Asianet Suvarna News Asianet Suvarna News

ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಕ್ಕಳನ್ನು ಕಾಪಾಡಿದ ರಿಯಲ್ ಹೀರೋ ಹೂವಾಗೌಡ

ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ಕೊಚ್ಚಿಹೋಗುತ್ತಿದ್ದ 5 ಮಕ್ಕಳನ್ನು ರಕ್ಷಣೆ ಮಾಡಿದ ಹೂವಾಗೌಡ ರಿಯಲ್ ಹೀರೋ..

Shiruru landslide incident Gangavali river flood five children save the real hero Huva gowda sat
Author
First Published Jul 30, 2024, 4:18 PM IST | Last Updated Jul 30, 2024, 4:18 PM IST

ಉತ್ತರ ಕನ್ನಡ (ಜು.30): ಕರ್ನಾಟಕದಲ್ಲಿ ಸದರಿಉ ವರ್ಷದಲ್ಲಿ ಸುರಿದ ರಣಭೀಕರ ಮಳೆಯಿಂದ ಅಂಕೋಲಾದ ಬಳಿಯ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 3 ಜನರ ಮೃತದೇಹಗಳೇ ಸಿಕ್ಕಿಲ್ಲ. ಆದರೆ, ಇದೇ ಘಟನೆಯಲ್ಲಿ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಕ್ಕಳನ್ನು ಕಾಪಾಡುವ ಮೂಲಕ ಹೂವಾಗೌಡ ಉತ್ತರ ಕನ್ನಡ ಜಿಲ್ಲೆಗೆ ರಿಯಲ್ ಹೀರೋ ಆಗಿದ್ದಾನೆ. 

ಅಂಕೋಲಾದ ಶಿರೂರು ಘಟನೆಯನ್ನು ಕೆದಕಿದಷ್ಟು ವಿವಿಧ ರಣರೋಚಕ ಘಟನೆಗಳು ಹೊರಗೆ ಬರುತ್ತಿವೆ. ಶಿರೂರು ಗುಡ್ಡ ಕುಸಿತ ಹಲವರ ಸಾವು ನೋವಿಗೆ ಕಾರಣವಾಗಿದೆ. ಶಿರೂರು ಗುಡ್ಡ ಕುಸಿದ ಘಟನೆಯ ಬೆನ್ನಲ್ಲಿಯೇ ಗಂಗಾವಳಿ ನದಿಯಲ್ಲಿ ಹಠಾತ್ ದೊಡ್ಡ ಮಟ್ಟದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಗಂಗಾವಳಿ ನದಿ ಪ್ರವಾಹಕ್ಕೆ ಉಳುವರೆ ಗ್ರಾಮದ ಹಲವು ಮನೆಗಳು ನುಚ್ಚು ನೂರಾಗಿದ್ದು, ಕೆಲು ತೇಲಿಕೊಂಡು ಹೋಗಿವೆ. ಆದರೆ, ಈ ಘಟನೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಕ್ಕಳನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ತನ್ನ ಹಾಗೂ ತನ್ನ ತಮ್ಮನ ಮಕ್ಕಳು ಸೇರಿ ಒಟ್ಟು ಐವರನ್ನು ತನ್ನ ಪ್ರಾಣ ಪಣಕ್ಕಿಟ್ಟು ಹೂವಾ ಗೌಡ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ. ಈ ಮೂಲಕ ಹೂವಾಗೌಡ ಉತ್ತರ ಕನ್ನಡದ ಶಿರೂರು ಘಟನೆಯಲ್ಲಿ ರಿಯಲ್ ಹಿರೋ ಆಗಿದ್ದಾನೆ.

ಶಿರೂರು ಗುಡ್ಡ ಕುಸಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ; ಕೇರಳ ಮಾತ್ರವಲ್ಲ, ತಮಿಳುನಾಡು ಲಾರಿ ಚಾಲಕನೂ ನಾಪತ್ತೆ!

ಶಿರೂರು ಬಳಿ ಗುಡ್ಡ ಕುಸಿದು ಗಂಗಾವಳಿ ನದಿಗೆ ಬಿದ್ದ ಬೆನ್ನಲ್ಲಿಯೇ ಗಂಗಾವಳಿ ನದಿಯಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ನೀರನ್ನು ಒಮ್ಮೆಲೆ ದೂಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ರಭಸ ಹೆಚ್ಚಾಗಿ ನದಿ ಪಾತ್ರವನ್ನು ಬಿಟ್ಟು ಅಕ್ಕಪಕ್ಕದ ಗ್ರಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನೀರು ಹರಿವಿನ ಜಾಗವನ್ನು ವಿಸ್ತರಣೆ ಮಾಡಿಕೊಂಡಿದೆ. ಈ ವೇಳೆ ಶಿರೂರು ಗುಡ್ಡದ ಮುಂಭಾಗದಲ್ಲಿದ್ದ ಉಳುವರೆ ಗ್ರಾಮದ ಮೇಲೆ ಪರಿಣಾಮ ಬೀರಿದೆ. ಅಕ್ಷರಶಃ ಉಳುವರೆ ಗ್ರಾಮದ ಕೆಲವು ಮನೆಗಳು ನೀರಿನಲ್ಲಿ ತೇಲಾಡಿವೆ. ಇದ್ದಕ್ಕಿದ್ದಂತೆ ನೀರು ತಮ್ಮನ್ನು ಮುಳುಗಿಸುವ ಹಂತಕ್ಕೆ ತಲುಪುತ್ತಿದ್ದಂತೆ ಮಕ್ಕಳು ಜೀವ ರಕ್ಷಣೆಗಾಗಿ ಪರದಾಡಿದ್ದಾರೆ. ನೋಡ ನಡುತ್ತಿದ್ದಂತೆಯೇ ಐವರು ಪುಟ್ಟ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು.

ಇದನ್ನು ನೋಡಿದ ಹೂವಾ ಗೌಡ ಮಕ್ಕಳಿಗೆ ಜನ್ಮಕೊಟ್ಟ ನಾನು ಮಕ್ಕಳ ಪ್ರಾಣ ಉಳಿಸದಿದ್ದರೆ ತನ್ನ ಜೀವವಿದ್ದೂ ಏನೂ ಸಾರ್ಥಕವಿಲ್ಲ ಎಂದು ಧೈರ್ಯ ತೆಗೆದುಕೊಂಡು ಕೂಡಲೇ ಜೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೇ ಮಕ್ಕಳನ್ನು ರಕ್ಷಣೆ ಮಾಡಿ ನೀಡಿನಿಂದ ಹೊರಗೆ ತಂದಿದ್ದಾನೆ. ಇನ್ನು ಉಳುವರೆ ಗ್ರಾಮದಲ್ಲಿ ಬಹುತೇಕರು ಕೂಲಿ ಕೆಲಸ ಮಾಡುತ್ತಿದ್ದರಿಂದ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಮಕ್ಕಳು ಆಟವಾಡುತ್ತಾ ಇದ್ದರು. ಆದರೆ, ಗಂಗಾವಳಿ ನೀರು ಊರೊಳಗೆ ನುಗ್ಗಿದ್ದರಿಂದ ಆತಂಕ್ಕೆ ಒಳಗಾದ ಮಕ್ಕಳು ಕೆಲವರು ಗುಡ್ಡದ ಭಾಗಕ್ಕೆ ಓಡಿಹೋಗಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಈ ಘಟನೆಯಲ್ಲಿ ಸೆಣ್ಣಿ ಹನುಮಂತಗೌಡ ಎನ್ನುವ ವೃದ್ಧ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹೂವಾ ಗೌಡ 5 ಮಕ್ಕಳನ್ನು ಕಾಪಾಡಿದ್ದೇ ರಣರೋಚಕ: ಗಂಗಾವಳಿ ನದಿ ಇದ್ದಕ್ಕಿದ್ದಂತೆ ಗ್ರಾಮದಲ್ಲಿ ಹರಿವುದನ್ನು ಕಂಡು ಬೆಚ್ಚಿಬಿದ್ದ ಹೂವಾ ಗೌಡ ತನ್ನ ಮನೆಯಲ್ಲಿ ಚಿಕ್ಕ ಮಕ್ಕಳನ್ನು ಬಿಟ್ಟು ಬಂದಿದ್ದಾಗಿ ಅಲ್ಲಿಗೆ ಓಡಿ ಹೋಗಿದ್ದಾನೆ. ಆತ ಮನೆಯ ಬಳಿಗೆ ಹೋಗುವಷ್ಟರಲ್ಲಿ ಎದೆಯ ಎತ್ತರಕ್ಕೆ ನೀರು ಆವರಸಿಕೊಂಡಿದೆ. ಮಕ್ಕಳು ಅಪ್ಪನನ್ನು ನೋಡಿದಾಕ್ಷಣ ಜೀವ ಉಳಿಸಲು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ. ಈ ವೇಳೆ ತನ್ನ ಮಕ್ಕಳನ್ನು ಮನೆಯ ಜಗುಲಿಯ ಎತ್ತರ ಪ್ರದೇಶದಲ್ಲಿ ನಿಲ್ಲಿಸಿ, ಪಕ್ಕದಲ್ಲಿಯೇ ಇದ್ದ ತನ್ನ ಸಹೋದರನ ಮಕ್ಕಳನ್ನು ಕೂಡ ಎಳೆದುಕೊಂಡು ಬಂದಿದ್ದಾನೆ. ಆಗ ನೀರಿನ ರಭಸ ಮತ್ತಷ್ಟು ಹೆಚ್ಚಾಗಿದೆ. ಆದರೆ, ಎಲ್ಲ ಐದು ಮಕ್ಕಳನ್ನು ತಬ್ಬಿಕೊಂಡು ರಕ್ಕಸ ನೀರಿನ ಹರಿವನ್ನು ಲೆಕ್ಕಿಸದೇ ನಿಂತಿದ್ದಾನೆ. ಆಗ ದೊಡ್ಡ ದೊಡ್ಡ ಕಟ್ಟಿಗೆ, ಕಸ ಬಂದು ಅವರಿಗೆ ತರಚಿದ್ದು, ಗಾಯಗಳೂ ಆಗಿವೆ. 

ಶಿರೂರು ಗುಡ್ಡ ಕುಸಿತದ ಬೆನ್ನಲ್ಲಿಯೇ ಮತ್ತೊಂದು ಅವಘಡ; ನದಿ ನೀರಿಗೆ ಬಿದ್ದು ಯುವಕ ಸಾವು

ಇದರಿಂದ ದೃತಿಗೆಡದೇ ಮಕ್ಕಳನ್ನು ನೀರಿನಿಂದ ತಬ್ಬಿಕೊಂಡು ಒಬ್ಬರಿಗೆ ಒಬ್ಬರನ್ನು ಬಿಗಿಯಾಗಿ ಬಟ್ಟೆಯಿಂದ ಕಟ್ಟಿ ತನ್ನ ಕೈಲಾದಷ್ಟು ಬಲವಾಗಿ ಮಕ್ಕಳನ್ನು ಹಿಡಿದುಕೊಂಡು ನೀರಿನ ಹರವಿನಿಂದ ಹೊರಗೆ ಬಂದಿದ್ದಾನೆ. ಇದಾದ ನಂತರ ಮಕ್ಕಳು ಜೀವ ಉಳಿಸಿ ತಾನು ಮೂರ್ಛೆ ತಪಪ್ಪಿ ಬಿದ್ದಿದ್ದಾನೆ. ಕೂಡಲೇ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಚೇತರಿಕೆ ಕಂಡ ಮೇಲೆ ಗ್ರಾಮಕ್ಕೆ ಬಂದಿದ್ದು, ಈಗ ಹೂವಾ ಗೌಡ ಅವರ ಸಾಹಸಗಾಥೆಯ ಕಥೆ ಹೊರಗೆ ಬಂದಿದೆ.

ಗಂಗಾವಳಿ ನದಿ ನೀರು ಉಕ್ಕಿ ಹರಿದಾಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡುವಾಗ ನನ್ನ ಮಗಳ ಕೈಗೆ ಪೆಟ್ಟಾಗಿದೆ. ನಮ್ಮ ಮನೆ ಕೊಚ್ಚಿ ಹೋಗಿದ್ದು, ಜೀವನಕ್ಕೆ ಆಸರೆಯಾಗಿದ್ದ ಎಲ್ಲವನ್ನೂ ನಾವು ಕಳೆದುಕೊಂಡು ಅಕ್ಷರಶಃ ನಿರ್ಗತಿಕರಂತಾಗಿದ್ದೇವೆ. ಯಾರೋ ಮಾಡಿದ ತಪ್ಪಿನಿಂದ ನಾವು ಜೀವನ ಪರ್ಯಂತ ತೊಂದರೆ ಅನುಭವಿಸುವಂತಾಗಿದೆ.
- ಹೂವಾ ಗೌಡ, ಉಳುವರೆ ಗ್ರಾಮ

Latest Videos
Follow Us:
Download App:
  • android
  • ios