ಕಂಟೈನರ್ ಪಲ್ಟಿ : 10 ಹಸುಗಳು ಸಾವು
ಹಸುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಕಂಟೈನರ್ ಒಂದು ಪಲ್ಟಿಯಾಗಿದ್ದು ಈ ವೇಳೆ 10 ಹಸುಗಳು ಸ್ಥಳದಲ್ಲೇ ಸಾವಿಗೀಡಾಗಿವೆ.
ಶಿವಮೊಗ್ಗ (ಡಿ.11) : ತೀರ್ಥಹಳ್ಳಿಯ ಬೆಜ್ಜವಳ್ಳಿಯ ಬಳಿ ಐಶರ್ ಕಂಟೈನರ್ ವಾಹನ ಪಲ್ಟಿ ಹೊಡೆದಿದ್ದು ಕಂಟೈನರ್ ನಲ್ಲಿದ್ದ 16 ಹಸುಗಳಲ್ಲಿ 10 ಹಸುಗಳು ಮೃತಪಟ್ಟಿವೆ.
ವಾಹನದಲ್ಲಿದ್ದ ಮೂವರಲ್ಲಿ ಇಬ್ವರು ಪರಾರಿಯಾಗಿದ್ದು ಚಾಲಕನನ್ನ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಐಶರ್ ವಾಹನ ಸಂಖ್ಯೆ ಕೆಎ 17- ಬಿ 6471 ವಾಹನ ಬೆಜ್ಜವಳ್ಳಿಯ ದಾನ ಶಾಲೆಯ ಬಳಿ ಪಲ್ಟಿ ಹೊಡೆದಿದೆ.
ಕೇಂದ್ರ ಸರ್ಕಾರದ ಯೋಜನೆಗಾಗಿ ಗೋಶಾಲೆ ಒಡೆಯಲು ಸಿದ್ಧತೆ; ಬೀದಿಗೆ ಬರಲಿವೆ ನೂರಾರು ಗೋವುಗಳು ..
ಅತಿಯಾದ ವೇಗ ಹಾಗೂ ಇಬ್ಬನಿಯ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ವಾಹನದಲ್ಲಿ ಹಲಗೆ ತುಂಬಿ ಅದರೊಂದಿಗೆ ಹಸುಗಳನ್ನಿರಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪಘಾತ ನಡೆದ ಘಟನೆಯಲ್ಲಿ ಚಾಲಕ ಸೇರಿ ಮೂವರು ಸ್ಥಳದಲ್ಲಿಯೇ ಇದ್ದರು ಎಂದು ಹೇಳಿದ್ದಾರೆ.
ಅಪಘಾತ ಸ್ಥಳಕ್ಕೆ ಜನ ಸೇರುವ ಸಂಖ್ಯೆ ಹೆಚ್ಚಾದಾಗ ಆ ವೇಳೆ ಗಾಯಗೊಂಡ ಚಾಲಕನನ್ನ ಹೊರತುಪಡಿಸಿ ಇಬ್ಬರು ಪರಾರಿಯಾಗಿದ್ದಾರೆ.