ಶಿವಮೊಗ್ಗ: ಜಿಲ್ಲಾಡಳಿತದಿಂದ 14 ನೆರೆ ಪರಿಹಾರ ಕೇಂದ್ರ

ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಉಂಟಾದ ಅನಾಹುತ, ಪರಿಸ್ಥಿತಿ ನಿಭಾಯಿಸಲು ಶಿವಮೊಗ್ಗದಲ್ಲಿ 14 ನೆರೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ವಮೊಗ್ಗ ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರ ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

Shivamogga District Administration opens 14 Flood relief center

ಶಿವಮೊಗ್ಗ(ಆ.10): ಜಿಲ್ಲೆಯ ಹಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟು 14 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರ ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಹಾರ ಕೇಂದ್ರ ವಿವರ: ನಗರದ ಇಮಾಮ್‌ ಬಾಡ, ಸೀಗೆಹಟ್ಟಿ, ರಾಮಣ್ಣ ಶ್ರೇಷ್ಟಿಪಾರ್ಕ್, ಗುಡ್ಡೇಕಲ್‌, ಪುಟ್ಟಪ್ಪ ಕ್ಯಾಂಪ್‌, ಟ್ಯಾಂಕ್‌ ಮೊಹಲ್ಲ ಮತ್ತು ವಿದ್ಯಾನಗರ, ಭದ್ರಾವತಿ ತಾಲೂಕಿನ ಕವಲಗುಂದಿ, ತೀರ್ಥಹಳ್ಳಿಯ ರಾಮೇಶ್ವರ ಸಭಾಭವನ, ಸೊರಬದ ಹಿರೇಕಾಂಶಿ ಗ್ರಾಮ, ಶಕುನವಳ್ಳಿ, ಜಡೆ, ಹಣಜಿ, ಮಲ್ಲಾಪುರ ಗ್ರಾಮ ಹಾಗೂ ಮೂಡಿಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ ಊಟ, ಉಪಾಹಾರ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪ್ರತಿ ತಾಲೂಕಿಗೆ 1 ಕೋಟಿ ರೂಪಾಯಿ:

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಎರಡು ಜೀವ ಹಾನಿ ಸಂಭವಿಸಿರುವುದು ದೃಢಪಟ್ಟಿದ್ದು, ತಲಾ 5ಲಕ್ಷ ರು. ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7692 ಹೆಕ್ಟೇರ್‌ ಕೃಷಿ ಪ್ರದೇಶ ಹಾಗೂ 1106 ಹೆಕ್ಟೇರ್‌ ತೋಟಗಾರಿಕಾ ಪ್ರದೇಶ ಸೇರಿದಂತೆ ಒಟ್ಟು 8798 ಹೆಕ್ಟೇರ್‌ ಪ್ರದೇಶ ಜಲಾವೃತವಾಗಿದೆ. ಹಾಗೂ ಜಿಲ್ಲೆಯಲ್ಲಿ ಒಟ್ಟು 10 ಜಾನುವಾರುಗಳು ಮೃತಪಟ್ಟಿದ್ದು, 404 ಮನೆಗಳಿಗೆ ಭಾಗಶಃ ಹಾನಿಯುಂಟಾಗಿವೆ. ತುರ್ತು ಪರಿಹಾರ ಕಾರ್ಯಗಳಿಗೆ ಪ್ರತಿ ತಾಲೂಕಿಗೆ ತಲಾ ಒಂದು ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಧಾರಕಾರ ಮಳೆ: ಶಿಕಾರಿಪುರ​-ಆನಂದಪುರ ರಸ್ತೆ ಬಂದ್‌

ಪರ್ಯಾಯ ಮಾರ್ಗ: ಹೊಸನಗರ ತಾಲೂಕಿನಲ್ಲಿ ಭೂಕುಸಿತದಿಂದಾಗಿ ಎರಡು ರಸ್ತೆಗಳು ಹಾನಿಯಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಕಾರಣಗಿರಿ ಗಣಪತಿ ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು-ರಾಣೇಬೆನ್ನೂರು ರಸ್ತೆ ಮಾರ್ಗ ಸಂಚಾರ ನಿರ್ಬಂಧಿಸಿ, ಶಿವಮೊಗ್ಗ ಕಡೆಯಿಂದ ಬರುವ ಭಾರಿ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ ಮಾರ್ಗವಾಗಿ ಸಂಚರಿಸಲು ಸೂಚನೆ ನೀಡಿಲಾಗಿದೆ. ಇದೇ ರೀತಿ ನಾಗೋಡು ಗ್ರಾಮ ರಾ.ಹೆ ಸಂಚಾರ ನಿರ್ಬಂಧಿಸಲಾಗಿದ್ದು ಪರ್ಯಾಯವಾಗಿ ನಗರ-ಹುಲಿಕಲ್‌ಘಾಟ್‌-ಹೊಸಂಗಡಿ-ಸಿದ್ದಾಪುರ ಮುಖಾಂತರ ಸಂಚರಿಸುವಂತೆ ತಿಳಿಸಿದ್ದಾರೆ.

ಜಲಾವೃತವಾದ ಪ್ರದೇಶ

ಶಿವಮೊಗ್ಗ 361 ಹೆಕ್ಕೇರ್‌

ಭದ್ರಾವತಿ 109

ತೀರ್ಥಹಳ್ಳಿ 430

ಸಾಗರ 2935

ಹೊಸನಗರ 532

ಶಿಕಾರಿಪುರ 237

ಸೊರಬ 4194

Latest Videos
Follow Us:
Download App:
  • android
  • ios