ಹೊಸ ಕೋಟೆ : ‘ಯಾರ ಅಕ್ರಮ ಆಸ್ತಿ ಎಷ್ಟು ಹೆಚ್ಚಾಗಿದೆ ಗೊತ್ತಾಗಿದೆ’

ಹೊಸಕೋಟೆ ಕ್ಷೇತ್ರದಲ್ಲಿ ಯಾರ ಆಸ್ತೊ ಹೆಚ್ಚಾಗಿದೆ. ಇಷ್ಟೋಂದು ಹಣ ಕೆಲ ದಿನದಲ್ಲಿ ಹೇಗೆ ಬಂತು ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಶರತ್ ಬಚ್ಚೇಗೌಡ ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Sharath Bachegowda Slams BJP Candidate MTB Nagaraj

ಸೂಲಿಬೆಲೆ [ಡಿ.04]:  ಚುನಾವಣೆಯ ಸಮಯದಲ್ಲಿ ಆರೋಪಗಳ ಸಹಜವಾಗಿದ್ದು ಕ್ಷೇತ್ರದ ಮತದಾರರಿಗೆ ಯಾರ ಆಸ್ತಿ ಎಷ್ಟುಹೆಚ್ಚಾಗಿದೆ.ಕೆಲವೇ ತಿಂಗಳಲ್ಲಿ ಇಷ್ಟೋಂದು ಹಣ ಹೇಗೆ ಬಂತು ಎಂಬುದು ತಿಳಿದಿದೆ. ಇದಕ್ಕೆ ಡಿ. 5ರಂದು ಸ್ವಾಭಿಮಾನದ ಉತ್ತರ ನೀಡಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಎಂಟಿಬಿಗೆ ತಿರುಗೇಟು ನೀಡಿದ್ದಾರೆ.

ಹೊಸಕೋಟೆ ತಾಲೂಕು ನಂದಗುಡಿ,ಹಾಗೂ ಜಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಮತ ಯಾಚನೆ ಮಾಡಿದ ಅವರು, ಎಂಟಿಬಿ ನಾಗರಾಜ್‌ ಆರೋಪಿಸಿರುವ ಭೂ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೂ ಅವರು ಆರೋಪಿಸಿರುವ ಭೂಮಿ ವ್ಯವಹಾರಗಳಿಗೂ ಸಂಬಂಧವಿಲ್ಲ.

ಶರತ್‌ ಬಚ್ಚೇಗೌಡಗೆ ಹಾರ ಹಾಕುವಾಗ ಜೆಡಿಎಸ್‌ ಮುಖಂಡ ಹಠಾತ್‌ ಸಾವು...

ನಾನು 18ನೇ ವಯಸ್ಸಿನಿಂದ 28 ವರ್ಷದವರಿಗೂ ವಿದೇಶದಲ್ಲಿದೆ. ಎರಡು ವರ್ಷದಿಂದ ರಾಜಕಾರಣದಲ್ಲಿದ್ದೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಅವರ ಸೋಲಿನ ಹತಾಶೆಯನ್ನು ತೋರಿಸುತ್ತಿದೆ. ಕ್ಷೇತ್ರದಲ್ಲಿ ಕಡಿಮೆ ಬೆಲೆಗೆ ಬಡವರ ಭೂಮಿಯನ್ನು ಲಪಾಟಯಿಸಿ ಕ್ಷೇತ್ರದಲ್ಲಿ ಎಷ್ಟುಎಕರೆ ಅಕ್ರಮ ಜಮೀನಿಗೆ ಒಡೆಯರಾಗಿದ್ದಾರೆ ಎಂಬುದು ಮತದಾರರಿಗೆ ಗೊತ್ತಿದೆ. ಇದಕ್ಕೆಲ್ಲ ಚುನಾವಣೆಯಲ್ಲಿ ಮತದಾರರೇ ಉತ್ತರ ನೀಡುವ ವಿಶ್ವಾಸವಿದೆ ಎಂದರು.

ಅವರು ಅಧಿಕಾರದಲ್ಲಿದ್ದಾಗ ಏಕೆ ಈ ಆರೋಪಗಳನ್ನು ಮಾಡಲಿಲ್ಲ. ಅಕ್ರಮ ನಡೆದಿದ್ದರೇ ಅಧಿಕಾರವಿದ್ದಾಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿ, ಇದೆಲ್ಲ ಚುನಾವಣೆಯ ಕುತಂತ್ರದಿಂದ ಎತ್ತಿರುವ ಆರೋಪಗಳಾಗಿವೆಯೇ ವಿನಾ ಸತ್ಯದಿಂದ ಕೂಡಿದ್ದಲ್ಲ. ಚುನಾವಣೆ ಸಮಯದಲ್ಲಿ ಜನರ ಮನಸು ಬೇರೆಡೆ ತಿರುಗಿಸಲು ಈ ಆರೋಪಗಳನ್ನು ಮಾಡುತ್ತಿದ್ದು ಇದಕ್ಕೆಲ್ಲ ಮತದಾರರು ಕಿವಿಗೂಡಬಾರದು. ಸ್ವಾಭಿಮಾನ ಮತದಾರರು ನನ್ನನ್ನು ಆಶೀರ್ವದಿಸುವ ಮೂಲಕ ಕ್ಷೇತ್ರದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios