Chamarajanagar: ಅಸ್ಪೃಶ್ಯರ ಮತ ಬೇಡವೆಂದು ಕುಮಾರಸ್ವಾಮಿ ಘೋಷಿಸಲಿ
ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಿ.ಎಂ. ಇಬ್ರಾಹಿಂ ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ಆಗುತ್ತಾರೆ. ಅವರೇನೂ ಅಸ್ಪೃಶ್ಯರೇ ಎಂಬ ಲಘು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ನನಗೆ ದಲಿತರ ಮತ ಬೇಡ ಎಂದು ಘೋಷಿಸಿ ಚುನಾವಣೆಗೆ ತೆರಳಲಿ, ಇಲ್ಲವೇ ಬಹಿರಂಗ ಕ್ಷಮೆಯಾಚಿಸಲಿ ಎಂದು ಪ್ರಗತಿಪರ ಸಂಘಟನೆ ಮುಖಂಡ ಶೇಖರಬುದ್ದ ಹೇಳಿದ್ದಾರೆ.
ಕೊಳ್ಳೇಗಾಲ (ಡಿ.02): ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಿ.ಎಂ. ಇಬ್ರಾಹಿಂ ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ಆಗುತ್ತಾರೆ. ಅವರೇನೂ ಅಸ್ಪೃಶ್ಯರೇ ಎಂಬ ಲಘು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ನನಗೆ ದಲಿತರ ಮತ ಬೇಡ ಎಂದು ಘೋಷಿಸಿ ಚುನಾವಣೆಗೆ ತೆರಳಲಿ, ಇಲ್ಲವೇ ಬಹಿರಂಗ ಕ್ಷಮೆಯಾಚಿಸಲಿ ಎಂದು ಪ್ರಗತಿಪರ ಸಂಘಟನೆ ಮುಖಂಡ ಶೇಖರಬುದ್ದ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಿನ ದಾಟಿಯಲ್ಲಿ ಕುಮಾರಸ್ವಾಮಿ ಅವರು ಅಸ್ಪೃಶ್ಯರು ಮುಖ್ಯಮಂತ್ರಿಗಳಾಗಬಾರದು ಎಂಬ ಲಘು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ನಗರಠಾಣೆಯಲ್ಲಿ ದೂರು ನೀಡಿಲಾಗಿದ್ದು ಕುಮಾರಸ್ವಾಮಿ ಅವರ ವಿರುದ್ಧ ಪಿಎಸೈ ಚೇತನ್ ಅವರು ಅಸ್ಪೃಶ್ಯತಾ ನಿಷೇದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Mandya: ಕುಮಾರಸ್ವಾಮಿ ಹೇಳಿಕೆ ಓಟಿನ ರಾಜಕಾರಣ: ಎಚ್.ಸಿ.ಮಹದೇವಪ್ಪ
ಇನ್ನಾದರೂ ಅವರು ಎಚ್ಚೆತ್ತುಕೊಂಡು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅಸ್ಪೃಶ್ಯರೆಲ್ಲ ಒಗ್ಗೂಡಿ ಜೆಡಿಎಸ್ ಪಕ್ಷಕ್ಕೆ ಹಾಗೂ ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು. ಅವರ ಹೇಳಿಕೆ ನಿಜಕ್ಕೂ ಅಸ್ಪೃಶ್ಯರಿಗೆ ಅವಮಾನವಾಗಿದೆ. ಇಂತಹ ಲಘು ಹೇಳಿಕೆ ಅವರ ಘನತೆಗೆ ತಕ್ಕದ್ದಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕೇಶವಮೂರ್ತಿ, ಜಗದೀಶ್, ಸ್ವಾಮಿ ಇನ್ನಿತರರು ಇದ್ದರು.
ಏನಿದು ಪ್ರಕರಣ?: ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಅವರನ್ನು ಮಾಧ್ಯಮದವರು ಪ್ರಶ್ನಿಸಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಮುಖ್ಯಮಂತ್ರಿ ಮಾಡುತ್ತಿರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಿ.ಎಂ. ಇಬ್ರಾಹಿಂ ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ಆಗುತ್ತಾರೆ, ಅವರೇನೂ ಅಸ್ಪೃಶ್ಯರೇ ಎಂಬ ಹೇಳಿಕೆ ನೀಡಿದ್ದರು.
Tumakuru: ಶೀಘ್ರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ಈ ಹಿನ್ನೆಲೆ ಹೇಳಿಕೆಯನ್ನು ಪ್ರಗತಿಪರ ಸಂಘಟನೆ ಖಂಡಿಸಿದ್ದು ಸಂಚಾಲಕ ಶೇಖರಬುದ್ದ ಕೊಳ್ಳೇಗಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಸ್ಪಶ್ಯರಿಗೆ ನೋವಾಗುವ ಲಘು ಪದದ ಮೂಲಕ ಅವಮಾನ ಎಸಗಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಕೋರಿದ್ದರು. ಈ ಹಿನ್ನೆಲೆ ನಗರ ಠಾಣೆಯಲ್ಲಿ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.