Asianet Suvarna News Asianet Suvarna News

2ನೇ ಬಾರಿ ಸಿ.ಪಿ.ಯೋಗೇಶ್ವರ್‌ಗೆ ಎದುರಾದ ಕಹಿ ಅನುಭವ

  • ಯೋಗೇಶ್ವರ್  ತನ್ನ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ
  • ಸಿಪಿ ಯೋಗೇಶ್ವರ್ ಸಚಿವ ಸ್ಥಾನ ಕಳೆದುಕೊಂಡ ಎರಡನೇ ಬಾರಿ ಕಹಿ ಅನುಭವ ಎದುರಿಸಿದ್ದಾರೆ
Second Time CP Yogeshwar lost minister post snr
Author
Bengaluru, First Published Aug 5, 2021, 2:49 PM IST
  • Facebook
  • Twitter
  • Whatsapp

ಚನ್ನಪಟ್ಟಣ (ಆ.05): ಇದೀಗ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಪದತ್ಯಾಗಗೊಳಿಸುವ ಮೂಲಕ ರಾಜಕೀಯದ ಚಕ್ರವ್ಯೂಹ ಬೇಧಿಸುವಲ್ಲಿ ಸಫಲಗೊಂಡ ಯೋಗೇಶ್ವರ್  ತನ್ನ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ತನ್ನ ರಾಜಕೀಯ ವಿರೋಧಿಗಳಾದ ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಜೊತೆಗೆ ಸಿಎಂ ಯಡಿಯೂರಪ್ಪ  ಹೊಂದಿದ್ದ ಬಾಂಧವ್ಯ ಯೋಗೇಶ್ವರ್ ಹಣ್ಣೆ ಕೆಂಪಗಾಗಿಸಿತ್ತು. ಈ ಹೊಮದಾಣಿಕೆ ತವರು ಜಿಲ್ಲೆಯಲ್ಲಿ ನನ್ನ ರಾಜಕೀಯ ಏಳ್ಗೆಗೆ ಮಗ್ಗುಲ ಮುಳ್ಳು ಎಂಬುದನ್ನು ಅರಿತ ಯೋಗೇಶ್ವರ್  ಯಡಿಯೂರಪ್ಪ ವಿರುದ್ಧ ಬಂಡಾಯ ಮಾಡಿ  ಪದತ್ಯಾಗಕ್ಕೆ ಕಾರಣರಾದರು. ಇದೀಗ ಅವರಿಗೆ ಸಚಿವ ಸ್ಥಾನವೂ ಸಿಗಲಿಲ್ಲ. 

ಸಂಪುಟದಿಂದ ಬೆಲ್ಲದ್, ಯತ್ನಾಳ್, ಯೋಗೇಶ್ವರ್‌ಗೆ ದೂರ, ಬಂಡಾಯ ನಾಯಕರಿಗೆ ಬೊಮ್ಮಾಯಿ ಉತ್ತರ!

ಎರಡನೇ ಬಾರಿ ಕಹಿ ಅನುಭ : 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ವಿಧಾನಸೌಧ ಪ್ರವೇಶಿಸಿದ ಯೋಗೇಶ್ವರ್ ಬಳೀಕ ಕಾಂಗ್ರೆಸ್‌ಗೆ ಸೇರಿದರು. 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವುದು ಸಾಧಿಸಿದ್ದರು. 2009ರಲ್ಲಿ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ  ಬಿಜೆಪಿ ಸೇರಿದ ಯೋಗೇಶ್ವರ್ 2010ರ ಮರುಚುನಾವಣೆಯಲ್ಲಿ ಸೋತಿದ್ದರು ಕೆಎಸ್‌ಐಸಿ ಅಧ್ಯಕ್ಷ ಸ್ಥಾನ ಪಡೆದಿದ್ದರು. 2011ರಲ್ಲಿ ಜೆಡಿಎಸ್ ಶಾಸಕ ಅಶ್ವತ್ಥ್  ರಾಜೀನಾಮೆಯಿಂದ ತೆರವಾದ ಉಪ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಮಂತ್ರಿಗಿರಿ ಅಲಂಕರಿಸದರು ಮತ್ತೆ ಸಮಾಜವಾದಿ  ಪಕ್ಷದಿಂದ ಶಾಸಕರಾಗಿ  ಕಾಂಗ್ರೆಸ್‌ಗೆ ಹಿಂದಿರುಗಿದರು. 

2018ರಲ್ಲಿ ಬಿಜೆಪಿಗೆ ಸೇರಿದರು. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರಾಜಿತಗೊಂಡಿದ್ದ ಯೋಗೇಶ್ವರ್  ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರ್ಕಾರವನ್ನು ಕೆಡವುವ ಮೂಲಕ  ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ  ಚುನಾವಣೆಯಲ್ಲಿ ಅರ್ಹತೆ ಪಡೆದ ಶಾಸಕರ ಜೊತೆಗೆ ಮೊದಲ ಬಾರಿ ತಪ್ಪಿಸಿಕೊಂಡರು ಎರಡನೇ ಬಾರಿ  ಸಚಿವ ಸ್ಥಾನ ಪಡೆದರು. ಇದೀಗ ಮತ್ತೆ ಕೈ ತಪ್ಪಿ ಹೋಗಿದೆ.

Follow Us:
Download App:
  • android
  • ios