ಬೆಳಗಾವಿ(ಜ.19):  ಕೇಂದ್ರ ಗೃಹ ಸಚಿವ ಅಮಿತ್ ಶಾ ಮನಸ್ಸು ಮಾಡಿದ್ರೆ ಬೆಳಗಾವಿ ಗಡಿವಿವಾದ ಬಗೆಹರಿಸಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ಕಲಂ ರದ್ದು ಮಾಡಿ ವಿವಾದ ಬಗೆಹರಿಸಿದ್ದಾರೆ. ಓರ್ವ ಶಕ್ತಿಶಾಲಿ ಗೃಹಮಂತ್ರಿ ಅಮಿತ್ ಶಾ ದಶಕದ ಕಾಶ್ಮೀರ ವಿವಾದವನ್ನ ಬಗೆಹರಿಸಿದ್ದಾರೆ. ಗಡಿವಿವಾದ ಕೇಂದ್ರ ಗೃಹ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬೆಳಗಾವಿ ಗಡಿ ವಿವಾದವನ್ನ ಬಗೆಹರಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ಕರ್ನಾಟಕ ಪೊಲೀಸರಿಗೆ ಶಿವಸೇನೆ ನಾಯಕನಿಂದ ಸವಾಲ್‌: ಬೆಳಗಾವಿಗೆ ಎಂಟ್ರಿ!?

ಭಾನುವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಗಡಿ ವಿವಾದ ಬಗ್ಗೆಯೂ ಗಮನ ಹರಿಸಬೇಕು. ಆದಷ್ಟು ಬೇಗ ಈ ವಿವಾದವನ್ನ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. 

ಸಂಜಯ್ ರಾವುತ್ ಒಂದು ದಿನದ ಬೆಳಗಾವಿ ಪ್ರವಾಸ ಮುಗಿಸಿ ಮುಂಬೈಗೆ ತೆರಳಿದ್ದಾರೆ. ಶನಿವಾರ ರಾತ್ರಿ ನಗರದ  ಮೇರಿಯಟ್ ಹೋಟೆಲ್‌ನಲ್ಲಿ ತಂಗಿದ್ದ ರಾವುತ್ ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. 

ಗಡಿವಿವಾದ: ಸುಪ್ರೀಂ ತೀರ್ಪಿಗೆ ಬದ್ಧ ಎಂದ ಸಂಜಯ ರಾವುತ್‌!

ಖಾಸಗಿ ಕಾರ್ಯಕ್ರಮ ನಿಮಿತ್ತ ಸಂಜಯ್ ರಾವುತ್ ಶನಿವಾರ ಬೆಳಗಾವಿಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದರು. ಗಡಿವಿವಾದ, ಪ್ರಚೋದನಾಕಾರಿ ಭಾಷಣ ಮಾಡದಂತೆ ರಾವುತ್ ಖಡಕ್ ಪೊಲೀಸರು ಎಚ್ಚರಿಕೆ ನೀಡಿದ್ದರು. ಪೊಲೀಸರ ಖಡಕ್ ಎಚ್ಚರಿಕೆಯಿಂದ ರಾವುತ್ ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಹೋಗಿದ್ದಾರೆ.