Shivamogga: ಸಿಗಂದೂರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆ

ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಐವರು ಹೊಳೆ ಊಟಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೆಪ್ಪದ ಸಮತೋಲನ ತಪ್ಪಿ ಮುಳುಗಿದ್ದು, ಮೂವರು ನೀರಿನಲ್ಲಿ ಕಣ್ಮರೆಯಾಗಿದ್ದಾರೆ.

Shivamogga Three youths go missing after raft sinks in Shigandur san

ಶಿವಮೊಗ್ಗ (ನ.13): ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಒಂದಾದ ಸಿಗಂದೂರಿನಲ್ಲಿ ದುರಂತ ಸಂಭವಿಸಿದೆ. ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿದ್ದಾರೆ. ಸಾಗರ ತಾಲೂಕಿನ ಪ್ರೇಕ್ಷಣೀಯ ಸ್ಥಳ ಹಾಗೂ ಚೌಡೇಶ್ವರಿ ಕ್ಷೇತ್ರವಾಗಿರುವ ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು  ನಾಪತ್ತೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹೊಳೆ ಊಟಕ್ಕೆ ಐವರು ತೆರಳಿದ್ದರು. ಮಧ್ಯಾಹ್ನ ಹೊಳೆ ಊಟ ಮುಗಿಸಿ  ಆಚೆಯ ದಡದಿಂದ ಈಚಿನ ದಡಕ್ಕೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ ಎಂದು ವರದಿಯಾಗಿದೆ.

ಸಿಗಂದೂರು ಮೂಲದ 28 ವರ್ಷದ ಚೇತನ್‌ ಜೈನ್‌, ಹುಲಿದೇವರಬನದ 30 ವರ್ಷದ ಸಂದೀಪ್‌  ಹಾಗೂ ಗಿನಿವಾರ 28 ವರ್ಷದ ರಾಜು ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಮೂವರಿಗೂ ಈಜು ಬರುತ್ತಿರಲಿಲ್ಲ. ಇವರ ಜೊತೆಗಿದ್ದ ವಿನಯ್‌ ಹಾಗೂ ಯಶವಂತ್‌ ಈಜಿ ದಡ ಸೇರಿದ್ದಾರೆ. ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಹುಡುಗರಿಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

6 ಸಾವಿರ ಟ್ರಾಫಿಕ್‌ ಉಲ್ಲಂಘನೆ, ಡೆಲಿವರಿ ಬಾಯ್ಸ್‌ಗೆ 30.57 ಲಕ್ಷ ದಂಡ ವಿಧಿಸಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌!

Bengaluru: ಬಿಸಿಡಿ ಗ್ರೂಪ್‌ನಿಂದ 500 ಕೋಟಿ ವೆಚ್ಚದಲ್ಲಿ ಟೌನ್‌ಶಿಪ್‌, ಎಲ್ಲಾ 900 ಫ್ಲ್ಯಾಟ್‌ ಭೋಗ್ಯಕ್ಕೆ ಪಡೆದ ಫಾಕ್ಸ್‌ಕಾನ್‌!

Latest Videos
Follow Us:
Download App:
  • android
  • ios