ಶಿರೂರು ಗುಡ್ಡ ಕುಸಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ; ಕೇರಳ ಮಾತ್ರವಲ್ಲ, ತಮಿಳುನಾಡು ಲಾರಿ ಚಾಲಕನೂ ನಾಪತ್ತೆ!
ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕೇರಳ ಮಾತ್ರವಲ್ಲದೇ, ತಮಿಳುನಾಡು ಚಾಲಕನೂ ನಾಪತ್ತೆ ಆಗಿದ್ದಾನೆ.
ಕಾರವಾರ, ಉತ್ತರಕನ್ನಡ (ಜು.25): ಶಿರೂರು ಗುಡ್ಡ ಕುಸಿತಕ್ಕೆ 9 ಜನರು ಬಲಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ನಂತರ ಈ ಸಂಖ್ಯೆ 10ಕ್ಕೆ ಏರಿಕೆ ಆಗಿತ್ತು. ಈಗ ಪುನಃ ಮತ್ತೊಬ್ಬ ಲಾರಿ ಚಾಲಕ ನಾಪತ್ತೆ ಆಗಿರುವ ದೂರು ಬಂದಿದ್ದು, ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡ ಕುಸಿತವಾಗಿದ್ದು, ಬರೋಬ್ಬರಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಲ್ಲಿ ರಸ್ತೆಯ ಪಕ್ಕದಲ್ಲಿದ್ದ ಟೀ ಅಂಗಡಿಯ ಮೇಲೆ ಗುಡ್ಡ ಕುಸಿದಿದ್ದು, ಒಂದೇ ಕುಟುಂಬದ 5 ಜನರು ಸಾವನ್ನಪ್ಪಿದ್ದರು. ಜೊತೆಗೆ, ಅಲ್ಲಿ ಟೀ ಕುಡಿಯಲು ಬಂದಿದ್ದ ಇಬ್ಬರು ಸೇರಿ ಒಟ್ಟು 7 ಜನರ ಮೃತದೇಹಗಳನ್ನು ಗುಡ್ಡ ಕುಸಿತದ ಸ್ಥಳದಿಂದ ಹೊರಗೆ ತೆಗೆಯಲಾಗಿದೆ. ಆದರೆ, ಇನ್ನೂ 4 ಜನರ ಮೃತದೇಹ ಹುಡುಕಲು ಪೊಲೀಸರು, ಮಿಲಿಟರಿ ಪಡೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ಅಮ್ಮನಿಗೆ ಸಾಲ ಕೊಟ್ಟು ಮಗಳನ್ನು ಪ್ರೀತಿಸಿದ; ಮದುವೆಯಾಗು ಎಂದಿದ್ದಕ್ಕೆ ಕೊಲೆ ಮಾಡಿ ಹೂತು ಹಾಕಿದನು!
ಈಗ ಶಿರೂರು ಗುಡ್ಡ ಕುಸಿತದಿಂದ ನಾಪತ್ತೆ ಆದವರ ಸಂಖ್ಯೆ ಒಟ್ಟು 11 ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ ತಮಿಳುನಾಡು ಮೂಲದ ಲಾರಿ ಡ್ರೈವರ್ ಸರವಣನ್ ಕೂಡಾ ನಾಪತ್ತೆಯಾಗಿದ್ದಾರೆ. ಸರವಣನ್ ನಾಪತ್ತೆ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ನಾಪತ್ತೆ ಆಗಿರುವ ಸರವಣನ್ ಮಾವ ಸೆಂಥಿಲ್ ಎಂಬವರಿಂದ ದೂರು ದಾಖಲು ಆಗಿದೆ. ಲಾರಿಯಲ್ಲಿ ಹೋಗುವಾಗ ಮೊಬೈಲ್ ಚಾರ್ಜ್ ಕಡಿಮೆಯಾಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು ಎಂದುಕೊಂಡು ಸುಮ್ಮನಿದ್ದರು. ಆದರೆ, ಬಹಳ ದಿನ ಕಳೆದ್ರೂ ಮೊಬೈಲ್ ಆನ್ ಆಗದಕ್ಕೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಆತನ ಜೊತೆಗೆ ಸಂಪರ್ಕದಲ್ಲಿದ್ದ ಲಾರಿ ಚಾಲಕರು ನಿಮ್ಮ ಅಳಿಯ ಶಿರೂರು ಬಳಿ ಇದ್ದಾಗ ತಮಗೆ ಕರೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಇಷ್ಟು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸರವಣ ಅವರ ಮಾವ ಶಿರೂರಿಗೆ ಬಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಶಿರೂರು ಗುಡ್ಡ ಕುಸಿತದ ಬಳಿಯೇ ಆತನ ಟ್ಯಾಂಕರ್ ಅನ್ನು ಕೂಡ ನಿಲ್ಲಿಸಿಲಾಗಿತ್ತು. ಆದರೆ, ಜಿಲ್ಲಾಡಳಿತದವರು ಈ ವಾಹನವನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಆದರೆ, ಲಾರಿ ಚಾಲಕ ಮಾತ್ರ ನಾಪತ್ತೆಯಾಗಿದ್ದು, ಆತನೂ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾಗೆ ಸಂಕಷ್ಟ; ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟೀಸ್!
ಇನ್ನು ಸರಣವನ್ ಚಾಲನೆ ಮಾಡುತ್ತಿದ್ದ ಟ್ಯಾಂಕರ್ ಲಾರಿ ಶಿರೂರು ಬಳಿ ಪತ್ತೆಯಾಗಿದೆ. ಇದನ್ನು ನೋಡಿದ ಸರವಣನ್ ಮಾವ ತಮ್ಮ ಅಳಿಯ ಇದೇ ಟ್ಯಾಂಕರ್ ಚಾಲಕನಾಗಿದ್ದು, ಗುಡ್ಡ ಕುಸಿತದ ಸ್ಥಳದಲ್ಲಿ ನಾಪತ್ತೆ ಆಗಿದ್ದಾನೆ ಎಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.