದಿದ್ದಾರೆ.  ಮಾತೆ ಮಾಣಿಕೇಶ್ವರಿ ಅಮ್ಮನವರನ್ನ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಶ್ರೀಶೈಲಕ್ಕೆ ಕರೆದುಕೊಂಡು ಹೋಗಲು ಟ್ರಸ್ಟ್ ಕೂಡ ನಿರ್ಧರಿಸಿತ್ತು. ಆದ್ರೆ ಶ್ರೀಶೈಲಕ್ಕೆ ಹೋಗುವ ಮುನ್ನ ಅಮ್ಮ ಕೈಲಾಶ ಸೇರಿದ್ದಾರೆ ಎಂದು ಅಮ್ಮನ ಕಡೆಯ ಬಯಕೆ ಈಡೇರದ್ದಕ್ಕೆ ಕಣ್ಣೀರಿಟ್ಟ ಶಿವಯ್ಯ ಸ್ವಾಮಿ ಕಣ್ಣೀರು ಹಾಕಿದ್ದಾರೆ. 

ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ

ಲಕ್ಷ ಲಕ್ಷ ಜನರ ಬಯಕೆ ಈಡೇರಿಸಿದ ಅಮ್ಮನ ಕಡೆಯ ಬಯಕೆ ಈಡೇರಲೇ ಇಲ್ಲ. ಮಲ್ಲಿಕಾರ್ಜುನನಿಗೆ ಅಭಿಷೇಕ ಸಲ್ಲಿಸುವ ಆಸೆ ಮಾಣಿಕೇಶ್ವರಿ ಅಮ್ಮನದಾಗಿತ್ತು. ಶ್ರೀ ಶೈಲಕ್ಕೆ ಹೋಗುವ ಮುನ್ನವೇ ಮಾತೆ ಕೈಲಾಸ ತಲುಪಿದ್ದಾರೆ.  ಕಡೆಗೂ ಅಮ್ಮನವರ ಕೊನೆಯ ಆಸೆ ಈಡೇರಲಿಲ್ಲ ಎಂದು ಅಮ್ಮನ ಶಿಷ್ಯ  ಶಿವಯ್ಯ ಸ್ವಾಮಿ ಮಮ್ಮಲ ಮರಗಿದ್ದಾರೆ.

Latest Videos
Follow Us:
Download App:
  • android
  • ios