ಪಡಿತರ ಚೀಟಿ ತಿದ್ದುಪಡಿ: ಇನ್ನೂ ಬಗೆಹರಿಯದೆ ಸರ್ವರ್‌ ಸಮಸ್ಯೆ

23ರಿಂದ ಎಲ್ಲ ಸಮಸ್ಯೆಗಳು ಸರಿಹೋಗಲಿದೆ ಸರ್ವರ್‌ ಸಮಸ್ಯೆ ಇರುವುದಿಲ್ಲ ನಿರಂತರವಾಗಿ ಗ್ರಾಹಕರು ಪಡಿತರ ಕಾರ್ಡುಗಳಲ್ಲಿನ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದೆಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದರು. ಇನ್ನೇನು ಸರ್ವರ್‌ ಸಮಸ್ಯೆ ಇರುವುದಿಲ್ಲ ನೆಮ್ಮದಿಯಾಗಿ ಪಡಿತರ ಕಾರ್ಡುಗಳಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಸಿಕೊಳ್ಳಬಹುದು ಎಂದು ಬಾವಿಸಿದ್ದವರಿಗೆ ಮತ್ತೆ ನಿರಾಶೆ ಮೂಡಿದೆ.

Server Issue still Unsolved of Ration Card Update at Bangarpet in Kolar grg

ಬಂಗಾರಪೇಟೆ(ಆ.26): ಪಡಿತರ ಕಾರ್ಡುಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ,ಸೇರಿದಂತೆ ಇತರೆ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ ಎಂದು ಹೇಳುತ್ತಿದ್ದರೂ ಇನ್ನೂ ಸರ್ವರ್‌ ಸಮಸ್ಯೆ ನೀಗದ ಕಾರಣ ಕಳೆದ 10ದಿನಗಳಿಂದ ಗ್ರಾಹಕರು ಮಾತ್ರ ಸೈಬರ್‌ ಕೇಂದ್ರಗಳಿಗೆ ಅಲೆಯುವುದು ತಪ್ಪದೆ ತತ್ತರಿಸಿ ಹೋಗುವಂತಾಗಿದೆ.

ಈ ಬಗ್ಗೆ ದಿ.23ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು. ಆದರೆ 23ರಿಂದ ಎಲ್ಲ ಸಮಸ್ಯೆಗಳು ಸರಿಹೋಗಲಿದೆ ಸರ್ವರ್‌ ಸಮಸ್ಯೆ ಇರುವುದಿಲ್ಲ ನಿರಂತರವಾಗಿ ಗ್ರಾಹಕರು ಪಡಿತರ ಕಾರ್ಡುಗಳಲ್ಲಿನ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದೆಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದರು. ಇನ್ನೇನು ಸರ್ವರ್‌ ಸಮಸ್ಯೆ ಇರುವುದಿಲ್ಲ ನೆಮ್ಮದಿಯಾಗಿ ಪಡಿತರ ಕಾರ್ಡುಗಳಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಸಿಕೊಳ್ಳಬಹುದು ಎಂದು ಬಾವಿಸಿದ್ದವರಿಗೆ ಮತ್ತೆ ನಿರಾಶೆ ಮೂಡಿದೆ.

ಬೈಸಿಕಲ್ ಕಳವು ಪ್ರಕರಣ ; ಬರೋಬ್ಬರಿ 38 ವರ್ಷಗಳ ಬಳಿಕ ವ್ಯಕ್ತಿಯನ್ನ ಬಂಧಿಸಿದ ಕೆಜಿಎಫ್ ಪೊಲೀಸರು!

ಇನ್ನೂ ತಪ್ಪದ ಸರ್ವರ್‌ ಸಮಸ್ಯೆ

ಕಳೆದ ಎರಡು ವಾರಗಳಿಂದ ತಾಲೂಕಿನಲ್ಲಿ ಒಂದೇ ಒಂದು ಕಾರ್ಡಿನಲ್ಲಿ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ, ನಿತ್ಯ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೈಯಲ್ಲಿ ಕಾರ್ಡುಗಳನ್ನು ಹಿಡಿದುಕೊಂಡು ಸೈಬರ್‌ ಕೇಂದ್ರ, ಗ್ರಾಮ ಒನ್‌ ಹಾಗೂ ಬಾಬೂಜಿ ಸೇವಾ ಕೇಂದ್ರಗಳತ್ತ ಸಾಗಿದರೂ ಸರ್ವರ್‌ ಇಲ್ಲದೆ ಇಲಾಖೆ ವಿರುದ್ದ ಕಿಡಿಕಾರಿಕೊಂಡು ವಾಪಸ್‌ ಹೋಗುವಂತಾಗಿದೆ. ಸರ್ಕಾರ ಅರ್ಹರು ಗೃಹಲಕ್ಷ್ಮೇ ಯೋಜನೆಯಿಂದ ವಂಚಿತರಾಗಬಾರದೆಂದು ಕಾರ್ಡುಗಳಲ್ಲಿ ತಿದ್ದುಪಡಿಸಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ನೆಟ್ಟಿಗೆ ಸರ್ವರ್‌ ಕಲ್ಪಿಸದೆ ಇರುವುದರಿಂದ ಅನೇಕ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೇ ಯೋಜನೆಯಿಂದ ದೂರ ಉಳಿಯುವಂತಾಗಿದೆ.

ಹೆಸರು ಬದಲಾವಣೆಗೆ ಪ್ರಯತ್ನ

ಸರ್ಕಾರ ಮನೆ ಯಜಮಾನಿಗೆ ಖಾತೆಗೆ ಪ್ರತಿ ತಿಂಗಳು 2 ಸಾವಿರ ಹಣ ಹಾಕುವ ಗೃಹಲಕ್ಷ್ಮೇ ಯೋಜನೆ ಜಾರಿ ತಂದ ಬಳಿಕ ಹಲವು ದಶಕಗಳಿಂದ ಮೃತಪಟ್ಟಕಾರ್ಡಿನ ಕುಟುಂಬದ ಮುಖ್ಯಸ್ಥರ ಹೆಸರು ಕಾರ್ಡಿನಿಂದ ತೆಗೆಸದೆ ಹಾಗೆ ಉಳಿಸಿಕೊಂಡಿದ್ದವರು. ಈಗ ಒಮ್ಮೆಲೆ ಕಾರ್ಡಿನ ಯಜಮಾನಿಯ ಹೆಸರನ್ನು ಬದಲಾಯಿಸಲು ಇಲಾಖೆಯ ಕದ ತಟ್ಟುತ್ತಿರುವುದರಿಂದ ಈವರೆಗೆ ತಾಲೂಕಿನಲ್ಲಿ ಸುಮಾರು 2ಸಾವಿರಕ್ಕಿಂತ ಹೆಚ್ಚಿನ ಸದಸ್ಯರನ್ನು ಕಾರ್ಡುಗಳಿಂದ ಡಿಲಿಟ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios