Asianet Suvarna News Asianet Suvarna News

Hassan: ತುತ್ತು ಅನ್ನ ಬೇಡಿ ಬಂದ 18 ಜನರನ್ನು ಜೀತಕಿಟ್ಟು ಉಪವಾಸದಿಂದ ಕೂಡಿ ಹಾಕಿದ ಕಲಿಯುಗದ ಕಂಸ!

ಕೂಲಿ ಕೆಲಸಕ್ಕೆಂದು ಕರೆದುಕೊಂಡು ಬಂದು 18 ಮಂದಿಯನ್ನು ಕೂಡಿ ಹಾಕಿದ ಘಟನೆ ಹಾಸನದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Police rescue 18  bonded labourers in Hassan gow
Author
First Published May 31, 2023, 11:20 AM IST

ಹಾಸನ (ಮೇ.31): ಜೀತ ಪದ್ಧತಿ ಇನ್ನೂ ಕೂಡ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೂಲಿ ಕೆಲಸಕ್ಕೆಂದು ಕರೆದುಕೊಂಡು ಬಂದು 18 ಮಂದಿಯನ್ನು ಕೂಡಿ ಹಾಕಿದ ದಾರುಣ ಘಟನೆ ಹಾಸನದಲ್ಲಿ ನಡೆದಿದ್ದು, ಬಂಧಿತ ಕಾರ್ಮಿಕರನ್ನು  ಪೊಲೀಸರು ರಕ್ಷಿಸಿದ್ದಾರೆ. ಜೊತೆಗೆ ಮುನೇಶ್ ಎಂಬ ಕಿರಾತಕ ಆರೋಪಿಯನ್ನು ಬಂಧಿಸಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಬಾಣಾವರ ಹೋಬಳಿ, ಚೆಲುವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದು  206 ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮವಾಗಿದೆ. 

ಬಂಧಿತ  ಮುನೇಶ್ ನಿರ್ಗತಿಕರಿಗೆ ಕೆಲಸ ಕೊಡಿಸುತ್ತೇನೆಂದು ಕರೆದುಕೊಂಡು ಬಂದು ಎಲ್ಲರನ್ನೂ ಒಂದೆಡೆ ಕೂಡಿ ಹಾಕಿದ್ದ. ಮಾತ್ರವಲ್ಲ ಸರಿಯಾಗಿ ವೇತನ, ಆಹಾರ ನೀಡದೆ ಈ ಕಿರಾತಕ ದುಡಿಸಿಕೊಳ್ಳುತ್ತಿದ್ದ ಎಲ್ಲರನ್ನೂ ಒಂದೇ ವಾಹನದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಮತ್ತೆ ತೋಟದ ಮನೆಯಲ್ಲಿ ಕೂಡಿ ಹಾಕುತ್ತಿದ್ದ. ಮಾತ್ರವಲ್ಲ ಯಾರನ್ನೂ ಕೂಡ ಹೊರಗೆ ಬಿಡದೆ ದುಡಿಸಿಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಮುನೇಶ್ ನ ಚಿತ್ರಹಿಂಸೆಗೆ ಸ್ನಾನ, ಬಟ್ಟೆ, ಆಹಾರವಿಲ್ಲದೆ ಬಡಪಾಯಿಗಳು ಪರದಾಡುತ್ತಿದ್ದರು.

Mysuru Road Accident: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ

ಮುನೇಶ್ ಬಂಧನ ಇದೇ ಮೊದಲೇನಲ್ಲ ನಾಲ್ಕನೇ ಭಾರಿ ಈತನ ಬಂಧಿತವಾಗುತ್ತಿದೆ. ರೈಲ್ವೆ, ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರನ್ನು ಕರೆದುಕೊಂಡು ಬಂದು ಈತ ಬಂಧಿಸಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹದಿನೆಂಟು ಮಂದಿಯನ್ನು ಪೊಲೀಸರು ರಕ್ಷಿಸಿದ್ದು, ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 18 ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ.

Harish Halli Death Case: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಸಾವಲ್ಲ ವ್ಯವಸ್ಥಿತ ಕೊಲೆ,

Follow Us:
Download App:
  • android
  • ios