ಹೊಸಕೋಟೆ [ನ.02]: ಜೆಡಿಎಸ್‌ ಮುಖಂಡರೊಬ್ಬರು ಹೊಸಕೋಟೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ಹೂವಿನ ಹಾರ ಹಾಕುವ ವೇಳೆ ಹೃದಯಾಘಾತವಾಗಿ ಮೃತಪಟ್ಟಘಟನೆ ಸೂಲಿಬೆಲೆಯಲ್ಲಿ ಭಾನುವಾರ ನಡೆದಿದೆ. 

ದೊಡ್ಡಬಳ್ಳಾಪುರ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಚ್‌.ಸಿ.ಕೃಷ್ಣಪ್ಪ ಮೃತಪಟ್ಟವರು.

ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರತ್‌ ಬಚ್ಚೇಗೌಡ ಅವರಿಗೆ ಜೆಡಿಎಸ್‌ ಪರೋಕ್ಷವಾಗಿ ಬೆಂಬಲ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶರತ್‌ ಬಚ್ಚೇಗೌಡ ಪರವಾಗಿ ನಿಂತಿದ್ದ ಕೃಷ್ಣಪ್ಪ ಅವರು ಅಭಿಮಾನದಿಂದ ಶರತ್‌ ಬಚ್ಚೇಗೌಡ ಪ್ರಚಾರ ನಡೆಸುತ್ತಿದ್ದಲ್ಲಿಗೆ ತೆರಳಿ ಹೂಮಾಲೆ ಹಾಕಿ ಅಭಿನಂದಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಾದ ಮರುಕ್ಷಣವೇ ಅವರು ಹೃದಯಾಘಾತವಾಗಿ ಕೃಷ್ಣಪ್ಪ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಹೊಸಕೋಟೆ ಪಕ್ಷೇತರ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.