ಮೈಸೂರು ಅರಮನೆಯಲ್ಲೂ ಕೊರೋನಾ ವೈರಸ್ ಭೀತಿ..!

ಬೆಂಗಳೂರಲ್ಲಿ ಕೊರೋನಾ ವೈರಸ್ ಬಗ್ಗೆ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಭೀತಿ ಶುರುವಾಗಿದೆ. ಪ್ರಮುಖ ಪ್ರವಾಸಿ ಸ್ಥಳವಾದ ಮೈಸೂರಿನಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕೊರೋನಾ ಆತಂಕ ಎದುರಾಗಿದೆ.

 

Corona virus fear in Mysore Palace as so many tourists visit place

ಮೈಸೂರು(ಮಾ.03): ಬೆಂಗಳೂರಲ್ಲಿ ಕೊರೋನಾ ವೈರಸ್ ಬಗ್ಗೆ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಭೀತಿ ಶುರುವಾಗಿದೆ. ಪ್ರಮುಖ ಪ್ರವಾಸಿ ಸ್ಥಳವಾದ ಮೈಸೂರಿನಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕೊರೋನಾ ಆತಂಕ ಎದುರಾಗಿದೆ.

"

ಮಹಾಮಾರಿ ಬುಡಕ್ಕೆ ಬಂದರೂ ಮೈಸೂರಿನಲ್ಲಿ ಮಾತ್ರ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ನಿತ್ಯ ಸಾವಿರಾರು ಜ‌ನ ಪ್ರವಾಸಿಗರು ಇರುವ ಜಾಗದಲ್ಲೂ ಜಾಗೃತಿ ಬಗ್ಗೆ ಅಧಿಕಾರಿಗಳು ನಿರಾಸಕ್ತಿ ತೋರಿಸಿರುವುದು ವಿಪರ್ಯಾಸ.

ತೆಲಂಗಾಣದಲ್ಲಿ 380 ಮಂದಿಗೆ ಕೊರೋನಾ ವೈರಸ್ ಶಂಕೆ

ಅಧಿಕಾರಿಗಳು ಮೈಸೂರು ಅರಮನೆ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಅರಮನೆ ಅಂಗಳದಲ್ಲಿ ವೈದ್ಯರು, ಕೊರೋನಾ ಕಿಟ್ ಯಾವುದೂ ಕಂಡು ಬಂದಿಲ್ಲ. ಕೇರಳ, ತಮಿಳು‌ನಾಡು, ಸೇರಿ ವಿದೇಶಿ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಅರಮನೆಗೆ ಬರುವ ವಿದೇಶಿ ಪ್ರವಾಸಿಗರ ಆರೋಗ್ಯ ತಪಾಸಣೆಯನ್ನೂ ಮಾಡುತ್ತಿಲ್ಲ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ವೈಫಲ್ಯ ಒಪ್ಪಿಕೊಂಡಿದ್ದಾರೆ. ಅರಮನೆಗೆ ನಿತ್ಯವೂ ಸಾವಿರಾರು ಜನ ಬಂದು ಹೋಗುತ್ತಾರೆ. ಆದರೆ ಯಾರಿಗೂ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲೇ ಇರುತ್ತಾರೆ. ಆದರೆ ಎಲ್ಲರಿಗೂ ಮಾಸ್ಕ್ ನೀಡುವ ಅಗತ್ಯವೂ ಇಲ್ಲ. ಮಾಸ್ಕ್‌ಗಳನ್ನು ರೆಡಿ ಇಟ್ಟುಕೊಂಡಿದ್ದೇವೆ. ಯಾರಿಗೂ ವಿತರಣೆ ಮಾಡುತ್ತಿಲ್ಲ. ಸರ್ಕಾರದಿಂದ ಆದೇಶ ಬಂದರೆ ಕೂಡಲೇ ಮಾಸ್ಕ್‌ಗಳ ವಿತರಣೆ ಮಾಡಲಾಗುವುದು. ನಿಫಾಗೆ ಹೋಲಿಸಿದರೆ ಕರೋನ ಭಿನ್ನವಾದ ವೈರಸ್. ಪ್ರವಾಸಿಗರ ಸ್ವಚ್ಚತೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

N95ಮಾಸ್ಕ್‌ಗಳು ಸಿಗುತ್ತಿಲ್ಲ:

ಮೈಸೂರಿನಲ್ಲಿ ಕರೋನ ವೈರಸ್ ತಡೆಗಟ್ಟುವ ಮಾಸ್ಕ್‌ಗಳು ಇಲ್ಲ. ಸದ್ಯ ನಮ್ಮಲ್ಲಿ‌ N95ಮಾಸ್ಕ್‌ಗಳು ಇಲ್ಲ. ನಾವು ಸಾಕಷ್ಟು ಡೀಲರ್‌ಗಳಿಗೆ ಕೇಳಿದ್ದೇವೆ. ಇನ್ನೂ ಕೂಡ ತಲುಪಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios