Asianet Suvarna News Asianet Suvarna News

Shivamogga: ತೀರ್ಥಹಳ್ಳಿಯಲ್ಲಿ ನಡೆದಿದ್ದು ಇಡಿ ದಾಳಿ ಅಲ್ಲ: ಎನ್‌ಐಎ ರೇಡ್‌

ದಾಳಿ ನಡೆದಿದ್ದು ಶಂಕಿತ ಉಗ್ರ ಶರೀಫ್ ಮನೆ ಹಾಗೂ ಕಾಂಪ್ಲೆಕ್ಸ್ ನಲ್ಲಿನ ಕಾಂಗ್ರೆಸ್ ಕಚೇರಿಯ ಮೇಲೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನೆ ಮೇಲೆ ಯಾವುದೇ ದಾಳಿ ನಡೆದಿಲ್ಲ
ಬಿಜೆಪಿ ನಾಯಕರು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ರತ್ನಾಕರ್‌ ಆಕ್ರೋಶ

Shivamogga What happened in Tirthahalli was not an ED raid but an NIA raid sat
Author
First Published Jan 11, 2023, 8:41 PM IST

ವರದಿ: ರಾಜೇಶ ಕಾಮತ್ ಏನ್ ಸುವರ್ಣ ನ್ಯೂಸ್ ಶಿವಮೊಗ್ಗ
ಶಿವಮೊಗ್ಗ (ಜ.11):  ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯ ಶಂಕಿತ ಉಗ್ರ ಶಾರಿಕ್ ಅಜ್ಜಿಯ ಮನೆಯ ಮೇಲೆ NIA ಅಧಿಕಾರಿಗಳ ತಂಡ ರೈಡ್ ಮಾಡಿದೆ. ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ  ದಾಳಿಯ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಮಾಹಿತಿ ನೀಡುತ್ತಿಲ್ಲ. ನಗರದಲ್ಲಿ ಹಲವು ಕಡೆ ಕಡೆ ಶೋಧ ಮಾಡುವ ಮೂಲಕ ತನಿಖೆ ಮುಂದುವರಿಸಿದೆ.

ಶಂಕಿತ ಉಗ್ರ ಶಾರೀಕ್ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ NIA ಅಧಿಕಾರಿಗಳಿಂದ ತೀರ್ಥಹಳ್ಳಿ ಸೊಪ್ಪು ಗುಡ್ಡೆಯಲ್ಲಿರುವ ಶಾರೀಖ್ ಕುಟುಂಬಕ್ಕೆ ಸೇರಿದ ಕಾಂಪ್ಲೆಕ್ಸ್ ನಲ್ಲಿ ತಪಾಸಣೆ ನಡೆಸಿದ್ದು ಈ ಕಾಂಪ್ಲೆಕ್ಸ್ ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ 8 ವರ್ಷಗಳ ಕಾಲ  ಶಾರೀಕ್ ತಂದೆ ಹಾಶೀಮ್  ಬಾಡಿಗೆ ನೀಡಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹೋದರನ ಪುತ್ರ ನವೀನ್ ಹೆಸರಿನಲ್ಲಿ 10 ಲಕ್ಷ ರೂ. ನೀಡಿ ಕಾಂಗ್ರೆಸ್ ಕಚೇರಿಗೆ ಬಾಡಿಗೆ ಪಡೆಯಲಾಗಿತ್ತುಪ್ರತಿ ತಿಂಗಳು 1000 ಬಾಡಿಗೆಯಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ NIA ರೇಡ್‌: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿಚಾರಣೆ

ಈ ಒಪ್ಪಂದದಂತೆ ಪ್ರತಿ ತಿಂಗಳು ಶಾರೀಕ್‌ ಕುಟುಂಬದ ಬ್ಯಾಂಕ್ ಖಾತೆಗೆ 1000 ಜಮಾ ಮಾಡಲಾಗುತ್ತಿತ್ತು. 2023ರ ಜೂನ್ ತಿಂಗಳಿನಲ್ಲಿ ಈ ಒಪ್ಪಂದ ಅಂತ್ಯವಾಗಲಿದ್ದು 10 ಲಕ್ಷ ರೂ ಅಡ್ವಾನ್ಸ್  ನೀಡಲು ಕೋರಲಾಗಿತ್ತು. ಅಡ್ವಾನ್ಸ್ ಹಣವನ್ನು ವಾಪಸ್ ನೀಡಿದರೆ ಕಚೇರಿ ಖಾಲಿ ಮಾಡುವುದಾಗಿ ಹೇಳಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದರು. ಈ ಸಂಬಂಧ ಎನ್ ಐ ಎ ಅಧಿಕಾರಿಗಳಿಂದ ಸತತ ಎರಡು ಗಂಟೆಗಳ ಕಾಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಚಾರಣೆನಡೆಸಿ NIA ಅಧಿಕಾರಿಗಳು ತೆರಳಿದರು. ಎನ್ಐಎ ತನಿಖೆ ತಂಡದ ವಿಚಾರಣೆ ಕುರಿತಂತೆ ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿ, ಉಗ್ರ ಶಾರೀಕ್ ಕುಟುಂಬದ ಒಡೆತನಕ್ಕೆ ಸಂಬಂಧಿಸಿದ ಕಾಂಪ್ಲೆಕ್ಸ್ ನಲ್ಲಿರುವ ಕಾಂಗ್ರೆಸ್ ಕಚೇರಿಯ ಮೇಲಿನ ಬಾಡಿಗೆ ವಿಚಾರದಲ್ಲಿ ಎನ್ಎ ತನಿಖೆ ನಡೆಸಲು ಬಂದಿದ್ದರು.

ಕಾಂಗ್ರೆಸ್‌ ಕಚೇರಿ ಜಾಗ ಪರಿಶೀಲನೆ: ಕಾಂಗ್ರೆಸ್ ಕಚೇರಿ ಇರುವ ಜಾಗವನ್ನ ಮಳಿಗೆಯನ್ನು ಯಾವಾಗ ಬಾಡಿಗೆಗೆ ಪಡೆದಿದ್ದೀರಿ ಎಂಬ ಮಾಹಿತಿ ಕೇಳಿದರು. 2015ರಲ್ಲಿ 10 ಲಕ್ಷ ರೂ ಹಣ ನೀಡಿ ಎಂಟು ವರ್ಷಗಳ ಕಾಲ ಈ ಮಳಿಗೆಯನ್ನು ಹಾಸಿಮ್ ಎಂಬುವವರಿಂದ ಬಾಡಿಗೆಗೆ ಪಡೆದಿದ್ದವು. ಹಾಸಿಮ್ ಕುಟುಂಬಕ್ಕೂ ನಮಗೂ ಬಾಡಿಗೆದಾರರು ಮತ್ತು ಮಾಲೀಕರ ಸಂಬಂಧ ಮಾತ್ರ ಇದೆ.ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಈ ಹಾಸಿಮ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆದರೂ ಬಿಜೆಪಿಯವರು ನಮಗೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಹಾಸಿಮ್ ಗೂ ಸಂಬಂಧ ಇರಬಹುದು ಅವರನ್ನೇ ಕೇಳಿ ಎಂದು ಖಾರವಾಗಿ ನುಡಿದರು.

ಗುಜರಾತ್‌ ಚುನಾವಣೆಯಲ್ಲಿ ಹಣ ಬಲದಿಂದ ಬಿಜೆಪಿಗೆ ಬಹುಮತ: ಕಿಮ್ಮನೆ ರತ್ನಾಕರ

ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ:  ಅಲ್ಲದೆ ತೀರ್ಥಹಳ್ಳಿಯಲ್ಲಿ ನಡೆದ ಕೋಮುಗಲಭೆಯಲ್ಲಿ  ಆರಗ ಜ್ಞಾನೇಂದ್ರ ಕೂಡ ಆರೋಪಿಯಾಗಿದ್ದರು ಎಂದು ಆರೋಪಿಸಿದ್ದಾರೆ. ಹಾಗಾಗಿ ಮತ್ತೊಂದು ಕೋಮುಗಲಭೆ ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೋ ಏನೋ? ಕೆಲವು ಮಾಧ್ಯಮಗಳಲ್ಲಿ ಕಿಮ್ಮನೆ ಮನೆಯ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿರುವುದು ಸರಿಯಲ್ಲ. ನಮ್ಮ ಮನೆ ಮೇಲೆ ದಾಳಿ ನಡೆದರೆ ರೂ.10,000 ಸಿಗಬಹುದಷ್ಟೇ. ಇಡಿ ಯವರು ಬಂದರೆ ನಮಗೆ ಕೊಟ್ಟು ಹೋಗಬೇಕು ತೆಗೆದುಕೊಂಡು ಹೋಗಲು ಏನೂ ಇಲ್ಲ. ಫ್ರಿಡ್ಜ್ , ಸೋಫಾ ತೆಗೆದುಕೊಂಡು ಹೋಗಬೇಕಷ್ಟೇ ಬೇರೇನು ಸಿಗಲ್ಲ. ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಕಿಮ್ಮನೆಯವರ ಕಾಂಗ್ರೆಸ್ ಕಚೇರಿ ಮೇಲಿನ ದಾಳಿ ರಾಜಕೀಯವಾಗಿ ಕುತೂಹಲ ಕೆರಳಿಸಿದೆ

Follow Us:
Download App:
  • android
  • ios