ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಶೆಡ್ ನಲ್ಲಿದ್ದ ಕುರಿಗಳು ಭಸ್ಮ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಘಟನೆ 

ಮಂಡ್ಯ (ಸೆ.10): ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಶೆಡ್ ನಲ್ಲಿದ್ದ ಕುರಿಗಳು ಭಸ್ಮವಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಘಟನೆ ನಡೆದಿದೆ. 

ನೆಲಮಂಗಲದ ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು; ಪ್ರಯಾಣಿಕರು ಅಪಾಯದಿಂದ ಪಾರು!

ಕುರಿಗಳನ್ನ ಸಾಕಿದ್ದ ಸಿದ್ದಪ್ಪ ಎಂದಿನಂತೆ‌ ರಾತ್ರಿ ವೇಳೆ‌ ಶೆಡ್ಡಿನಲ್ಲಿ ಕುರಿಗಳನ್ನ ಕಟ್ಟಿ ಹಾಕಿದ್ದರು. ಈ ವೇಳೆ ಆಕಸ್ಮಿಕವಾಗಿ ಅಗ್ನಿ ಅವಘಡವಾಗಿದೆ. 

ಬೆಂಕಿಯ‌ ಕೆನ್ನಾಲಿಗೆಗೆ 20ಕ್ಕೂ ಅಧಿಕ ಕುರಿಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.