ಹಾಸನ[ಜು.21]  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಹಿಂದೆ ಮಹಿಳೆ ಕೈವಾಡವಿದೆ ಎಂದು ಮಠದ ಮಾಜಿ ಮ್ಯಾನೇಜರ್ ಸುನೀಲ್ ಆರೋಪಿಸಿದ್ದಾರೆ. ಸ್ವಾಮೀಜಿ ಅನಾರೋಗ್ಯದ ಸಂದರ್ಭದಲ್ಲಿ ಮಹಿಳೆ ಅಲ್ಲಿಯೇ ಇದ್ದರು. ಅವರಿಗೆ ಆಹಾರ ನೀಡುತ್ತಿದ್ದುದು ಅದೆ ಮಹಿಳೆ ಎಂದು ಆರೋಪಿಸಿದ್ದಾರೆ.

ರಮ್ಯಾ ಶೆಟ್ಟಿ ಎಂಬುವರು ಕಳೆದ ಒಂದುವರೆ ವರ್ಷದಿಂದ ಮಠಕ್ಕೆ ಬಂದು ಹೋಗುತ್ತಿದ್ದರು. ಅವರು ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಾನು ಅಲ್ಲಿ 9 ವರ್ಷ ಮಠದಲ್ಲಿ ಕೆಲಸ ಮಾಡಿದ್ದೇನೆ. ರಮ್ಯಾ ಅವರ ಪ್ರವೇಶ ಆದ ಮೇಲೆ ಇಡೀ ವಾತಾವರಣ ಬದಲಾಯಿತು ಎಂದು ಹೇಳಿದ್ದಾರೆ. ಸ್ವಾಮೀಜಿ ಮತ್ತು ರಮ್ಯಾ ಶೆಟ್ಟಿ ತುಂಬಾ ಸಲುಗೆಯಿಂದ ಇರುತ್ತಿದ್ದರು. ಬೇರೆ ರೀತಿಯ ಸಂಬಂಧ ಇರುವ ಅನುಮಾನವೂ ಇತ್ತು.

ಅಷ್ಟಮಠದಲ್ಲಿ ಮುಂಚಿನಿಂದಲೂ ಸೆಕ್ಸ್ ಇತ್ತು...?

ಸ್ವಾಮೀಜಿಗೆ ಕೊನೆಯದಾಗಿ ಆಹಾರ ನೀಡಿದ್ದು ಇದೇ ರಮ್ಯಾ ಶೆಟ್ಟಿ. ಹಾಗಾಗಿ ಪ್ರಕರಣದ  ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸ್ವಾಮೀಜಿ ಧರಿಸುತ್ತಿದ್ದ ಆಭರಣಗಳು ರಮ್ಯಾ ಶೆಟ್ಟಿ ಬಳಿ ಕಂಡುಬಂದಿರುವುದು ಅನುಮಾನಗಳು ಮತ್ತಷ್ಟು ದಟ್ಟವಾಗಲು ಕಾರಣವಾಗಿದೆ.ರಮ್ಯಾ ಸದ್ಯ ಪೊಲೀಸರ ವಶದಲ್ಲಿ ಇದ್ದಾರೆ.