6 ಸಾವಿರ ಟ್ರಾಫಿಕ್‌ ಉಲ್ಲಂಘನೆ, ಡೆಲಿವರಿ ಬಾಯ್ಸ್‌ಗೆ 30.57 ಲಕ್ಷ ದಂಡ ವಿಧಿಸಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌!

ಬೆಂಗಳೂರು ಟ್ರಾಫಿಕ್ ಪೊಲೀಸರು ಇ-ಕಾಮರ್ಸ್ ಡೆಲಿವರಿ ಸಿಬ್ಬಂದಿಗಳ ವಿರುದ್ಧ ಸುಮಾರು 6,000 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹೆಲ್ಮೆಟ್ ರಹಿತ ರೈಡಿಂಗ್, ನೋ ಪಾರ್ಕಿಂಗ್ ಮತ್ತು ನೋ ಎಂಟ್ರಿ ಇವುಗಳಲ್ಲಿ ಪ್ರಮುಖ ಉಲ್ಲಂಘನೆಗಳಾಗಿವೆ. ಒಟ್ಟು 30.57 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ.

6k traffic violations Bengaluru Police fines ecommerce delivery personnel of Rs 30 57 lakh san

ಬೆಂಗಳೂರು (ನ.13): ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಸೋಮವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇ-ಕಾಮರ್ಸ್ ಡೆಲಿವರಿ ಸಿಬ್ಬಂದಿಗಳ ವಿರುದ್ಧ ಸುಮಾರು 6,000 ಪ್ರಕರಣಗಳನ್ನು ದಾಖಲಿಸಿದ್ದಾರೆ. ನೋ ಪಾರ್ಕಿಂಗ್, ಹೆಲ್ಮೆಟ್ ರಹಿತ ರೈಡಿಂಗ್, ನೋ ಎಂಟ್ರಿ ಸೇರಿದಂತೆ 12ಕ್ಕೂ ಹೆಚ್ಚು ವಿಧದ 5,979 ಉಲ್ಲಂಘನೆಗಳಿಗಾಗಿ ಪೊಲೀಸರು 30.57 ಲಕ್ಷ ರೂ. ದಂಡವನ್ನೂ ಸಂಗ್ರಹಿಸಿದ್ದಾರೆ. ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೇ ಇರುವ ಪ್ರಕರಣದಲ್ಲಿ ಅತಿ ಹೆಚ್ಚು ಸಂಖ್ಯೆಯ ಉಲ್ಲಂಘನೆಗಳು (2,304) ದಾಖಲಾಗಿದೆ.

ನಂತರ 1,260 ಬಳಕೆದಾರರು ತಮ್ಮ ವಾಹನಗಳನ್ನು ನೋ ಪಾರ್ಕಿಂಗ್ ವಲಯಗಳಲ್ಲಿ ನಿಲ್ಲಿಸಿದ್ದಾರೆ. ಟ್ರಾಫಿಕ್ ಪೊಲೀಸರು 671 ಚಾಲಕರನ್ನು ಪ್ರವೇಶ ನಿಷಿದ್ಧ ವಲಯಗಳಲ್ಲಿ ಬಂದಿದ್ದಕ್ಕಾಗಿ ಕೇಸ್‌ ದಾಖಲಿಸಿದ್ದಾರೆ. 523 ಚಾಲಕರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಕನಿಷ್ಠ 281 ಮಂದಿಯನ್ನು ಬುಕ್ ಮಾಡಲಾಗಿದೆ.

Bengaluru: ಬಿಸಿಡಿ ಗ್ರೂಪ್‌ನಿಂದ 500 ಕೋಟಿ ವೆಚ್ಚದಲ್ಲಿ ಟೌನ್‌ಶಿಪ್‌, ಎಲ್ಲಾ 900 ಫ್ಲ್ಯಾಟ್‌ ಭೋಗ್ಯಕ್ಕೆ ಪಡೆದ ಫಾಕ್ಸ್‌ಕಾನ್‌!

ಶಾರ್ಟ್ ಡೆಲಿವರಿ ಟ್ರಿಪ್‌ಗಳಿಗೆ ಬಳಸಲಾಗುವ 30 ಸಿಸಿಗಿಂತ ಕಡಿಮೆ ಇ-ಬೈಕ್‌ಗಳನ್ನು ಫುಟ್‌ಪಾತ್‌ನಲ್ಲಿ ಸವಾರಿ ಮಾಡಿದ್ದಕ್ಕಾಗಿ, ಫುಟ್‌ಪಾತ್ ಪಾರ್ಕಿಂಗ್, ನೋ ಎಂಟ್ರಿ, ಒನ್‌ವೇಅಲ್ಲಿ ಸವಾರಿ ಮಾಡಿದ್ದಕ್ಕಾಗಿ, ಟ್ರಾಫಿಕ್ ಸಿಗ್ನಲ್ ಜಂಪಿಂಗ್‌ಗಾಗಿ ಬುಕ್ ಮಾಡಲಾಗಿದೆ. 30 ಸಿಸಿಗಿಂತ ಕಡಿಮೆ ಇರುವ ಇ ಬೈಕ್‌ ಮೇಲೆ ಹೆಲ್ಮೆಂಟ್‌ ಬಳಕೆ ಅಥವಾ ದಾಖಲೆ ಇಲ್ಲದಿರುವ ಕೇಸ್‌ ಹಾಕಲಾಗಿಲ್ಲ. ಮೋಟಾರು ವಾಹನಗಳ ಕಾಯಿದೆ, 1988 ರ ವ್ಯಾಪ್ತಿಯ ಪ್ರಕಾರ ಈ ಬೈಕ್‌ಗಳಿಗೆ ಇವುಗಳ ಕೇಸ್‌ ಹಾಕಲು ಬರೋದಿಲ್ಲ ಎಂದು  BTP ಹೇಳಿದೆ.

ನಾಲ್ಕು ವರ್ಷದ ಹಿಂದೆ 3 ರೂಪಾಯಿ ಇದ್ದ ಷೇರಿನ ಬೆಲೆ ಇಂದು 1,412 ರೂಪಾಯಿ!

Latest Videos
Follow Us:
Download App:
  • android
  • ios