ಮಳೆಗಾಗಿ ಪ್ರಾರ್ಥಿಸಿ ಕುದ್ರೋಳಿಯಲ್ಲಿ ಕಾಂಗ್ರೆಸ್‌ನಿಂದ ಶತ ಸೀಯಾಳಾಭಿಷೇಕ

ಕರಾವಳಿಗೆ ಇನ್ನೂ ಮುಂಗಾರು ಪ್ರವೇಶವಾಗಿಲ್ಲ. ಈಗ ಬಿಪೊರ್‌ಜೊಯ್‌ ಚಂಡಮಾರುತದ ಪ್ರಭಾವದಿಂದ ಮಳೆಯಾಗಿದ್ದು, ಮುಂಗಾರು ಮಳೆ ಪ್ರವೇಶದ ನಿರೀಕ್ಷೆ ಇದೆ. ಈ ನಡುವೆ ದ.ಕ. ಕಾಂಗ್ರೆಸ್‌ ಪಕ್ಷದಿಂದ ಕುದ್ರೋಳಿ ಶ್ರೀಗೋಕರ್ಣನಾಥನಿಗೆ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಶತ ಸೀಯಾಳಾಭಿಷೇಕ ನಡೆಯಿತು.

Shata Siyala Abhisheka by Congress in Kudroli by praying for rain in mangaluru rav

ಮಂಗಳೂರು (ಜೂ.10) ಕರಾವಳಿಗೆ ಇನ್ನೂ ಮುಂಗಾರು ಪ್ರವೇಶವಾಗಿಲ್ಲ. ಈಗ ಬಿಪೊರ್‌ಜೊಯ್‌ ಚಂಡಮಾರುತದ ಪ್ರಭಾವದಿಂದ ಮಳೆಯಾಗಿದ್ದು, ಮುಂಗಾರು ಮಳೆ ಪ್ರವೇಶದ ನಿರೀಕ್ಷೆ ಇದೆ. ಈ ನಡುವೆ ದ.ಕ. ಕಾಂಗ್ರೆಸ್‌ ಪಕ್ಷದಿಂದ ಕುದ್ರೋಳಿ ಶ್ರೀಗೋಕರ್ಣನಾಥನಿಗೆ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಶತ ಸೀಯಾಳಾಭಿಷೇಕ ನಡೆಯಿತು.

ಸುಡುಬಿಸಿಲಿನಿಂದ ಜನರು ತತ್ತರಿಸುತ್ತಿದ್ದು ನದಿ, ತೊರೆಗಳು ಸಂಪೂರ್ಣ ಬತ್ತಿ ಹೋಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಆದ್ದರಿಂದ ಶೀಘ್ರ ಮಳೆ ಸುರಿಯುವಂತೆ ಹಾಗೂ ಲೋಕಕಲ್ಯಾಣಾರ್ಥವಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಉಡುಪಿ ಕೃಷ್ಣನಿಗೆ 1108 ಸೀಯಾಳ ಅಭಿಷೇಕ: ಇಲ್ಲಿವೆ ಫೋಟೋಸ್

ಗೋಕರ್ಣನಾಥ ದೇವರಿಗೆ ಅಲಂಕಾರ ಮಾಡಿ, ಬಳಿಕ ಕಲಶ ನೀರಿನ ಅಭಿಷೇಕ ನೆರವೇರಿಸಲಾಯಿತು. ದೇವಳದ ಅರ್ಚಕರಿಂದ ಗೋಕರ್ಣನಾಥ ದೇವರಿಗೆ ಶತ ಸೀಯಾಳಭಿಷೇಕ ಆರಂಭಗೊಂಡಿತು.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸಾಯಿರಾಂ, ಕಾಂಗ್ರೆಸ್‌ನ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಕ್ಷೇತ್ರದ ಭಕ್ತರು ಇದ್ದರು.

ಕರಾವಳಿ: ಮೂರು ದಿನ ಗುಡುಗು, ಸಿಡಿಲು ಸಹಿತ ಮಳೆ ಸಾಧ್ಯತೆ

ಉಡುಪಿ: ಕೇರಳಕ್ಕೆ ಮುಂಗಾರು ಪ್ರವೇಶ ಮತ್ತುಅರಬ್ಬಿ ಸಮುದ್ರದಲ್ಲಿ ವಾಯುಭಾರತ ಕುಸಿತದಿಂದ ಉಂಟಾಗಿರುವ ಚಂಡಮಾರುಗಳ ಪರಿಣಾಮವಾಗಿ ಕರಾವಳಿಯಲ್ಲಿ ಮಳೆ ಪ್ರವೇಶವಾಗಿದೆ.

ಶುಕ್ರವಾರ ದಿನವಿಡೀ ಉಡುಪಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಉಡುಪಿ ನಗರ ಮತ್ತು ಸುತ್ತಮುತ್ತ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಮೂರ್ನಾಲ್ಕು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೊತೆಗೆ ಸಿಡಿಲು ಗುಡುಗು ಮಿಂಚು ಕೂಡ ಕಾಣಿಸಿಕೊಳ್ಳಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿದೆ.

ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ಲಗ್ಗೆಯ ಭೀತಿ: 3 ದಿನ ಭಾರೀ ಮಳೆ

ಗುರುವಾರ ಕಾರ್ಕಳ, ಬೈಂದೂರು ಮತ್ತು ಕುಂದಾಪುರ ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು, ಇಲ್ಲಿನ ಬೀಜಾಡಿ ಗ್ರಾಮದ ಗಣಪತಿ ಗಾಣಿಗ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ 15 ಸಾವಿರ ರು. ನಷ್ಟಅಂದಾಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನವರೆಗೆ 24 ಗಂಟೆಗಳಲ್ಲಿ ಒಟ್ಟು 0.80 ಮಿ.ಮೀ. ಮಳೆಯಾಗಿದೆ

 

Latest Videos
Follow Us:
Download App:
  • android
  • ios