ಬೆಳಗಾವಿ [ಮಾ.03]: ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದನೆಂದು ಗ್ರಾಮ ಪಂಚಾಯತ್ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ಎಂಬಾತನನ್ನು ಲೈಂಗಿಕ ಕಿರುಕುಳ ನೀಡಿದ್ದಾನೆಂದು ಅತ್ತೆ ಸೊಸೆ ಸೇರಿ ಹತ್ಯೆ ಮಾಡಿದ್ದಾರೆ. 

ಹಳೆ ವಿದ್ಯಾರ್ಥಿನಿ ಜೊತೆ ರಾಸಲೀಲೆಯಾಡಿದ್ದ ಶಿಕ್ಷಕ ಅಮಾನತು...

ಅತ್ತೆ ಸೊಸೆ ಮನೆಯಲ್ಲಿ ಇಬ್ಬರೇ ಇದ್ದ ವೇಳೆ ರಾತ್ರಿ ಮನೆಗೆ ನುಗ್ಗಿದ್ದ ಬಸವರಾಜ ದೊಡಮನಿ ಕಣ್ಣಿಗೆ ಖಾರದ ಪುಡಿ ಎರಿಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 

ಈ ವೇಳೆ ಬಸವರಾಜ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವಿಗೀಡಾಗಿದ್ದಾನೆ. 

ಈ ಪ್ರಕರಣ ಸಂಬಂಧ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.