ಬೈಸಿಕಲ್ ಕಳವು ಪ್ರಕರಣ ; ಬರೋಬ್ಬರಿ 38 ವರ್ಷಗಳ ಬಳಿಕ ವ್ಯಕ್ತಿಯನ್ನ ಬಂಧಿಸಿದ ಕೆಜಿಎಫ್ ಪೊಲೀಸರು!
ದೊಡ್ಡ ಮಟ್ಟದಲ್ಲಿ ಬೈಸಿಕಲ್ ಗಳನ್ನು ಕದ್ದಿದ್ದ ವ್ಯಕ್ತಿಯೋರ್ವನನ್ನು ಮೂವತ್ತೆಂಟು ವರ್ಷಗಳ ಬಳಿಕ ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ.
ಕೋಲಾರ: ದೊಡ್ಡ ಮಟ್ಟದಲ್ಲಿ ಬೈಸಿಕಲ್ ಗಳನ್ನು ಕದ್ದಿದ್ದ ವ್ಯಕ್ತಿಯೋರ್ವನನ್ನು ಮೂವತ್ತೆಂಟು ವರ್ಷಗಳ ಬಳಿಕ ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಅವರ ಸೂಚನೆ ಮೇರೆಗೆ ಆರೋಪಿಯ ಗುರುತು ದೃಢಪಡಿಸಲು ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ತಜ್ಞರು ದೃಢಪಡಿಸಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಶಾಂತರಾಜು, ಪೊಲೀಸ್ ದಾಖಲೆಗಳ ಪ್ರಕಾರ ಆರೋಪಿಯನ್ನು ಆಂಡರ್ಸನ್‌ಪೇಟೆ ನಿವಾಸಿ ಪಾಷಾ ಜಾನ್ ಎಂದು ಗುರುತಿಸಲಾಗಿದೆ. ಆತನಿಗೆ ಈಗ ಸುಮಾರು 62 ವರ್ಷ ವಯಸ್ಸಾಗಿದ್ದು ಎಸ್‌ಟಿ ಬ್ಲಾಕ್‌ನ ನಿವಾಸಿ ಜಾನ್ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆಂಡ್ರಸನ್‌ಪೇಟೆಯಲ್ಲಿ ಸೈಕಲ್ ಕಳ್ಳತನವಾಗಿದ್ದು, ಸೈಕಲ್‌ನ ಮೌಲ್ಯ ಇನ್ನೂರೈವತ್ತು ರೂಪಾಯಿ ಎಂದು ದೂರಿನಲ್ಲಿ ತಿಳಿಸಿದ್ದು, ದೂರಿನ ಮೇರೆಗೆ ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮೈಸೂರು: 4 ರಾಜ್ಯಗಳಲ್ಲಿ ಕೈ ಚಳಕ ತೋರಿಸಿದ್ದ ಖರ್ತನಾಕ್ ಖದೀಮ ಅರೆಸ್ಟ್..!
ನಂತರ ತನಿಖೆಯ ಸಮಯದಲ್ಲಿ, ಪಾಷಾ ಜಾನ್ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು. ಆ ನಂತರ ಆತನ ವಿರುದ್ಧ ಕಳ್ಳತನ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಆರೋಪದ ಮೇಲೆ ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆದರೆ ಅಂದು ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಧೀಶರು 1985ರಲ್ಲಿ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದ್ದರು. ಅಂದಿನಿಂದ ಪಾಷಾ ಜಾನ್ ನಾಪತ್ತೆಯಾಗಿದ್ದರು.
ಕಳೆದ ಸಭೆಯಲ್ಲಿ ಶಾಂತರಾಜು ಅವರು ವಾರೆಂಟ್ ಅನ್ನು ಕಾರ್ಯಗತಗೊಳಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳಲ್ಲಿ(ಎಲ್‌ಪಿಆರ್) ತಲೆಮರೆಸಿಕೊಂಡಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಸೂಚಿಸಿದರು. ಅದರಂತೆ ಪಾಷಾ ಜಾನ್ ಅವರನ್ನು ಬಂಧಿಸಲಾಗಿದೆ. ಅವರ ಗುರುತನ್ನು ಖಚಿತಪಡಿಸಲು ಅವರ ಹೆಬ್ಬೆರಳಿನ ಗುರುತನ್ನು ಬೆರಳಚ್ಚು ತಜ್ಞರಿಗೆ ಕಳುಹಿಸಲಾಗಿದೆ. ಅವರು ದೃಢಪಡಿಸಿದ ನಂತರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
ಇನ್ಶುರೆನ್ಸ್ ಕ್ಲೈಂಗಾಗಿ ಜ್ಯುವೆಲೆರಿ ಶಾಪ್ ಮಾಲೀಕನ ಕಳ್ಳಾಟ ಬಯಲು!