ವ್ಯಕ್ತಿಯೋರ್ವರು ಲಕ್ಷಾಂತರ ರು ಕಳೆದುಕೊಂಡಿದ್ದಾರೆ. ಕೌನ್‌ ಬನೆಗಾ ಕರೋಡ್ ಪತಿ ಹೆಸರಿನಲ್ಲಿ ನಡೆದ ವಂಚನೆಯಲ್ಲಿ ತೀರ್ಥಹಳ್ಳಿಯ ವ್ಯಕ್ತಿ ಹಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗ (ಫೆ.22): ಕೌನ್ ಬನೇಗಾ ಕರೋಡ್ ಪತಿಯಿಂದ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿ 1.43 ಲಕ್ಷಗಳನ್ನ ದೋಚಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೀರ್ಥಹಳ್ಳಿಯ ಅನಂತ್ ಕುಮಾರ್ ಎಂಬುವರಿಗೆ ಅಪರಿಚಿತ ವ್ಯಕ್ತಿಯೋರ್ವರು ಕೆಬಿಸಿಯಿಂದ ನಿಮಗೆ ಲಕ್ಕಿ ಡ್ರಾ ಬಂದಿದೆ. 5 ಲಕ್ಷ ರು ಬಂಪರ್ ಬಹುಮಾನ ದೊರೆತಿದೆ. ಈ ಹಣ ಪಡೆಯಲು ಕೆಲವು ಚಾರ್ಜಸ್ ಕಟ್ಟಬೇಕೆಂದು ಕರೆ ಮಾಡಿದ್ದಾರೆ. 

ಉದ್ಯಮಿಗಳಿಂದ ಸ್ನೇಹಿತೆ ಮನೆಗೇ ಕನ್ನ: ಇಬ್ಬರ ಬಂಧನ .

ಇವರನ್ನ ನಂಬಿದ ಅನಂತ್ ಕುಮಾರ್ ಅವರು ಹಂತ ಹಂತವಾಗಿ ಇವರಿಗೆ ಆನ್‌ಲೈನ್ನಲ್ಲಿ ಹಣ ನೀಡಿದ್ದಾರೆ. 

ಕೊನೆಗೆ ಮೋಸ ಹೋಗಿರುವುದು ಅವರಿಗೆ ತಿಳಿದ ತಕ್ಷಣ ಅನಂತ್‌ ಕುಮಾರ್‌ ಅವರು ಸಿಇಎನ್‌ ಪೊಲೀಸ್ ಠಾನೆಗೆ ದೂರು ನೀಡಿದ್ದಾರೆ.