ಎಸ್ಸಿ ಆಂತರಿಕ ಮೀಸಲಾತಿಗೆ ಸಲ್ಲಿಸಿರುವ ಶಿಫಾರಸುಗಳು ಅವೈಜ್ಞಾನಿಕ ಆರೋಪ
ಮತ ಬ್ಯಾಂಕ್ ಗಾಗಿ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸಂಬಂಧಿಸಿದಂತೆ ಆಂತರಿಕ ಮೀಸಲಾತಿ ಪರಿಗಣಿಸಲು ಕೇಂದ್ರಕ್ಕೆ ಕಳುಹಿಸಿರುವ ಸಚಿವ ಸಂಪುಟದ ಉಪ ಸಮಿತಿ ಶಿಫಾರಸುಗಳು ಅವೈಜ್ಞಾನಿಕವಾಗಿವೆ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಆರೋಪಿಸಿದರು.
ಮೈಸೂರು : ಮತ ಬ್ಯಾಂಕ್ ಗಾಗಿ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸಂಬಂಧಿಸಿದಂತೆ ಆಂತರಿಕ ಮೀಸಲಾತಿ ಪರಿಗಣಿಸಲು ಕೇಂದ್ರಕ್ಕೆ ಕಳುಹಿಸಿರುವ ಸಚಿವ ಸಂಪುಟದ ಉಪ ಸಮಿತಿ ಶಿಫಾರಸುಗಳು ಅವೈಜ್ಞಾನಿಕವಾಗಿವೆ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಆರೋಪಿಸಿದರು.
ಕಳೆದ ವರ್ಷದ ಡಿಸೆಂಬರ್ 13 ರಂದು ಆಗಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಿದ ಸಂಪುಟ ಉಪ ಸಮಿತಿಯ 2011ರ ಜನಗಣತಿ ಮಾಹಿತಿ ಆಧರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆಂತರಿಕ ಮೀಸಲಾತಿಯ ನಾಲ್ಕು ಗುಂಪುಗಳನ್ನು 2011ರ ಜನಗಣತಿಯಂತೆ ತಯಾರಿಸಲಾಗಿತ್ತು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದರೆ, ಜಿಲ್ಲಾವಾರು ಜನಗಣತಿ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿದಾಗ ಜಾತಿವಾರು ಜನಗಣತಿಗೆ ಅನುಗುಣವಾಗಿ ವರ್ಗೀಕರಿಸದೇ ಅವೈಜ್ಞಾನಿಕವಾಗಿ ವಿಂಗಡಿಸಿರುವುದು ತಿಳಿದು ಬಂದಿದೆ. ಇದರಿಂದಾಗಿ ಆ ಉಪ ಸಮಿತಿಯ ನಿರ್ಣಯದಲ್ಲಿ ಹಲವಾರು ನ್ಯೂನತೆ ಕಂಡುಬಂದಿವೆ. ಹೀಗಾಗಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಹಿಂದೆ ಸಲ್ಲಿಸಿದ್ದ ಶಿಫಾರಸನ್ನು ವಾಪಸು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಭೋವಿ ಸಮುದಾಯದ ಮುಖಂಡರಾದ ಮಲ್ಲಣ್ಣ, ಬಸವರಾಜು, ಸೋಮಣ್ಣ, ಪರಮೇಶ್ ಇದ್ದರು.
ಮತ್ತಷ್ಟು ಗ್ತಾರಂಟಿ ಘೋಷಿಸಿದ ಕೈ
ಹೈದರಾಬಾದ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಬುಧವಾರ ಘೋಷಿಸಿದೆ.
ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyankha Gandhi) ‘ಅಂಬೇಡ್ಕರ್ ಅಭಯ ಹಸ್ತ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 12 ಲಕ್ಷ ರು.ವರೆಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.18ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಐವರು ದೋಷಿ: ದೆಹಲಿ ಹೈಕೋರ್ಟ್
ಅಲ್ಲದೇ ಪ್ರತಿಯೊಂದು ಅಡವಿ ಗ್ರಾಮ ಪಂಚಾಯತ್‌ಗಳಿಗೆ 25 ಲಕ್ಷ ರು. ಆರ್ಥಿಕ ನೆರವು, 1 ವರ್ಷದಲ್ಲಿ 2 ಲಕ್ಷ ನೇಮಕಾತಿ, ನಿರುದ್ಯೋಗಿಗಳಿಗೆ 4 ಸಾವಿರ ರು. ಮಾಸಿಕ ಭತ್ಯೆ, ಹುತಾತ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಗಲ್ಫ್ (Galf) ದೇಶಗಳಲ್ಲಿ ಯುವಕರಿಗೆ ಕೆಲಸ ದೊರಕಿಸುವುದಕ್ಕಾಗಿ ಗಲ್ಫ್ ಸೆಂಟರ್ ಸ್ಥಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು 500 ರು.ಗೆ ಗ್ಯಾಸ್ ಸಿಲಿಂಡರ್, ರೈತರ 2 ಲಕ್ಷ ರು. ಸಾಲ ಮನ್ನಾ, ಮಹಿಳೆಯರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರು. ನೆರವು, ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 4 ಸಾವಿರ ರು. ನೆರವು ಮತ್ತು ರೈತರಿಗೆ ವಾರ್ಷಿಕ 15 ಸಾವಿರ ರು. ಆರ್ಥಿಕ ನೆರವು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು.
ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಶೇ.4 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ನಿರ್ಧಾರ
ಈ ವರ್ಷ 34 ಲಕ್ಷ ಮದುವೆಯಿಂದ 4 ಲಕ್ಷ ಕೋಟಿ ವಹಿವಾಟು ನಿರೀಕ್ಷೆ
ನವದೆಹಲಿ: ಉತ್ಥಾನ ದ್ವಾದಶಿಯಿಂದ ಪ್ರಾರಂಭವಾಗುವ ಮದುವೆ ಸೀಸನ್‌ನಲ್ಲಿ ಭಾರತದಲ್ಲಿ 4.25ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ (Traders Association) ಅಂದಾಜಿಸಿದೆ. ಭಾರತದಲ್ಲಿ ನ.23 ಹಾಗೂ ಡಿ.15ರ ನಡುವೆ ಸುಮಾರು 34 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಅದರಿಂದ ವಿವಿಧ ಆತಿಥ್ಯ ವಲಯದ ಉದ್ಯಮಗಳಿಗೆ ಭಾರೀ ಪ್ರಮಾಣದ ವಹಿವಾಟು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಇಸ್ರೇಲ್ ಹಮಾಸ್ ಮಧ್ಯೆ ಇದೇ ಇದುವರೆಗಿನ ಭೀಕರ ಯುದ್ಧ: 7400ಕ್ಕೂ ಹೆಚ್ಚು ಬಲಿ
ದೆಹಲಿಯೊಂದರಲ್ಲೇ ಸುಮಾರು 3.5 ಲಕ್ಷ ವಿವಾಹಗಳು (Wedding) ಸೆಟ್ಟೇರುವ ನಿರೀಕ್ಷೆಯಿದ್ದು, ಅದರಿಂದ 1 ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ವಿವಾಹವನ್ನು ತಮ್ಮ ಶಕ್ತ್ಯಾನುಸಾರ 3ಲಕ್ಷ ರು. ಇಂದ 1 ಕೋಟಿ ರು.ವರೆಗೂ ಖರ್ಚು ಮಾಡುವವರಿದ್ದು, ಅದರಿಂದ ಆತಿಥ್ಯವಲಯವಲ್ಲದೆ ಕೆಲವು ಸೇವಾ ವಲಯದ ಉದ್ಯಮಗಳಿಗೂ ಭರ್ಜರಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.