Asianet Suvarna News Asianet Suvarna News

ಶಿವಮೊಗ್ಗ ಅಡಿಕೆ ಬೆಳೆಗಾರ ಕುಟುಂಬದ ಸಜೀವ ದಹನ: ಬೆಂಕಿ ಆಕಸ್ಮಿಕವಲ್ಲ, ಇದೊಂದು ಕೌಟುಂಬಿಕ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳಗಾರ ಕುಟುಂಬದ ಸಜೀವ ದಹನ ಪ್ರಕರಣವು ಬೆಂಕಿ ಆಕಸ್ಮಿಕವಲ್ಲ, ಇದೊಂದು ಆತ್ಮಹತ್ಯೆ ಘಟನೆ ಎಂದು ತಿಳಿದುಬಂದಿದೆ.

Shivamogga Arecanut farmer family burnt alive this is not fire accident it was family self death sat
Author
First Published Oct 8, 2023, 1:42 PM IST

ಶಿವಮೊಗ್ಗ  (ಅ.08): ಶಿವಮೊಗ್ಗ ತೀರ್ಥಳ್ಳಿ ತಾಲೂಕಿನ ಅರಳಸುರಳ್ಳಿ ಸಮೀಪದ ಗಣಪತಿ ಕಟ್ಟೆಯ ಅಡಿಕೆ ಬೆಳಗಾರ ರಾಘವೇಂದ್ರ ಕುಟುಂಬದ ಮೂವರು ಸಜೀವ ದಹನವಾದ ಪ್ರಕರಣವು ಆಕಸ್ಮಿಕ ಬೆಂಕಿ ಅವಘಡದಿಂದ ಸಂಭವಿಸಿಲ್ಲ. ಇದು ಕುಟುಂಬದ ಆತ್ಮಹತ್ಯೆ ಪ್ರಕರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಅರಳಸುರಳ್ಳಿ ಗ್ರಾಮದಲ್ಲಿ ಮೂವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮೃತ ರಾಘವೇಂದ್ರ ಸಹೋದರ ರಾಮಕೃಷ್ಣ ಮಾತನಾಡಿದ್ದು, ಅಣ್ಣನ ಕುಟುಂಬದ ಸಾವಿನ ಪ್ರಕರಣ ನಮಗೆ ಅಘಾತ ತಂದಿದೆ. ವಿಷಯ ತಿಳಿದಕೊಡಲೇ ಶಿವಮೊಗ್ಗದಿಂದ ಇಲ್ಲಿಗೆ ಧಾವಿಸಿ ಬಂದಿದ್ದೇನೆ. ತೋಟ ಫಸಲು ಚೆನ್ನಾಗಿ ಇದ್ದರೂ ಆರ್ಥಿಕವಾಗಿ ಬ್ಯಾಂಕ್ ಇನ್ನಿತರ ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲದ ಬಾಧೆ ಅವರನ್ನು ಕಾಡಿರಬಹುದು. ಇನ್ನು ಬೇರೆ ಸಮಸ್ಯೆಯು ಅವರನ್ನು ಭಾವಿಸಿರಬಹುದು. ಆದರೆ ಈ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ನನ್ನ ಅಣ್ಣನ ಕುಟುಂಬದ ಸಾವು ತೀವ್ರ ಆಘಾತ ತಂದಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಮರಣೋತ್ತರ ಪರೀಕ್ಷೆಯ ಬಳಿಕ ಶವಶಂಸ್ಕಾರದ ಬಗ್ಗೆ ಹಿರಿಯರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಬೆಂಕಿ ಭಾನುವಾರ: ಮಂಡ್ಯದ ಮನ್‌ಮುಲ್‌, ಶಿವಮೊಗ್ಗ ಮನೆ, ಕೊಡಗು ಶಾಲಾ ಬಸ್‌ನಲ್ಲಿ ಬೆಂಕಿ- ನಾಲ್ವರ ಸಾವು

ಅಡಿಕೆ ಬೆಳಗಾರ ರಾಘವೇಂದ್ರ ಕುಟುಂಬ ಆತ್ಮಹತ್ಯೆ ಪ್ರಕರಣ. ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಘಟನ ಸ್ಥಳಕ್ಕೆ ತೀರ್ಥಹಳ್ಳಿ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಕಿಮ್ಮನೆ ಮ್ಮನೆ ರತ್ನಾಕರ್ ಭೇಟಿ ಮಾಡಿದ್ದಾರೆ. ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು, ಎಸಿ ಸತ್ಯನಾರಾಯಣ, ತಾಸಿಲ್ದಾರ್ ಮೆಸ್ಕಾಂ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಮೂವರ ಸಜೀವ ದಹನ ಪ್ರಕರಣದ ಕುರಿತಂತೆ ಶಾಸಕ ಆರಗ ಜ್ಞಾನೇಂದ್ರ  ಮಾತನಾಡಿ, ಮೃತ ರಾಘವೇಂದ್ರ ಕೆಕೋಡ್  ಕುಟುಂಬಕ್ಕೆ 10 ಎಕರೆ ಅಡಿಕೆ ತೋಟವಿದೆ. 20 ರಿಂದ 25 ವರ್ಷದಿಂದ ಈ ಕುಟುಂಬ ನನಗೆ ಪರಿಚಯ ಇದೆ. ಆರ್ಥಿಕವಾಗಿ  ಕುಟುಂಬಸ್ಥರು ಚೆನ್ನಾಗಿ  ಇದ್ದಾರೆ  ಬಡತನ ಏನು ಇಲ್ಲ. ರಾಘವೇಂದ್ರ ಅವರ  ಅಣ್ಣ ತಮ್ಮಂದಿರು ಎಲ್ಲರೂ ಹೊರಗೆ ಇದ್ದಾರೆ.. ಎಲ್ಲರೂ ಚೆನ್ನಾಗಿ ಇದ್ದಾರೆ. ರಾಘವೇಂದ್ರ  ಕುಟುಂಬ ಮಾತ್ರ ಗ್ರಾಮದಲ್ಲಿ ವಾಸವಾಗಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.

ತಾಯಿ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಡಿಜಿಟಲ್‌ ಕೋಡ್‌ ನೀಡುವಂತೆ ಆಗ್ರಹ

ಇನ್ನು ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಓರ್ವ ಮಗನ ಸ್ಥಿತಿ ಗಂಭೀರವಾಗಿದೆ. ಸಜೀವ ದಹನ ಮಾಡಿಕೊಂಡು ಕುಟುಂಬ ಆತ್ಮಹತ್ಯೆ  ಮಾಡಿಕೊಂಡಿದೆ. ಮೃತ ದೇಹ ಪತ್ತೆ ಆಗದಷ್ಟು ಸುಟ್ಟು ಕರಕಲಾಗಿವೆ. ತಮ್ಮನ್ನು ತಾವೇ ಸುಟ್ಟಿಕೊಂಡು ಆತ್ಮಹತ್ಯೆ  ಮಾಡಿಕೊಳ್ಳುವ ಪರಿಸ್ಥಿತಿ ಅವರಿಗೆ ಇಲ್ಲ. ಸದ್ಯ ಘಟನೆಗೆ ಕಾರಣ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಪೊಲೀಸ್ ತನಿಖೆಯಿಂದಲೇ ಎಲ್ಲಾ ಗೊತ್ತಾಗಬೇಕಿದೆ. ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಬಂದಿ ಪರಿಶೀಲನೆ ಮಾಡುತ್ತಿದೆ. ಇದು ದೊಡ್ಡ ಪ್ರಕರಣವಾಗಿದ್ದು, ಪೊಲೀಸರ ಸಮಗ್ರವಾದ ತನಿಖೆಯಿಂದ ಸಾವಿನ ಕಾರಣ ಗೊತ್ತಾಗಬೇಕಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Follow Us:
Download App:
  • android
  • ios