ಹುಬ್ಬಳ್ಳಿ(ಡಿ.18): ರಾಜ್ಯದಿಂದ 25 ಬಿಜೆಪಿ ಸಂಸದರನ್ನು ನೀಡಿದ ಕರ್ನಾಟಕಕ್ಕೆ ಮಹದಾಯಿ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಮಹಾ ಮೋಸ ಮಾಡಿದೆ. ಮಹದಾಯಿ(ಕಳಸಾ ಬಂಡೂರಿ) ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ಇಂದು(ಬುಧವಾರ) ಕಳಸಾ ಬಂಡೂರಿ ನಾಲಾ ಯೋಜನೆಗೆ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.  

"

ಈ ಮೂಲಕ ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ. ಕೇಂದ್ರ ಪರಿಸರ ಇಲಾಖೆ ಗೋವಾ ಪರ ನಿರ್ಧಾರ ಹೊರಡಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರ ಸರ್ಕಾರ ಮೊದಲು ಒಪ್ಪಿಗೆ ನೀಡಿತ್ತು. ಆದರೆ, ಇಂದು ಕೇಂದ್ರ ಪರಿಸರ ಇಲಾಖೆಯಿಂದ ಪರಿಷ್ಕೃತ ಆದೇಶದಂತೆ ಕಳಸಾ ಬಂಡೂರಿ ನಾಲಾ ಯೋಜನೆಗೆ ನೀಡಿದ್ದ ಒಪ್ಪಿಗೆ ಸ್ಥಗಿತಗೊಂಡಿದೆ. ಇದರಿಂದ ಉತ್ತರ ಕರ್ನಾಟಕ ಜನತೆಗೆ ಭಾರೀ ಅನ್ಯಾವಾಗಿದೆ. 

ರಾಜ್ಯಕ್ಕೆ ಮತ್ತೆ ಮಹದಾಯಿ ಶಾಕ್‌!

ಕಳಸಾ-ಬಂಡೂರಿ ನಾಲೆ ಮೂಲಕ ಮಲಪ್ರಭಾ ನದಿಗೆ ನೀರು ಹರಿಸುವ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಪರಿಸರ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಕೇಂದ್ರ ಪರಿಸರ ಇಲಾಖೆಯಿಂದ ಗೋವಾ ಪರ ಆದೇಶ ಹೊರಬಿದ್ದಿದೆ.ಸದಾ ಬರಗಾಲದಿಂದ ತತ್ತರಿಸುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆ ಇದಾಗಿದೆ. 

ಏನಿದು ಯೋಜನೆ? 

ಕೇಂದ್ರ ಪರಿಸರ ಇಲಾಖೆ ಈ ಮೊದಲು ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿತ್ತು. ಆದರೆ ಈ ಆದೇಶವನ್ನ   ಗೋವಾ ವಿರೋಧಿಸಿತ್ತು. ಇದೀಗ ಗೋವಾ ಲಾಬಿಗೆ ಮೋದಿ ಸರ್ಕಾರ ಮಣಿದಿದೆ. 
ಮಹದಾಯಿ ನದಿ ನೀರು ತಿರುವು(841 ಕೋಟಿ ಮೊತ್ತದ) ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಗೋವಾ ಸರ್ಕಾರ ತೀವ್ರವಾಗಿ ವಿರೋಧಿಸಿತ್ತು. ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಗೋವಾ ವಾದಿಸುತ್ತಾ ಬಂದಿದೆ. 

ಕಳಸಾಗೆ ಕೇಂದ್ರ ಅನುಮತಿ: ಮತ್ತೆ ಕ್ಯಾತೆ ತೆಗೆದ ಗೋವಾ

ಗೋವಾ ಹಾಗೂ ಕರ್ನಾಟಕದ ಮಧ್ಯೆ ವಿವಾದಕ್ಕೆ ಕಾರಣವಾಗಿರುವ ಈ ಯೋಜನೆ ಸಂಬಂಧ ಸುಪ್ರೀಂ ಕೋರ್ಟ್​ ನಿರ್ಧಾರ ಮಾಡುವವರೆಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಜನತೆ ಮತ್ತೆ ನಿರಾಸೆಯಾಗಿದೆ. 

ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.4 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಒಟ್ಟು 13.4 ಟಿಎಂಸಿ ನೀರಿನಲ್ಲಿ ಕುಡಿಯುವ ನೀರಿಗಾಗಿ 5.5 ಟಿಎಂಸಿ ಹಂಚಿಕೆ ಮಾಡಲಾಗಿತ್ತು. ಆದರೆ, ಇಂದಿನ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. 

ಕೇಂದ್ರದ ಮನವೊಲಿಸುವೆ: ಯಡಿಯೂರಪ್ಪ ಭರವಸೆ

"

ಮಹದಾಯಿ ಮೋಸ: ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶ

"