ಬೆಂಗಳೂರು(ಜು.25):  ಗ್ರಂಥಿಗೆ ಅಗಂಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಭವಿಸಿದ್ದು, ಅಂಗಡಿ ಮಾಲೀಕ ಸಜೀವವಾಗಿ ದಹನವಾಗಿರುವ ದಾರುಣ ಘಟನೆ ಅವೆನ್ಯೂ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮನುಕುಮಾರ್‌ (44) ಮೃತ ದುರ್ದೈವಿ.

ಕೊರೋನಾ ಸೋಂಕಿತರು ಕಂಡು ಬಂದಿದ್ದರಿಂದ ಅವೆನ್ಯೂ ರಸ್ತೆಯ ಕೆಲ ಭಾಗವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ಸ್ವ ಇಚ್ಛೆಯಿಂದ ವ್ಯಾಪಾರಸ್ಥರು ಸಂಪೂರ್ಣ ಬಂದ್‌ ಮಾಡಿದ್ದರು. ಆದರೆ, ಗ್ರಂಥಿಗೆ ಅಂಗಡಿ ತೆರೆದಿತ್ತು. ಅಲ್ಲದೆ, ಬೆಂಕಿ ಹೊತ್ತಿ ಉರಿಯುವಾಗ ಯಾವುದೇ ಚೀರಾಟ ಶಬ್ಧ ಕೇಳಿಲ್ಲ. ಆತ್ಮಹತ್ಯೆಯೂ ಅಥವಾ ಆಕಸ್ಮಿಕ ಅವಘಡವೂ ಎಂಬುದು ತನಿಖೆ ವೇಳೆ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಶುಕ್ರವಾರ ಮಧ್ಯಾಹ್ನ 1.20ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷದಲ್ಲೇ ಇಡೀ ಅಂಗಡಿ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಒಂದು ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಂಗಡಿಯೊಳಗೆ ಸುಟ್ಟಅವಶೇಷಗಳಲ್ಲೇ ಮಾಲೀಕ ಮನುಕುಮಾರ್‌ ಮೃತದೇಹ ಕೂಡ ಪತ್ತೆಯಾಗಿದೆ ಎಂದು ಹೇಳಿದ್ದಾರೆ.