ಶಿವಮೊಗ್ಗ(ಜು.25): ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿ ಅವಧಿಪೂರ್ಣಗೊಳಿಸಲು ಯಾವುದೇ ವಿಘ್ನಗಳು ಬರಬಾರದು. ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಪ್ರಾರ್ಥಿಸಿ ಪಟ್ಟಣದ ಕಾಳಿಕಾಂಬಾ ದೇವಾಲಯದಲ್ಲಿ ಶಿರಾಳಕೊಪ್ಪ ಬಿಜೆಪಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನಿವೇದಿತಾ ರಾಜು ಮಾತನಾಡಿ, ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಲ್ಯಾಣ ಕರ್ನಾಟಕ ಮಾಡುವ ಶಕ್ತಿಯನ್ನು ದೇವಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಾಗಿ .200 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಆದರೆ ಹಣ ನೀರಾವರಿಗೆ ಸಾಕಾಗುವುದಿಲ್ಲ. ಆದ್ದರಿಂದ ಯಡಿಯೂರಪ್ಪ ಅವರು ನೀರಾವರಿಗೆ ಹೆಚ್ಚು ಹಣ ನೀಡುವ ಜೊತೆಗೆ ಕೇಂದ್ರದ ಸಹಾಯ ಪಡೆದು ಆದಷ್ಟುಬೇಗ ನೀರಾವರಿ ಪೂರೈಸಲಿ ಎಂಬ ಇಚ್ಛೆ ನಮ್ಮದಾಗಿದೆ ಎಂದರು.

BSYಗೆ ಮತ್ತೆ ಸಿಎಂ ಪಟ್ಟ : ಶಿವಮೊಗ್ಗದಲ್ಲಿ ವಿಶೇಷ ಪೂಜೆ

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅಭಿವೃದ್ಧಿ ಕಾರ್ಯದಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಕರ್ನಾಟಕ ಹೆಚ್ಚಿನ ಅಭಿವೃದ್ಧಿ ಹೊಂದಿ ದೇಶದಲ್ಲಿ ಮೊದಲನೇ ಸ್ಥಾನ ಪಡೆಯಲಿ. ಜೊತೆಗೆ ಜಿಲ್ಲೆ ಮತ್ತು ಶಿಕಾರಿಪುರ ತಾಲೂಕನ್ನು ಮಾದರಿ ತಾಲೂಕು ಮಾಡಬೇಕು ಎಂಬ ಅವರ ಅಪೇಕ್ಷೆ ಈಡೇರಲಿ ಎಂದು ಪ್ರಾರ್ಥಿಸಿ, ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖರಾದ ಆಶಾ ಮಂಜುನಾಥ, ಜಾನ್ಹವಿ ಕೊಟ್ರೇಶ್‌, ವಿಜಯಾ ಗಂಗಾಧರ್‌, ನೇತ್ರಾ ಮಹೇಂದ್ರ, ಯಶೋಧಮ್ಮ, ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ್‌, ಕಾರ್ಯದರ್ಶಿ ಪುಟ್ಟಣ್ಣ ಸೇರಿ ಮಹಲವಾರು ಪ್ರಮುಖರು ಹಾಜರಿದ್ದರು.