ಬೆಂಗಳೂರು(ಜು.25): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ನಗರದ ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಕುರಿಗಳ ಮಾರಾಟ ನಿರ್ಬಂಧಿಸಲಾಗಿದೆ.

ತ್ಯಾಗ, ಬಲಿದಾನದ ಸಂಕೇತ ಬಕ್ರೀದ್‌ ಹಬ್ಬ. ಮುಸ್ಲಿಮರು ಈ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಆದರೆ, ಈ ಬಾರಿ ಕೊರೋನಾದಿಂದ ಸಂಭ್ರಮದ ಹಬ್ಬ ಆಚರಣೆ ಸಹ ದುಸ್ತರವಾಗುತ್ತಿದೆ.

ಬೆಂಗಳೂರು: ಅಂಗಡಿಗೆ ಬೆಂಕಿ, ಮಾಲೀಕ ಸಜೀವ ದಹನ

ಬಕ್ರೀದ್‌ ಹಬ್ಬ ಒಂದು ವಾರವಿದ್ದಾಗಲೇ ನಗರದ ಈದ್ಗಾ ಮೈದಾನದಲ್ಲಿ ಕುರಿ ವ್ಯಾಪಾರ ಚುರುಕುಗೊಳ್ಳುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಕುರಿ ವ್ಯಾಪಾರಿಗಳು ಆಗಮಿಸಿ ವಹಿವಾಟು ನಡೆಸುತ್ತಾರೆ. ಆದರೆ, ಈ ವರ್ಷ ಸೋಂಕಿನ ಭೀತಿಯಿಂದ ಲಕ್ಷಾಂತರ ರು. ವಹಿವಾಟು ನಡೆಯುತ್ತಿದ್ದ ಕುರಿ ವ್ಯಾಪಾರ ಕಳೆ ಕಳೆದುಕೊಂಡಿದೆ.

ಶಿವಮೊಗ್ಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಆ.1ರಂದು ಬಕ್ರೀದ್‌ ಹಬ್ಬ ಇರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ವ್ಯಾಪಾರಿಗಳು ಶುಕ್ರವಾರವೇ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಆದರೆ, ಕೊರೋನಾ ಹಿನ್ನೆಲೆ ಕುರಿ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಹೀಗಾಗಿ ಬಾಗಲಕೋಟೆ, ಜಮಖಂಡಿ, ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ ಸೇರಿದಂಥೆ ರಾಜ್ಯದ ವಿವಿಧ ಭಾಗಗಳಿಂದ ಕುರಿ ಮಾರಾಟಕ್ಕೆ ಬಂದವರು ಈಗ ವಾಪಾಸ್‌ ಹೋಗುತ್ತಿದ್ದಾರೆ.