ಗೋಕಾಕ್ (ಫೆ.02): ಶಿವಲಿಂಗ ಕಣ್ಣು ತೆರೆದಿದೆ ಎಂದು ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದ ಘಟನೆ ಬೆಳಗಾವಿ ಜಿಲ್ಲ ಗೋಕಾಕ್‌ನ ಬಣಗಾರ ಗಲ್ಲಿಯಲ್ಲಿಯ ಶಂಕರಲಿಂಗ  ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದ ಕಲ್ಲಿನ ಶಿವಲಿಂಗ ಮೂರ್ತಿಯಲ್ಲಿ ಕಣ್ಣಿನಂತಿರುವ ಚಿತ್ರ ಮೂಡಿದೆ ಎಂದು ಭಕ್ತರು  ಹೇಳುತ್ತಿದ್ದಾರೆ.  

ಇದನ್ನೇ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ದೇವಸ್ಥಾನದ ಅರ್ಚಕರು  ತಿಳಿಸಿದ ಬೆನ್ನಲ್ಲೇ ಸುದ್ದಿ ಎಲ್ಲೆಡೆ ಹರಿದಾಡಿದೆ. 

ಬ್ಯಾಂಕಲ್ಲಿ ಅಡವಿಟ್ಟಿದ್ದ ಸಾವಿರ ವರ್ಷ ಹಳೆಯ ಕೋಟಿ ರು.ಮೌಲ್ಯದ ಪಚ್ಚೆ ಲಿಂಗಕ್ಕೆ ಮುಕ್ತಿ ...

ಇದನ್ನು ನೋಡಲು ಸುತ್ತಮುತ್ತಲ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. 

ಸಂಕಷ್ಟ ಚತುರ್ಥಿಯ ಚಂದ್ರೋದಯದ ಸಂದರ್ಭದಲ್ಲಿ  ಕಲ್ಲಿನ ಮೂರ್ತಿಯಲ್ಲಿ  ಕಣ್ಣು ಅರಳಿದೆ ಎಂದು ಭಕ್ತರು ಹೇಳುತ್ತಿದ್ದಾರೆ.  ಇದು ಶುಭ ಸಂದೇಶವಾಗಿದ್ದು ಇದರಿಂದ ವಿಶ್ವಕ್ಕಂಟಿದ ಮಹಾಮಾರಿ ಕೊರೋನಾ ದೂರಾಗಲಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.