Asianet Suvarna News Asianet Suvarna News

Bengaluru ನೂತನ ಕಮಿಷನರ್ ಆಗಿ ದಯಾನಂದ್ ಅಧಿಕಾರ ಸ್ವೀಕಾರ, ಟೋಯಿಂಗ್ ಬಗ್ಗೆ ಮಾತು

ಬೆಂಗಳೂರಿನ ನೂತನ ಕಮಿಷನರ್ ಆಗಿ ದಯಾನಂದ್  ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಕಮಿಷನರ್ ಕಚೇರಿಯಲ್ಲಿ ಹಿಂದಿನ ಕಮಿಷನರ್ ಪ್ರತಾಪ್ ರೆಡ್ಡಿವರು ಬ್ಯಾಟನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ನಡೆದಿದೆ.

Senior IPS officer  B dayananda new Bengaluru city police commissioner kannada news gow
Author
First Published May 31, 2023, 11:59 AM IST

ಬೆಂಗಳೂರು(ಮೇ.31): ಬೆಂಗಳೂರಿನ ನೂತನ ಕಮಿಷನರ್ ಆಗಿ ಬಿ ದಯಾನಂದ್  ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಕಮಿಷನರ್ ಕಚೇರಿಯಲ್ಲಿ ಹಿಂದಿನ ಕಮಿಷನರ್ ಪ್ರತಾಪ್ ರೆಡ್ಡಿವರು ಬ್ಯಾಟನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ನಡೆದಿದೆ. ಅಧಿಕಾರ ವಹಿಸಿಕೊಂಡ ಬಳಿಕ ಬೆಂಗಳೂರು ನೂತನ ಕಮಿಷನರ್ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಕಮಿಷನರ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಿಎಂ ಸಿದ್ದರಾಮಯ್ಯ ,ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ನಂಬಿಕೆ ಉಳಿಸಿಕೊಳ್ಳುವೆ: ತೆರೆಯ ಹಿಂದೆ ಮಾತನಾಡುತ್ತಿದೆ. ಈಗ ತೆರೆಯ ಮುಂದೆ ಮಾತನಾಡುತ್ತೀದ್ದೇನೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಗ. ಬಹಳಷ್ಟು ಚಾಲೆಂಜಸ್ ಇದ್ದಾವೆ. ಅದನ್ನು ಎದರಿಸಲು ಎಲ್ಲಾ ಸಿಬ್ಬಂದಿಯನ್ನು ಗಮನಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬೆಂಗಳೂರು  ಬದಲಾವಣೆ ಬಗ್ಗೆ ಹೆಚ್ಚಿನ ಹೊತ್ತು ನೀಡುತ್ತೇನೆ. ಕಮಲ್ ಪಂತ್ ,ಪ್ರತಾಪ್ ರೆಡ್ಡಿ ಸೇರಿದಂತೆ  ನಗರದಲ್ಲಿ  ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ನಗರದಲ್ಲಿ ನಾಗರಿಕರು ಇಲಾಖೆ ಮೇಲೆ ಅಪಾರವಾಗಿ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಲು ತಾನು ಕೆಲಸ ಮಾಡುತ್ತೇನೆ.

ಟೋಯಿಂಗ್ ವಿಚಾರ: ಮುಂದೆ ಅದನ್ನು ನೋಡಬೇಕು. ಈ ಬಗ್ಗೆ ಚರ್ಚೆ ಮಾಡಬೇಕು. ಸಿಟಿ ಇಂಟಲಿಜೆನ್ಸ್ ಬಲವರ್ಧನೆ ಮಾಡಬೇಕು. ಇಂಟಲಿಜೆನ್ಸ್ ಪೊಲೀಸ್ ಇಲಾಖೆಯ ಬ್ಯಾಕ್ ಬೋನ್. ಅದನ್ನು ಹೆಚ್ಚು ಬಲವರ್ಧನೆ ಮಾಡಬೇಕು. ಇವತ್ತಿನ ಪೊಲೀಸ್ ವ್ಯವಸ್ಥೆಗೆ ಅನುಗುಣವಾಗಿ ಇರಬೇಕು. ಇಂಟಲಿಜೆನ್ಸ್ ನಿಂದ ಟೆರರ್ ಆಕ್ಟಿವಿಟಿ ಗಳ ಬಗ್ಗೆ ಇಡಬೇಕು. ಪ್ರಿಡಿಕ್ಟಿಂಗ್ ಪೊಲೀಸಿಂಗ್ ಬಗ್ಗೆ ರಿಸರ್ಚ್ ನಡೆಯುತ್ತಿದೆ. ಅದನ್ನು ನಗರ ಪೊಲೀಸಿಂಗ್ ಗೆ ಅಳವಡಿಸಿಕೊಳ್ಳಲಾಗುತ್ತೆ ಎಂದಿದ್ದಾರೆ.

ಟೆಕ್ನಾಲಜಿ ಹಾಗು ಸೈಬರ್ ಬಗ್ಗೆ ಕೆಲಸ ಆಗಬೇಕು: ಮಾತಾಡುವಾಗ ಮೊದಲಿಗೆ ನಾನು ಬೆಂಗಳೂರಿಗ ಎಂದು ಹೇಳುತ್ತೇನೆ. ಬೆಂಗಳೂರು ನಗರ ತಾನು ಹುಟ್ಟಿ ಬೆಳೆದ ಸ್ಥಳ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಜೊತೆಗೊಂಡಂತೆ‌  ಕೆಲಸ ಮಾಡುತ್ತೇವೆ. ಚಿಕ್ಕಂದಿನಿಂದ ನಗರ ಹಾಗೂ ಪೊಲೀಸ್ ಇಲಾಖೆಯನ್ನು ನೋಡಿದ್ದೇನೆ. ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆ ಜೊತೆಗೆ ಐತಿಹಾಸಿಕ ವ್ಯವಸ್ಥೆ ಗಳನ್ನು ನೋಡುತ್ತೇವೆ. ಸಾಕಷ್ಟು ಹಿರಿಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ.  ಮಾಡಿರುವಂತಹ ವ್ಯವಸ್ಥೆ ಹಾಗೂ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಬದಲಾವಣೆ ಅವಶ್ಯಕತೆ ಇರುವ ಕಡೆ ಬದಲಾವಣೆ ಮಾಡಬೇಕು.  ಟೆಕ್ನಾಲಜಿ ಹಾಗು ಸೈಬರ್ ಬಗ್ಗೆ ಕೆಲಸ ಆಗಬೇಕು ಎಂದಿದ್ದಾರೆ.

ನಗರ ಪೊಲೀಸ್ ಆಂದ್ರೆ ಅದು ವಿಜಿಬಲ್ ಪೊಲೀಸಿಂಗ್ ಅದು ಆಗಬೇಕು ಜನರಿಗೆ ಹತ್ತಿರವಾಗಬೇಕು. ಹಿಂದೆ ತಾನು ಟ್ರಾಫಿಕ್ ಅಡಿಶನಲ್ ಕಮಿಷನರ್ ಆಗಿ ಕೆಲಸ ಮಾಡಿದ್ದೆ. ಟ್ರಾಫಿಕ್ ಮ್ಯಾನೆಜ್‌ಮೆಂಟ್‌ ಇರುವುದು ಒಂದು ಇಲಾಖೆ ಯಿಂದ ಆಗುವ ಕೆಲಸ ಅಲ್ಲ. ಬಿಬಿಎಂಪಿಯಿಂದ ಪರಿಹಾರಕ್ಕೆ ಇತರ ಇಲಾಖೆಯ ಸಹಯೋಗ ಸಹಕಾರ ಬೇಕು. ಅರ್ಬನ್ ಡೆವಲಪ್ಮೆಂಟ್ ಎಲ್ಲವರನ್ನು ಸೇರಿಕೊಂಡು ಸುಧಾರಣೆ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಹಾಗು ಸಿಬ್ಬಂದಿ ಗಳ ಸಲಹೆ ಮೇರೆ ಉತ್ತಮವಾಗಿ ಉಪಯೋಗವಾಗುವ ಕೆಲಸ ಮಾಡಬೇಕು.

Harish Halli Death Case: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಸಾವಲ್ಲ ವ್ಯವಸ್ಥಿತ ಕೊಲೆ,

ಸೈಬರ್ ಕ್ರೈಮ್: ಈಗ ನಗರದ ಎಲ್ಲಾ ವಿಭಾಗದಲ್ಲಿ ಒಂದು ಠಾಣೆ ಇವೆ. ಅಲ್ಲಿ ಕೆಲಸ ಆಗಬೇಕು. ಸ್ವಲ್ಪ ತರಬೇತಿ ಕೊರತೆ ಇದೆ ಅದನ್ನು ನೋಡಿಕೊಳ್ಳಬೇಕು ಎಂದಿದ್ದಾರೆ. ಸ್ಥಳೀಯ ಪೊಲೀಸ್ ವ್ಯವಸ್ಥೆ ಎಲ್ಲಿಯವರೆಗೆ ಸಮರ್ಥ ವಾಗುತ್ತೆ ಅಲ್ಲಿಯ ವರೆಗೆ ಎಲ್ಲವು ಸಾಧ್ಯವಾಗಲ್ಲಾ. ಬೇರೆ ರಾಜ್ಯಗಳಾದ ಪಂಜಾಬ್ ನಲ್ಲಿಯೂ ಹಾಗೆ ಆಗಿದೆ. ಇಲ್ಲು ಬಲವರ್ಧನೆ ಆಗಬೇಕು.  ಸೈಬರ್ ವಿಚಾರದಲ್ಲಿ , ಹೊಸ ಸಿಬ್ಬಂದಿ ಗಳಿಗೆ ಹಿಂದಿನ ಸಿಬ್ಬಂದಿ ಗಳಿಗಿಂತ ಹೆಚ್ಚು ಸಾಮರ್ಥ್ಯ ಇದೆ. ಹೀಗಾಗಿ ಇದನ್ನು ಸಿಂಪಲ್ ಸೈಬರ್ ಕೇಸ್ ಗಳನ್ನು ಸಾಮಾನ್ಯ ಪೊಲೀಸ್ ಠಾಣೆ ಯಲ್ಲಿ ಕೆಲಸ ಮಾಡಿಸಬೇಕು. ಇದರಿಂದ ಸೈಬರ್ ಕ್ರೈಂ ತನಿಖೆ  ಕ್ವಾಲಿಟಿ ಹೆಚ್ಚಾಗುತ್ತೆ.

Hassan: ತುತ್ತು ಅನ್ನ ಬೇಡಿ ಬಂದ 18 ಜನರನ್ನು ಜೀತಕಿಟ್ಟು ಉಪವಾಸದಿಂದ ಕೂಡಿ ಹಾಕಿದ

ರೌಡಿ ವಿಚಾರ: ನಗರದ ರೌಡಿಸಂ ಚಟುವಟಿಕೆ ಮಟ್ಟ ಹಾಕಲು ನಮ್ಮ ಸಿಬ್ಬಂದಿ ಸಮರ್ಥ ಇದ್ದಾರೆ. ಸಿಸಿಬಿ ಇದೆ. ಅವರ ಮೂಲಕ ಸಂಪೂರ್ಣ ವಾಗಿ ಮಟ್ಟ ಹಾಕುತ್ತೇವೆ. ರೌಡಿಗಳು ರಿಯಲ್ ಎಸ್ಟೇಟ್ ಕೆಲಸ ಮಾಡ್ತಿದ್ದಾರೆ. ಅದನ್ನು ಮಟ್ಟ ಹಾಕುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios