ಪ್ರಿಯಾಂಕ್ ಖರ್ಗೆ ಕೊಲೆಗೆ ಬಿಜೆಪಿ ಸಂಚು: ಕಾಂಗ್ರೆಸ್ ಮುಖಂಡರ ಗಂಭೀರ ಆರೋಪ
ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪೋಸ್ಟರ್ ವಾರ್ ಮತ್ತಷ್ಟು ತಾರಕಕ್ಕೇರಿದೆ. ಬಿಜೆಪಿ ಮುಖಡ ಮಣಿಕಂಠ ರಾಠೋಡ ಇವರು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಿಸುವ ಭರದಲ್ಲಿ ಅವರನ್ನು ಶೂಟ್ ಮಾಡಲು ರೆಡಿ ಎಂದು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೊಳಗಾಗಿದೆ.
ಕಲಬುರಗಿ (ನ.13): ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪೋಸ್ಟರ್ ವಾರ್ ಮತ್ತಷ್ಟು ತಾರಕಕ್ಕೇರಿದೆ. ಬಿಜೆಪಿ ಮುಖಡ ಮಣಿಕಂಠ ರಾಠೋಡ ಇವರು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಿಸುವ ಭರದಲ್ಲಿ ಅವರನ್ನು ಶೂಟ್ ಮಾಡಲು ರೆಡಿ ಎಂದು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೊಳಗಾಗಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಇವರು ಪ್ರಿಯಾಂಕ್ ಖರ್ಗೆ ಅವರನ್ನೇ ಶೂಟ್ ಮಾಡ್ತಿವಿ ಎಂದು ನೀಡಿರೋ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಕಟುವಾಗಿ ಖಂಡಿಸಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.
ಒಬ್ಬ ಚುನಾಯಿತ ಪ್ರತಿನಿಧಿಗೆ ನೇರವಾಗಿ ಶೂಟ್ ಮಾಡ್ತಿವಿ ಎನ್ನುವ ಬೆದರಿಕೆ ಹಾಕಲಾಗಿದೆ, ಪ್ರಿಯಾಂಕ್ ಖರ್ಗೆ ಅವರ ಕೊಲೆಗೆ ಬಿಜೆಪಿ ಸರಕಾರವೇ ಸಂಚು ರೂಪಿಸಿದೆ. ಬಿಜೆಪಿ ಸರಕಾರ ತಮ್ಮ ಮುಖಂಡರ ಮೂಲಕ ಈ ರೀತಿ ಹೇಳಿಕೆ ಕೊಡಿಸುತ್ತಿದೆ, ಸರಕಾರವೇ ವ್ಯವಸ್ಥಿತ ಪ್ಲ್ಯಾನ್ ಮಾಡಿ ಪ್ರಿಯಾಂಕ್ ಖರ್ಗೆ ವಿರುದ್ದ ಸೇಡಿಗೆ ಹೊಂಚು ಹಾಕಿದೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Karnataka Politics: ಈಶ್ವರಪ್ಪ ಮದುವೆಗೆ ಹೆಣ್ಣಿನವರು ಒಪ್ಪಬೇಕಲ್ವಾ?: ಪ್ರಿಯಾಂಕ್
ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರಿಯಾಂಕ್‌ಗೆ ಭದ್ರತೆ ಇತ್ತು, ನಮ್ಮ ಸರಕಾರ ಹೋದ ಮೇಲೆ ಬಿಜೆಪಿ ಸರಕಾರ ಪ್ರೀಯಾಂಕ ಖರ್ಗೆ ಅವರ ಭದ್ರತೆ ವಾಪಾಸ್ ತೆಗೆದುಕೊಂಡಿದೆ. ಈ ಸರಕಾರದ ಬಿಟ್ ಕ್ವಾಯಿನ್, ಪಿಎಸ್‌ಐ, ಗಂಗಾಕಲ್ಯಾಣ ಸೇರಿದಂತೆ ಹಲವಾರು ಹಗರಣಗಳನ್ನು ಪ್ರಿಯಾಂಕ್ ಖರ್ಗೆ ಬಯಲಿಗೆಳೆದಿದ್ದಾರೆ, ಹಾಗಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಸೇಡು ತಿರಿಸಿಕೊಳ್ಳಲು ಸರಕಾರ ಹೊಂಚು ಹಾಕುತ್ತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರದ ಹಗರಣಗಳನ್ನು ಹೊರ ತೆಗೆದು ಪ್ರಿಯಾಂಕ್ ಖರ್ಗೆ ನಿರಂತರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇರಿಂದಾಗಿ ಬಿಜೆಪಿಗೆ ತುಂಬ ತೊಂದರೆಯಾಗುತ್ತಿದೆ. ಅದಕ್ಕೇ ಬಿಜೆಪಿ ಪ್ರಿಯಾಂಕ್ ಅವರಿಗೆ ಬಂದಿರುವ ಪ್ರಾಣ ಬೆದರಿಕೆ ಕರೆಗಳನ್ನು ಅಲಕ್ಷಿಸಿದೆ. ದೂರು ಸಲ್ಲಿಸಿದರೂ ಸಹ ಪೊಲೀಸರು ಈ ಪ್ರಕರಣಗಳಲ್ಲಿ ಏನೂ ಮಾಡಿಲ್ಲ. ಇದೀಗ ಬಿಜೆಪಿಯ ಮುಖಂಡನೆಂದು ಮಣಿಕಂಠ ರಾಠೋಡ ಶೂಟ್ ಮಾಡುವ ಬೆದರಿಕೆ ಹಾಕಿದ್ದಾನೆ. ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಸಂಚು ಮಾಡುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆಯೂ ಪ್ರಿಯಾಂಕ್‌ಗೆ 3 ಬಾರಿ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ಸದಾಶಿವ ನಗರ ಠಾಣೆಯಲ್ಲಿ ದೂರು ದಾಲಿಸಲಾಗಿದೆ. ಈಗಿನ ಸಿಎಂ ಬೊಮ್ಮಾಯಿಯಯವರು ಆದಗ ಗೃಹ ಸಚಿವರಾಗಿದ್ದರು. ಅವರಿಗೆ ಎಲ್ಲವೂ ಗೊತ್ತಿದ್ದರೂ ಇದೀಗ ಮಣಿಕಂಠನಂತಹ ಮುಖಂಡರನ್ನು ಮುಂದೆ ಬಿಟ್ಟು ಇಂತಹ ಇಲ್ಲಸಲ್ಲದ ಹೇಳಿಕೆಗಳಿಗೆ ಕಾರಣರಾಗುತ್ತಿದ್ದಾರೆ. ಗೊಡ್ಡು ಬೆದರಿಕೆ ಹಾಕುತ್ತ ಪ್ರಿಯಾಂಕ್ ಖರ್ಗೆ ಹಗರಣದ ಬಗ್ಗೆ ಎತ್ತುತ್ತಿರುವ ಧ್ವನಿ ಅಡಗಿಸುವ ಹುನ್ನಾರ ಇದಾಗಿದೆ.ಇಂತಹ ಹೇಳಿಕೆಗಳಿಗೆ ನಾವು ಹೆದರೋದಿಲ್ಲ. ಆದರೆ ಚುನಾಯಿತ ಪ್ರತಿನಿಧಿಗೆ ಗೌರವಿಸದೆ ಇಂತಹ ಹೇಳಿಕೆ ಕೊಡೋದು ಸರಿಯಲ್ಲ. ಈ ವಿಚಾರದಲ್ಲಿ ಪಕ್ಷ ಪೊಲೀಸರಿಗೆ ದೂರು ಸಲ್ಲಿಸಲಿದೆ ಎಂದರು.
ಮೇಸ್ತ ಕೇಸಲ್ಲಿ ಸುಳ್ಳು: ಬಿಜೆಪಿಗರ ವಿರುದ್ಧ ಕೇಸ್ ಹಾಕಿ
ಬಿಜೆಪಿ ಜಿಲ್ಲೆಯಲ್ಲಿ ಲೂಟಿ ಮಾಡುತ್ತಿದೆ. ಶೇ.40 ರಷ್ಟು ಕಮೀಷನ್ ಹೊಡೆಯುತ್ತಿದ್ದಾರೆ. ಟೆಂಡರ್ ಫಿಕ್ಸಿಂಗ್ ದಂಧೆ ಮಾಡಿಕೊಂಡಿದ್ದಾರೆ. ಇದೆಲ್ಲವೂ ಅನ್ಯಾಯದ ಕೆಲಸ ಮಾಡುತ್ತ ನಮಗೇ ಬೆದರಿಸುತ್ತಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಸ್ವಾಗತಾರ್ಹ, ಇವರು ನೋಡಿದರೆ ವೈಯಕ್ತಿಕವಾಗಿಯೂ ದಾಳಿಗೆ ಮುಂದಾಗಿದ್ದಾರೆ. ಇದನ್ನೆಲ್ಲ ಸಹಿಸಲಾಗದು, ಮಣಿಕಂಠ ಹೇಳಿಕೆಗೆ ಬಿಜೆಪಿ ನಿಲುವು ಸ್ಪಷ್ಟಪಡಿಸಲಿ ಎಂದು ಡಾ. ಪಾಟೀಲ್ ಆಗ್ರಹಿಸಿದರು. ಕೆಪಿಸಿಸಿ ಉಪಾಧ್ಯಕ್ಷ ತಿಪ್ಪಣ್ಣ ಕಮನೂರ್, ಸುಭಾಷ ರಾಠೋಡ, ಮಹಾಂತಪ್ಪ ಸಂಗಾವಿ, ಶಿವಾನಂದ ಪಾಟೀಲ್, ಸಚೀನ್ ಶಿರವಾಳ್, ಸಂತೋಷ ಪಾಟೀಲ್ ದಣ್ಣೂರ್ ಇದ್ದರು.