ತುಮ​ಕೂರು (ನ.02): ಮುಖ್ಯ​ಮಂತ್ರಿ ಬಿ.ಎಸ್‌. ಯಡಿ​ಯೂ​ರಪ್ಪ ಅವರು ಈಗಾ​ಗಲೇ ಬಿಜೆಪಿ ಗೆದ್ದಿದೆ ಎಂದಿ​ದ್ದಾರೆ. ಆದರೆ ಸುಮಾರು 6 ಕೋಟಿ ರು. ಹಣ​ವನ್ನು ಶಿರಾಗೆ ತಂದಿ​ದ್ದಾರೆ ಎಂಬ ಮಾಹಿತಿ ನನಗೆ ತಿಳಿ​ದಿದೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಆರೋ​ಪಿ​ಸಿ​ದ್ದಾರೆ.

ಅವರು ಶಿರಾ​ದಲ್ಲಿ ನಡೆದ ಜೆಡಿ​ಎಸ್‌ ಸಮಾ​ವೇ​ಶ​ದಲ್ಲಿ ಮಾತ​ನಾ​ಡಿ​ದರು. ಹಣದ ತೈಲಿ ಹಿಡಿದುಕೊಂಡು ಬಂದು ಉಪಚುನಾವಣೆ ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾದ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ಈ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು ಎಂದಿ​ದ್ದಾರೆ.

ಹಳ್ಳಿಯ ಸಹೋದರಿಯರು ನಮ್ಮ ಆಯಸ್ಸು ನಿಮಗೆ ಕೊಡಲಿ ಎಂದು ಆಶೀರ್ವಾದ ಮಾಡಿದ್ದಾರೆ. ಕೇಸರಿ ಶಾಲಿನ ಪಕ್ಷ ಇಂತಹ ಸಹೋದರಿಯನ್ನು ಹಣಕೊಟ್ಟು ಕೊಂಡು ಕೊಳ್ಳಲು ಸಾಧ್ಯವಾಗುವು​ದಿಲ್ಲ ಎಂದರು.

ಬಹುಶ ಇಂತಹ ಕ್ಷೇತ್ರವನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇಲ್ಲಿ ಬೇರೆ ಕ್ಷೇತ್ರದಿಂದ ಜನರನ್ನು ಕರೆತಂದು ಬಿಜೆಪಿಯವರು ಹಣ ಹಂಚಿಸುತ್ತಿದ್ದಾರೆ. ಅದೇ ರೀತಿ ಆರ್‌.ಆರ್‌. ನಗ​ರ​ದಲ್ಲಿ ಕಾಂಗ್ರೆ​ಸ್‌​ನ​ವರು ಹಣ ಹಂಚಿ​ದ್ದಾರೆ ಎಂದರು.

ಮತದ ರೂಪದಲ್ಲಿ ಅರಿಶಿನ, ಕುಂಕುಮ ನನಗೆ ಕೊಡಿ: ಕುಸುಮಾ ..

2002ರಲ್ಲಿ ಕನಕಪುರದಲ್ಲಿ ದೇವೇಗೌಡರು ಸ್ಪರ್ಧಿಸಿದಾಗ ಕಾಂಗ್ರೆಸ್‌ ನವರು ಹೊರಗಿನಿಂದ ಜನರನ್ನು ಕರೆದುಕೊಂಡು ಬಂದು ಮತ ಹಾಕಿಸಲು ಪ್ರಯತ್ನಿಸಿದರು. ಆಗ ನಾವು ಅವರನ್ನು ಬಟ್ಟೆಬಿಚ್ಚಿಸಿದ್ವಿ. ಇದೀಗ ಶಿರಾದಲ್ಲಿ ಹಣ ಹಂಚಲು ಬಂದವರಿಗೆ ಬುದ್ಧಿ ಕಲಿಸಬೇಕು ಎಂದರು.

ದೇವೇಗೌಡರ ಮಾರ್ಗದರ್ಶನದಲ್ಲಿ ಅಂತಿಮ ಪ್ರಚಾರವನ್ನು ಮಾಡುತ್ತಿ​ದ್ದೇವೆ. 88 ನೇ ವಯಸ್ಸಿನಲ್ಲಿ ದೇವೇಗೌಡರು ಶಿರಾ ಉಪ ಚುನಾವಣೆಯಲ್ಲಿ ಸಂಪೂರ್ಣ ಉಸ್ತುವಾರಿ ವಹಿಸಿದ್ದಾರೆ ಎಂದರು.

10 ವರ್ಷದಿಂದ ಈ ತಾಲೂಕಿನ ಜನರನ್ನು ನೋಡುತ್ತಿದ್ದೇವೆ. ಇಲ್ಲಿನವರು ಹಣಕ್ಕೆ ನಮ್ಮನ್ನು ಮಾರಿಕೊಂಡಿಲ್ಲ. ಕೆ.ಆರ್‌. ಪೇಟೆ ರೀತಿ ಹಣದ ತೈಲಿ ಹಿಡಿದುಕೊಂಡು ಬಂದಿದ್ದಾರೆ ಅದು ಇಲ್ಲಿ ವ​ರ್ಕ್ ಔಚ್‌ ಆ​ಗು​ವು​ದಿಲ್ಲ ಎಂದ​ರು.

ಶಿರಾದ ಗೋಮಾ​ರ​ದ​ನ​ಹ​ಳ್ಳಿ​ಗೆ ​ಪ್ರ​ಚಾ​ರಕ್ಕೆ ಹೋದಾಗ ಅಲ್ಲಿನ ಮಹಿ​ಳೆ​ಯರು 20 ಸಾವಿರ ಮತ​ಗ​ಳಿಂದ ಗೆಲ್ಲಿ​ಸು​ವು​ದಾಗಿ ಹೇಳಿ​ದರು. ಯುವಕರು, ತಾಯಂದಿರು ಈ ಪಕ್ಷದ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಎಂದರು.

ಈ ಸರ್ಕಾರ ಮದಲೂರು ಕೆರೆಗೆ ನೀರು ಹರಿಸದಿದ್ದರೆ ಶಿಸಿರಾದಿಂದ ವಿಧಾನಸೌಧದವರೆಗೂ ಹೋರಾಟ ಮಾಡುವುದಾಗಿ ಎಚ್ಚ​ರಿ​ಸಿ​ದ​ರು.