ಮೈಸೂರು(ಡಿ.03): ಮೈಸೂರು ವಿಮಾನ ನಿಲ್ದಾಣಕ್ಕೆ ನಗರ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌ ಸೇವೆ ಆರಂಭಿಸಿದೆ. ಮಂಡಕಳ್ಳಿಯಲ್ಲಿನ ವಿಮಾನ ನಿಲ್ದಾಣಕ್ಕೂ ನಗರ ಬಸ್‌ ನಿಲ್ದಾಣ, ಗ್ರಾಮಾಂತರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಜೆ.ಪಿ. ನಗರ ಮಾರ್ಗವಾಗಿ ವೋಲ್ವೋ ಬಸ್‌ ಸಂಚರಿಸಲಿದೆ.

ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಜಸ್ಟಿಕ್‌ನಿಂದ ಮತ್ತು ಮೈಸೂರಿನಿಂದ ಫ್ಲೈ ಬಸ್‌ ಹೆಸರಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ ಸೇವೆ ಒದಗಿಸಿರುವ ಮಾದರಿಯಲ್ಲಿಯೇ ಮೈಸೂರಿನ ಮಂಡಕಳ್ಳಿಯಲ್ಲಿನ ವಿಮಾನ ನಿಲ್ದಾಣಕ್ಕೂ ನಗರ ಬಸ್‌ ನಿಲ್ದಾಣ, ಗ್ರಾಮಾಂತರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಜೆ.ಪಿ. ನಗರ ಮಾರ್ಗವಾಗಿ ವೋಲ್ವೋ ಬಸ್‌ ಸಂಚರಿಸಲಿದೆ.

ಡಿ.5 ರಂದು ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ವೇತನ ಸಹಿತ ರಜೆ

ಮೈಸೂರಿನಿಂದ ಪ್ರತಿನಿತ್ಯ ಚೆನ್ನೈಗೆ ಎರಡು ಬಾರಿ, ಹೈದರಾಬಾದ್‌ಗೆ ಎರಡು ಬಾರಿ, ಗೋವಾ, ಕೊಚ್ಚಿನ್‌ ಮತ್ತು ಕೊಚ್ಚಿನ್‌ಗೆ ವಿಮಾನಗಳು ಸಂಚರಿಸುವುದರಿಂದ ವಿಮಾನಗಳು ಬಂದಿಳಿಯುವ ವೇಳೆಗೆ ಸರಿಯಾಗಿ ವೋಲ್ವೋ ಬಸ್‌ ಸಿದ್ಧವಿರುತ್ತದೆ. ಪ್ರಯಾಣಿಕರಿಂದಲೂ ಬಸ್‌ಗೆ ಬೇಡಿಕೆ ಹೆಚ್ಚಾಗಿದೆ.

ವಿಮಾನ ನಿಲ್ದಾಣ ನಗರದ ಹೊರ ವಲಯದಲ್ಲಿ ಇರುವುದರಿಂದ ಟ್ಯಾಕ್ಸಿ ಅಥವಾ ಸ್ವಂತ ಕಾರನ್ನು ಪ್ರಯಾಣಿಕರು ಅವಲಂಬಿಸಬೇಕು. ಕೆಲವೊಂದು ವೇಳೆ ತುರ್ತಾಗಿ ಟ್ಯಾಕ್ಸಿ ವ್ಯವಸ್ಥೆ ದೊರಕದಿದ್ದಲ್ಲಿ ಅಥವಾ ಟ್ಯಾಕ್ಸಿ ವೆಚ್ಚವೇ ದುಬಾರಿಯಾಗುವುದರಿಂದ ವೋಲ್ವೋ ಬಸ್‌ ಸೇವೆಯನ್ನು ಕಲ್ಪಿಸಿರುವುದು ವಿಮಾನಯಾನಾರ್ಥಿಗಳಿಗೆ ಅನುಕೂಲವಾಗಿದೆ. ಬಸ್‌ಗಳಲ್ಲಿ ಅಳವಡಿಸಿರುವ ತಂತ್ರಜ್ಞಾನದ ಸಾಹಯದಿಂದ ವಿಮಾನ ಎಷ್ಟೊತ್ತಿಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.

ಆ ಸಮಯಕ್ಕೆ ಹತ್ತು ನಿಮಿಷ ಮುಂಚಿತವಾಗಿ ವೋಲ್ವೋ ಬಸ್‌ ತೆರಳುತ್ತದೆ. ಪ್ರಸ್ತುತ ಪ್ರತಿ ಟ್ರಿಪ್‌ಗೆ ಕನಿಷ್ಠ 15 ರಿಂದ 20 ಮಂದಿ ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಬಸ್‌ಗೆ ಬೇಡಿಕೆ ಹೆಚ್ಚಾಗಿದೆ. ರಾತ್ರಿ ವೇಳೆ ಕುಟುಂಬ ಸಮೇತರಾಗಿ ಆಗಮಿಸುವವರು ಮತ್ತು ಒಬ್ಬರೇ ಆಗಮಿಸುವ ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ.

ಚಿಕ್ಕಬಳ್ಳಾಪುರ: ಕುಮಾರಸ್ವಾಮಿಗೆ ಕೈ ಕೊಟ್ಟ ಹೆಲಿಕಾಪ್ಟರ್‌

ಸಾಮಾನ್ಯವಾಗಿ ಪ್ರವಾಸಕ್ಕಾಗಿ ಆಗಮಿಸುವವರು ಪ್ಯಾಕೇಜ್‌ ಆಧಾರದ ಮೇಲೆ ಮುಂಚೆಯೇ ಕಾರನ್ನು ಬುಕ್‌ ಮಾಡಿಕೊಳ್ಳುವವರಿದ್ದಾರೆ. ಇವರನ್ನು ಹೊರತುಪಡಿಸಿ ಸ್ಥಳೀಯರು, ಇನ್‌ಪೋಸಿಸ್‌ಗೆ ತೆರಳುವ ಟೆಕ್ಕಿಗಳು, ಮದುವೆಗೆ ಆಗಮಿಸುವ ಪ್ರಯಾಣಿಕರಿಗೆ ವೋಲ್ವೋ ವರದಾನವಾಗಿದೆ. ಇದಲ್ಲದೆ ನಂಜಂಗೂಡು- ಮೈಸೂರು ನಡುವೆ ಸಂಚರಿಸುವ 401ಎ ಬಸ್‌ ಕೂಡ ವಿಮಾನ ನಿಲ್ದಾಣದ ಹೊರಗೆ ಕೋರಿಕೆಯ ಮೇಲೆ ನಿಲುಗಡೆ ಮಾಡುವುದರಿಂದ ಆ ಬಸ್‌ಗಳ ಸೇವೆಯನ್ನು ಪಡೆಯಬಹುದಾಗಿದೆ.