ಶಿವಮೊಗ್ಗ(ಜು.23): ಎರಡು ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಿನ್ನೆ(ಗುರುವಾರ) ತಡರಾತ್ರಿ ನಗರದ ಗಾಂಧಿ ಬಜಾರ್‌ನ ಹಾರ್ನಳ್ಳಿ ಪುಕ್‍ರಾಜ್ ಜ್ಯವೆಲರ್ಸ್ ಮುಂಭಾಗ ನಡೆದಿದೆ.

ಜ್ಯುವೆಲ್ಲರಿ ಮಾಲೀಕ ಪಿ.ದಿಲೀಪ್ ಕುಮಾರ್ ಅವರಿಗೆ ಸೇರಿದ ಆಕ್ಟಿವ್ ಹೊಂಡ ಮತ್ತು ವೇಗೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರಾತ್ರಿ 2.30ರ ಸುಮಾರಿಗೆ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. 

ಯೋಗನರಸಿಂಹಸ್ವಾಮಿ ಬೆಟ್ಟದ ರಾಜಗೋಪುರ ಬಾಗಿಲಿಗೆ ಬೆಂಕಿ

ಪಿ.ದಿಲೀಪ್ ಕುಮಾರ್ ಅವರ ಮಳಿಗೆಯ ಬೋರ್ಡ್ ಕೂಡ ಸುಟ್ಟು ಕರಲಾಗಿದ್ದು, ಸಾರ್ವಜನಿಕರು ಗಮನಿಸಿ ಬೆಂಕಿ ನಂದಿಸಿದ ಕಾರಣ  ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.  ಈ ಸಂಬಂಧ ದೊಡ್ಡಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.