Asianet Suvarna News Asianet Suvarna News

ವೈದ್ಯಾಧಿಕಾರಿ ವಿರುದ್ಧ ಜಾತಿ ನಿಂದನೆ ದೂರು

ಸಾಗರದ ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ್‌ ಬೋಸ್ಲೆ ವಿರುದ್ಧ ಗುರುವಾರ ಪೇಟೆ ಪೊಲೀಸ್‌ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಡಾ. ಪ್ರಕಾಶ್‌ ಬೋಸ್ಲೆಯವರ ವಿರುದ್ಧ ತಾಲೂಕಿನ ಹುಲಿಮನೆ ವಾಸಿ ಚಂದ್ರಶೇಖರ್‌ ಎಂಬುವವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

Shivamogga Heath Officer accused of Caste Abuse
Author
Bangalore, First Published Jul 19, 2019, 1:44 PM IST
  • Facebook
  • Twitter
  • Whatsapp

ಶಿವಮೊಗ್ಗ(ಜು.19): ಸಾಗರದ ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ್‌ ಬೋಸ್ಲೆ ವಿರುದ್ಧ ಗುರುವಾರ ಪೇಟೆ ಪೊಲೀಸ್‌ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಡಾ. ಪ್ರಕಾಶ್‌ ಬೋಸ್ಲೆಯವರ ವಿರುದ್ಧ ತಾಲೂಕಿನ ಹುಲಿಮನೆ ವಾಸಿ ಚಂದ್ರಶೇಖರ್‌ ಎಂಬುವವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ನಾನು ಜು.16ರಂದು ಸಂಜೆ ಜೆ.ಸಿ.ರಸ್ತೆಯಲ್ಲಿರುವ ಡಾ. ಪ್ರಕಾಶ್‌ ಬೋಸ್ಲೆ ನಡೆಸುತ್ತಿರುವ ಖಾಸಗಿ ಕ್ಲಿನಿಕ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಪ್ರಕಾಶ್‌ ಬೋಸ್ಲೆ ಜಾತಿ ನಿಂದನೆ ಮಾಡಿದ್ದಾಗಿ ಆರೋಪಿಸಲಾಗಿದೆ.

'420 ಕುರುಬ' ಎಂದು ಜಾತಿ ನಿಂದನೆ ಮಾಡಿದ ಬಿಜೆಪಿ ಮಾಜಿ ಶಾಸಕ

ಬೋಸ್ಲೆಯವರು ತಾಲೂಕು ಪಂಚಾಯಿತಿ ಅಧ್ಯಕ್ಷರ ಜೊತೆ ಸೇರಿ ಉಪವಿಭಾಗಾಧಿಕಾರಿಗಳ ಕಚೇರಿ ಹತ್ತಿರ ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತೀಯಾ ಎಂದು ಬೈದು, ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios