ಶಿವಮೊಗ್ಗ(ಆ.11): ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆ ಸಂತ್ರಸ್ತರು ಪರಿಹಾರ ಕೇಂದ್ರೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಆಹಾರ ಸೇರಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಲು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಜ್ಜಾಗಿದೆ.

ಸುರಿಯುತ್ತಿರುವ ಭಾರಿ ಮಳೆಯಿಂದ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಂತ್ರಸ್ತರು ತಂಗಿರುವ ನೆರೆ ಪರಿಹಾರ ಕೇಂದ್ರಗಳಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಪರಿಹಾರ ಕಲ್ಪಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್‌ ಪ್ರಮುಖರಿಂದ ಮತ್ತು ಎಲ್ಲಾ ಕಾರ್ಯಕರ್ತರಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ.(ನಗದು ಹಣ ಹೊರತು ಪಡಿಸಿ). ಸಂತ್ರಸ್ತರಿಗೆ ತುರ್ತಾಗಿ ಬೇಕಾಗಿರುವ ಅಗತ್ಯ ವಸ್ತುಗಳನ್ನು ನೀಡಲು ಇಚ್ಚಿಸುವವರು ಆ.11ರಂದು ಸಂಜೆ 4 ಗಂಟೆ ಒಳಾಗಾಗಿ ಶಿವಮೊಗ್ಗದಲ್ಲಿರುವ ಕಾಂಗ್ರೆಸ್‌ ಭವನಕ್ಕೆ ತಲುಪಿಸುವಂತೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಮನವಿ ಮಾಡಿದ್ದಾರೆ.

ಮಲೆನಾಡಲ್ಲಿ ಭೂಕುಸಿತ ಹೆಚ್ಚಳ: ಕೊಡಗು ಚಿಕ್ಕಮಗಳೂರಲ್ಲಿ ಭಾರೀ ಸಮಸ್ಯೆ!