Asianet Suvarna News Asianet Suvarna News

ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ಶ್ರೀರಾಮ ಆಕಸ್ಮಿಕ ಸಾವು

ಹೋರಿ ಬೆದರಿಸುವ ಹಬ್ಬದಲ್ಲಿ ಗಮನ ಸೆಳೆದು, ಹೆಸರು ಮಾಡಿ ಸಾಕಷ್ಟುಬಹುಮಾನ ಪಡೆದಿದ್ದ ಮುತ್ತಿಗೆ ಗ್ರಾಮದ ಶ್ರೀರಾಮ ಹೋರಿ ಗುರುವಾರ ಆಕಸ್ಮಿಕವಾಗಿ ಮರಣ ಹೊಂದಿದೆ. ಶ್ರೀರಾಮ ಬಂಗಾರದ ಚೈನುಗಳು, ಟಿವಿ, 10ಕ್ಕೂ ಹೆಚ್ಚು ರೆಫ್ರೀಜಿರೇಟರ್‌, ಬೀರುಗಳು, ಲಕ್ಷಾಂತರ ರು. ನಗದು ಹಣ ಸೇರಿ ಸಾಕಷ್ಟುಬಹುಮಾನ ಗಳಿಸಿ ಮನೆಯವರ ಪ್ರೀತಿ ಯೊಂದಿಗೆ ಗ್ರಾಮಸ್ಥರ ಪ್ರೀತಿಗಳಿಸಿತ್ತು.

Shivamogga Famous Bull Sri Rama dies
Author
Bangalore, First Published Jul 20, 2019, 10:33 AM IST

ಶಿವಮೊಗ್ಗ(ಜು.20): ಹೋರಿ ಬೆದರಿಸುವ ಹಬ್ಬದಲ್ಲಿ ಗಮನ ಸೆಳೆದು, ಹೆಸರು ಮಾಡಿ ಸಾಕಷ್ಟುಬಹುಮಾನ ಪಡೆದಿದ್ದ ಶಿರಾಳಕೊಪ್ಪ ಮುತ್ತಿಗೆ ಗ್ರಾಮದ ಶ್ರೀರಾಮ ಹೋರಿ ಗುರುವಾರ ಆಕಸ್ಮಿಕವಾಗಿ ಮರಣ ಹೊಂದಿ ಹೋರಿ ಪ್ರಿಯರಿಗೆ ದುಃಖ ಉಂಟು ಮಾಡಿದೆ.

2004ರಿಂದ ಪುಟ್ಟಕರುವಿದ್ದಾಗಲೇ ಹೋರಿ ಬೆದರಿಸುವ ಹಬ್ಬದಲ್ಲಿ ಓಡುತ್ತಿದ್ದ ಶ್ರೀರಾಮ ದಿನಕಳೆದಂತೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿಯೂ ಹೆಸರು ಮಾಡಿತ್ತು. ನಂತರ ಹಲವಾರು ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬಗಳಲ್ಲಿ ಭಾಗವಹಿಸಿ ಪ್ರಸಿದ್ಧಿ ಪಡೆದಿದ್ದ ಈ ಹೋರಿ ಸಾಕಷ್ಟುಬಹುಮಾನ ಗಳಿಸಿತ್ತು.

ಗ್ರಾಮಸ್ಥರ ಪ್ರೀತಿ ಗಳಿಸಿದ್ದ ಶ್ರೀರಾಮ:

ಶ್ರೀರಾಮ ಬಂಗಾರದ ಚೈನುಗಳು, ಟಿವಿ, 10ಕ್ಕೂ ಹೆಚ್ಚು ರೆಫ್ರೀಜಿರೇಟರ್‌, ಬೀರುಗಳು, ಲಕ್ಷಾಂತರ ರು. ನಗದು ಹಣ ಸೇರಿ ಸಾಕಷ್ಟುಬಹುಮಾನ ಗಳಿಸಿ ಮನೆಯವರ ಪ್ರೀತಿ ಯೊಂದಿಗೆ ಗ್ರಾಮಸ್ಥರ ಪ್ರೀತಿಗಳಿಸಿತ್ತು.

ಎತ್ತಿಗೆ 25ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಗುರುವಾರ ಉತ್ತಮ ಹದವಿದ್ದಕಾರಣ ಬೆಳಗ್ಗೆಯಿಂದಲೇ ಜಮೀನಿನಲ್ಲಿ ಸಾಕಷ್ಟುಕೆಲಸಕಾರ್ಯ ಮಾಡಿ ಮಧ್ಯಾಹ್ನ ನೀರು ಕುಡಿಯಲು ಬಿಟ್ಟಾಗ ನೀರನ್ನು ಕುಡಿಯದೇ ಸ್ಥಳದಲ್ಲಿಯೇ ಮೃತಪಟ್ಟಿದೆ.

ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ:

ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸೇರಿ ಶ್ರೀರಾಮನಿಗೆ ಮನುಷ್ಯರು ಮೃತಪಟ್ಟಾಗ ಮಾಡುವ ಕ್ರಿಯಾ ವಿಧಿಯನ್ನು ನೆರವೇರಿಸಿ ನಂತರ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿ ಹೋರಿಯ ಮಾಲೀಕ ದೊಡ್ಡಮನೆ ರಾಜಶೇಖರಪ್ಪ ಅವರ ಮನೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು.

Follow Us:
Download App:
  • android
  • ios