ಮಂಗಳೂರು: ಒಂದೇ ವಾರದಲ್ಲಿ 63,715 ಮಹಿಳೆಯರ ಪ್ರಯಾಣ!

ಮಹಿಳೆಯರಿಗೆ ಉಚಿತ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಅತ್ಯುತ್ತಮ ರೀತಿಯಲ್ಲಿ ಸ್ಪಂದನ ವ್ಯಕ್ತವಾಗುತ್ತಿದೆ. ಈ ಉಚಿತ ಪ್ರಯಾಣ ಯೋಜನೆಗೆ ಚಾಲನೆ ಸಿಕ್ಕಿದ ದಿನದಿಂದ ಶುಕ್ರವಾರ ವರೆಗೆ ಮಂಗಳೂರು ವಿಭಾಗದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ದ್ವಿಗುಣವಾಗುತ್ತಲೇ ಹೋಗುತ್ತಿದೆ.

Shakti scheme effect 63,715 women travel in a single week at mangaluru rav

ಮಂಗಳೂರು (ಜೂ.18) : ಮಹಿಳೆಯರಿಗೆ ಉಚಿತ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಅತ್ಯುತ್ತಮ ರೀತಿಯಲ್ಲಿ ಸ್ಪಂದನ ವ್ಯಕ್ತವಾಗುತ್ತಿದೆ. ಈ ಉಚಿತ ಪ್ರಯಾಣ ಯೋಜನೆಗೆ ಚಾಲನೆ ಸಿಕ್ಕಿದ ದಿನದಿಂದ ಶುಕ್ರವಾರ ವರೆಗೆ ಮಂಗಳೂರು ವಿಭಾಗದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ದ್ವಿಗುಣವಾಗುತ್ತಲೇ ಹೋಗುತ್ತಿದೆ.

ಮಂಗಳೂರು ವಿಭಾಗಕ್ಕೆ ಮಂಗಳೂರು 1, ಮಂಗಳೂರು 3, ಉಡುಪಿ ಹಾಗೂ ಕುಂದಾಪುರ ಸೇರುತ್ತದೆ. ಮೊದಲ ದಿನ ಕಳೆದ ಭಾನುವಾರ ಕೇವಲ ಐದು ಸಾವಿರ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರು. ಬಳಿಕ ದಿನೇ ದಿನೇ ಉಚಿತವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಶುಕ್ರವಾರ 303 ರೂಟ್‌ಗಳಲ್ಲಿ 63,715 ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ ವಿಭಾಗಕ್ಕೆ 21,94,459 ರು. ಆದಾಯ ಲಭಿಸಿದೆ.

ಶಕ್ತಿ ಯೋಜನೆ: ಶ್ರೀ ಧರ್ಮಸ್ಥಳಕ್ಕೆ ಹರಿದು ಬರುತ್ತಿರುವ ಮಹಿಳಾ ಭಕ್ತರ ದಂಡು

ಮಂಗಳೂರು 1ನೇ ಡಿಪೋ ವ್ಯಾಪ್ತಿಯ 53 ರೂಟ್‌ಗಳಲ್ಲಿ 7,480 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 3,96,649 ರು. ಆದಾಯ ಬಂದಿದೆ. ಮಂಗಳೂರು 3ನೇ ಡಿಪೋದಲ್ಲಿ 117 ರೂಟ್‌ಗಳಿದ್ದು, 26,503 ಮಂದಿ ಮಹಿಳೆಯರು ಪ್ರಯಾಣಿಸಿದ್ದು, 7,90,027 ರು. ಆದಾಯ ಲಭಿಸಿದೆ. ಕುಂದಾಪುರ ಡಿಪೋದ 68 ರೂಟ್‌ಗಳಲ್ಲಿ 17,074 ಮಹಿಳೆಯರು ಪ್ರಯಾಣಿಸಿದ್ದು, 5,32,628 ರು. ಆದಾಯ ಬಂದಿದೆ. ಉಡುಪಿ ಡಿಪೋದ 65 ರೂಟ್‌ಗಳಲ್ಲಿ 12,658 ಮಹಿಳೆಯರು ಪ್ರಯಾಣಿಸಿದ್ದು, 4,75,155 ರು. ಆದಾಯ ಲಭಿಸಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಜೂ.14ರಂದು 303 ರೂಟ್‌ಗಳಲ್ಲಿ 57,329 ಮಹಿಳೆಯರು ಪ್ರಯಾಣಿಸಿದ್ದು, 20,21,008 ರು.ಆದಾಯ ಬಂದಿತ್ತು. ಜೂ.15ರಂದು ಮಹಿಳಾ ಪ್ರಯಾಣಿಕರ ಪ್ರಯಾಣ ಸಂಖ್ಯೆ 61,244ಕ್ಕೆ ಏರಿಕೆಯಾಗಿದ್ದು, 21,13,824 ರು.ಆದಾಯ ಹೆಚ್ಚಳಗೊಂಡಿತ್ತು.

ಬಿಜೆಪಿ-ಕಾಂಗ್ರೆಸ್‌ ನಡುವೆ ರೈಸ್‌ ರಾಜಕೀಯ, ಬಸ್‌ ಡೋರ್‌ ಕಿತ್ತು ಕಂಡಕ್ಟರ್‌ಗೆ ಕೊಟ್ಟ 'ಶಕ್ತಿ' ಮಹಿಳೆಯರು!

ಹೊಸ ರೂಟ್‌ಗಳ ಬೇಡಿಕೆ:

ಮಂಗಳೂರು ವಿಭಾಗದ ಮಂಗಳೂರು-ಮೂಡುಬಿದಿರೆ, ಮಂಗಳೂರು-ಕಾರ್ಕಳ, ಮಂಗಳೂರು-ಉಡುಪಿ ನಡುವೆ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಓಡಿಸುವಂತೆ ಪ್ರಯಾಣಿಕರಿಂದ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ. ಅದೇ ರೀತಿ ಉಡುಪಿಯಲ್ಲಿ ಉಡುಪಿ-ಕುಂದಾಪುರ, ಉಡುಪಿ-ಕಾರ್ಕಳ, ಉಡುಪಿ-ಹೆಬ್ರಿ, ಕುಂದಾಪುರ-ಗಂಗೊಳ್ಳಿ, ಕುಂದಾಪುರ-ಕೊಲ್ಲೂರುಗಳಿಗೆ ಇನ್ನಷ್ಟುಬಸ್‌ ಸಂಚಾರ ಒದಗಿಸುವಂತೆ ಬೇಡಿಕೆ ಕೇಳಿಬರುತ್ತಿದೆ. ಈ ಮಾರ್ಗಗಳಲ್ಲಿ ಪ್ರಸಕ್ತ ಲಭ್ಯ ಬಸ್‌ಗಳನ್ನೇ ಸಂಚಾರಕ್ಕೆ ಬಳಸಲಾಗುತ್ತಿದೆ. ಸುಮಾರು 50ರಷ್ಟುಹೊಸ ಬಸ್‌ಗಳಿಗೆ ಬೇಡಿಕೆ ಇದ್ದು, ಈ ಬಗ್ಗೆ ಕೇಂದ್ರ ಕಚೇರಿಗೆ ಬರೆದುಕೊಳ್ಳಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿತಿಳಿಸಿದ್ದಾರೆ.

Latest Videos
Follow Us:
Download App:
  • android
  • ios