ಬೆಂಗಳೂರು (ಮಾ.10): ಮಹಾ ಶಿವರಾತ್ರಿ ಹಿನ್ನೆಲೆ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಸಿದ್ಧತೆ ನಡೆದಿದ್ದು, ಕೊರೊನಾ ಹಿನ್ನೆಲೆ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ. 

ಈಗಾಗಲೇ ಶಿವರಾತ್ರಿ ಆಚರಣೆಯ ಅಂಗವಾಗಿ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಭೆಗಳನ್ನು ನಡೆಸಿರುವ ಬಿಬಿಎಂಪಿ ಮುಜರಾಯಿ ಇಲಾಖೆ ಕೊರೋನಾ ಮುನ್ನೆಚ್ಚರಿಕೆಯೊಂದಿಗೆ ವಿಜೃಂಭಣೆಯಿಂದ ಕಾಡು ಮಲ್ಲೇಶ್ವರನಿಗೆ ಆರಾಧನೆ ನಡೆಯಲಿದೆ ಎಂದು ಹೇಳಿದೆ. 

ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ ...

ದೇವಸ್ಥಾನದ ಮೂರು ಪ್ರವೇಶಗಳಲ್ಲಿಯೂ ಸ್ವಯಂ ಚಾಲಿತ ಸ್ಯಾನಿಟೈಸರ್ ಅಳವಡಿಕೆ. ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನ. ಮಹಾಶಿವರಾತ್ರಿ ಜಾಗರಣೆ ಮುನ್ನೆಚ್ಚರಿಕೆಯೊಂದಿಗೆ ಜರುಗಲಿದೆ ಎಂದು ತಿಳಿಸಿದೆ.

ಅನ್ನಪ್ರಸಾದಕ್ಕೆ ಬ್ರೇಕ್ ಹಾಕಿ ಲಡ್ಡು ಮಾತ್ರ ವಿತರಿಸಲು ಸಿದ್ಧತೆ ನಡೆದಿದ್ದು, ಅಭಿಷೇಕ ಪ್ರಿಯ ಈಶ್ವರನಿಗೆ 24 ಗಂಟೆಗಳ ಕಾಲ ಜಲಾಭಿಷೇಕ ನಡೆಯಲಿದೆ.  ನಾಳೆ ಬೆಳಗ್ಗೆ 4.30 ರಿಂದ ಶುಕ್ರವಾರ ಮುಂಜಾನೆ 6 ಗಂಟೆಯವರೆಗೆ ಚಿನ್ನಲೇಪಿತ ನಾಗಾಭರಣದಿಂದ ಜಲಾಭಿಷೇಕ ನಡೆಯಲಿದೆ. ಪ್ರತಿ ಗಂಟೆ ಗಂಟೆಗೂ ವಿಶೇಷ ರುದ್ರಾಭಿಷೇಕ ನಡೆಯಲಿದೆ. 

ದೇವಸ್ಥಾನವನ್ನು ಹಣ್ಣು ಹಾಗೂ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ಜಾಗರಣೆ ಹಿನ್ನೆಲೆ ದೇವಸ್ಥಾನದ ಅಂಗಳದಲ್ಲಿ ರಾತ್ರಿ ವಿಶೇಷ ಗಿರಿಜಾ ಕಲ್ಯಾಣ ನಡೆಯಲಿದ್ದು, ಶಿವಲೀಲೆಯನ್ನು ಪ್ರಸ್ತುತ ಪಡೆಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.