Asianet Suvarna News Asianet Suvarna News

Vijayapura: ಸರ್ಕಾರದ ಯೋಜನೆಗಳ ಜಾಗೃತಿಗೆ ಕಲಾತಂಡಗಳ ಆಯ್ಕೆ

ಸರ್ಕಾರದಿಂದ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯ್ಕೆಗೊಂಡ ಬೀದಿನಾಟಕ ಹಾಗೂ ಜಾನಪದ ಕಲಾ ತಂಡಗಳು ಡಿ.21ರಿಂದ 30ರವರೆಗೆ ವಿಜಯಪುರ  ಜಿಲ್ಲೆಯಾದ್ಯಂತ ಸಂಚರಿಸಿ ಪ್ರದರ್ಶನಗಳ ಮೂಲಕ ಜನರಲ್ಲಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಿವೆ. 

Selection of art troupes for awareness of government schemes in  Vijayapura gow
Author
First Published Dec 20, 2022, 9:35 PM IST

ವರದಿ: ಷಡಕ್ಷರಿ, ಏಷ್ಯಾನೆಟ್ ಸುವರ್ಣನ್ಯೂಸ್ 

ವಿಜಯಪುರ (ಡಿ. 20): ಸರ್ಕಾರದಿಂದ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯ್ಕೆಗೊಂಡ ಬೀದಿನಾಟಕ ಹಾಗೂ ಜಾನಪದ ಕಲಾ ತಂಡಗಳು ಡಿ.21ರಿಂದ 30ರವರೆಗೆ  ಜಿಲ್ಲೆಯಾದ್ಯಂತ ಸಂಚರಿಸಿ ಪ್ರದರ್ಶನಗಳ ಮೂಲಕ ಜನರಲ್ಲಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಿವೆ. 

ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ:
ಸರ್ಕಾರದ ಹಲವು ಯೋಜನೆಗಳಾದ ಸಿಎಂ ರೈತ ವಿದ್ಯಾನಿಧಿ, ರೈತರ ಮಕ್ಕಳು ಓದುತ್ತಿರುವ ಕೋರ್ಸಿಗೆ ಅನುಗುಣವಾಗಿ 2 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಶಿಷ್ಯ ವೇತನ, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋಚಾಲಕರ ಮಕ್ಕಳು, ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಸೌಲಭ್ಯ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲ್ ಜೀವನ್ ಮಿಷನ್ ಸೇರಿದಂತೆ ಹಲವು ಯೋಜನೆಗಳ ಕುರಿತು ಜನರಲ್ಲಿ ಈ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಿವೆ. 

ಬೀದಿ ನಾಟಕಗಳ ಮೂಲಕವು ಜಾಗೃತಿ ಕಾರ್ಯ:
ಬೀದಿನಾಟಕ ತಂಡವು ಡಿ.21ರಂದು ಬಳ್ಳೊಳ್ಳಿ ಹಾಗೂ ಜೇವೂರ, ಡಿ.22 ರಂದು ಧೂಳಖೇಡ ಮತ್ತು ಶಿರನಾಳ, ಡಿ.23ರಂದು ರೇವತಗಾಂವ ಹಾಗೂ ಶಿರಾಡೋಣ, ಡಿ.24ರಂದು ಉಮರಾಣಿ ಮತ್ತು ಟಾಕಳಿ, ಡಿ.25ರಂದು ಬರಡೋಲ ಹಾಗೂ ಗೋಡಿಹಾಳ, ಡಿ.26ರಂದು ದೇವರನಿಂಬರಗಿ ಹಾಗೂ ಜೀರಅಂಕಲಗಿ, ಡಿ.27ರಂದು ಚಡಚಣ ಮತ್ತು ಕೋರೆಗಾಂವ್, ಡಿ.28ರಂದು ಹತ್ತಳ್ಳಿ ಹಾಗೂ ಹಾವಿನಾಳ, ಡಿ.29ರಂದು ನೀವರಗಿ ಗ್ರಾಮದಲ್ಲಿ ಮತ್ತು ಡಿ.30ರಂದು ಜಿಗಜೇವಣಗಿ ಗ್ರಾಮದಲ್ಲಿ ಬೀದಿನಾಟಕಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ-ಜಾಗೃತಿ ಮೂಡಿಸಲಿವೆ.

ಜಾನಪದ ಸಂಗೀತ ಕಲಾ ತಂಡವು ಡಿ.21ರಂದು ಯಲಗೋಡ ಹಾಗೂ ಕರವಿನಾಳ, ಡಿ.22ರಂದು ಕೆರೂಟಗಿ ಹಾಗೂ ಕುದರಗೊಂಡ, ಡಿ.23ರಂದು ಹುಣಶ್ಯಾಳ ಮತ್ತು ಆಲಗೂರ, ಡಿ.24ರಂದು ಹೊನ್ನಳ್ಳಿ ಹಾಗೂ ಬ್ರಹ್ಮದೇವರಮಡು, ಡಿ.25ರಂದು ಕಲಕೇರಿ ಮತ್ತು ಬಿಂಜಲಭಾವಿ, ಡಿ.26ರಂದು ಕೊಂಡಗೂಳಿ ಹಾಗೂ ಬಿಬಿಇಂಗಳಗಿ, ಡಿ.27ರಂದು ಜಾಲವಾದ ಮತ್ತು ಇಬ್ರಾಹಿಂಪುರ, ಡಿ.28ರಂದು ಅಸ್ಕಿ ಹಾಗೂ ನೀರಲಗಿ, ಡಿ.29ರಂದು ಬೆಕಿನಾಳ ಹಾಗೂ ವನಕಿಹಾಳ ಗ್ರಾಮಗಳಲ್ಲಿ ಮತ್ತು ಡಿ.30ರಂದು ಕೋರವಾರ ಹಾಗೂ ಕೋರವಾರ ತಾಂಡಾಗಳಲ್ಲಿ ಜಾನಪದ ಸಂಗೀತದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಜಾಗೃತಿ ಮೂಡಿಸಲಿವೆ.

ಕೊಡಗಿನಲ್ಲಿ ಅನಾವರಣಗೊಂಡ ಹಾಡಿ ಸಂಸ್ಕೃತಿ, ಶ್ರೀಮಂತ ಜಾನಪದ ಕಲೆಗಳ ಅನಾವರಣ

2 ಕಲಾ‌ತಂಡಗಳ ಆಯ್ಕೆ:
ಮಂಗಳವಾರದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಈ ಎರಡು ತಂಡಗಳ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಗುರುಪ್ರಸಾದ ಜಾನಪದ ಕಲಾ ತಂಡ ಹಾಗೂ ವಿಶ್ವಚೇತನ ಕಲಾ ತಂಡ ಎರಡೂ ತಂಡಗಳು ಬೀದಿ ನಾಟಕ ಹಾಗೂ ಜಾನಪದ ಸಂಗೀತದ ಮೂಲಕ ಯೋಜನೆಗಳ ಮಾಹಿತಿಯನ್ನು ತಂಡಗಳ ಆಯ್ಕೆ ಸಮಿತಿ ಸದಸ್ಯರ ಸಮ್ಮುಖ ಪ್ರದರ್ಶಿಸಿದರು.

Tumakur: ದೃಶ್ಯ ಮಾಧ್ಯಮದಿಂದ ಕ್ಷೀಣಿಸುತ್ತಿರುವ ಜಾನಪದ ಕಲೆ

 

ಈ ಸಂದರ್ಭದಲ್ಲಿ ಕಲಾ ತಂಡಗಳ ಆಯ್ಕೆ ಸಮಿತಿ ಸದಸ್ಯರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ.ಲೋಣಿ, ಸಮಾಜ ಕಲ್ಯಾಣ ಇಲಾಖೆಯ ಟಿ.ವಿ.ಮಂಟೂರ ಹಾಗೂ ಡಾ.ರಾಘವೇಂದ್ರ ಲಂಬು,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಪ್ರಸಿದ್ಧ ಕೊಳಲು ವಾದಕ ಬಾಬುಜಿ. ನಾಯ್ಕೋಡಿ ಉಪಸ್ಥಿತರಿದ್ದರು.

Follow Us:
Download App:
  • android
  • ios