Asianet Suvarna News Asianet Suvarna News

ಯಾದಗಿರಿ: ರೈತರಿಗೆ ತಪ್ಪದ ಬ್ಯಾಂಕ್ ಕಾಟ, ಸಿಎಂ ಸಿದ್ದರಾಮಯ್ಯ ಮಾತಿಗೂ ಕಿಮ್ಮತ್ತಿಲ್ವಾ?

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶೆಟ್ಟಿಕೇರಾ ಗ್ರಾಮದ ಶೆಟ್ಟಿಕೇರಾ ಗ್ರಾಮದ ಮಲ್ಲಿಕಾರ್ಜುನ ಹಾಗೂ ಭೀಮಣ್ಣ ಅವರ ಖಾತೆಗೆ ಬರ ಪರಿಹಾರದ ಹಣ ಜಮೆಯಾಗಿತ್ತು. ಪಿಎಂ ಕಿಸಾನ್ ಹಾಗೂ ಬೆಳೆ ಪರಿಹಾರದ ಹಣ ಜಮೆಯಾಗಿತ್ತು. ಆದ್ರೆ ಹೊಸಕೇರಾ SBI ಬ್ಯಾಂಕ್ ಸಾಲಕ್ಕೆ ಜಮೆ ಮಾಡಿಕೊಂಡಿದೆ. 60 ಸಾವಿರ ರೂ. ಕ್ಕೂ ಹೆಚ್ಚು ಹಣ ಸಾಲಕ್ಕೆ ಜಮೆ ಮಾಡಿಕೊಂಡಿದೆ. 

SBI Bank Deposited the Farmers Drought Compensation Money for Loan in Yadgir grg
Author
First Published Jun 13, 2024, 12:13 PM IST | Last Updated Jun 13, 2024, 12:13 PM IST

ಯಾದಗಿರಿ(ಜೂ.13):  ಯಾದಗಿರಿ ಜಿಲ್ಲೆಯ ರೈತರಿಗೆ ಬ್ಯಾಂಕ್‌ಗಳ ಕಾಟ ತಪ್ಪುವ ಹಾಗೆ ಕಾಣುತ್ತಿಲ್ಲ. ಹೌದು, ಬರ ಪರಿಹಾರದ ಹಣವನ್ನ ಸಾಲಕ್ಕೆ ಜಮೆ ಮಾಡಿಕೊಂಡು ಬ್ಯಾಂಕ್‌ಗಳು ರೈತರಿಗೆ ಬದುಕಿಗೆ ಬರೆ ಎಳೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಸೂಚಿಸಿದ್ರೂ ಬ್ಯಾಂಕ್ ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. 

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶೆಟ್ಟಿಕೇರಾ ಗ್ರಾಮದ ಶೆಟ್ಟಿಕೇರಾ ಗ್ರಾಮದ ಮಲ್ಲಿಕಾರ್ಜುನ ಹಾಗೂ ಭೀಮಣ್ಣ ಅವರ ಖಾತೆಗೆ ಬರ ಪರಿಹಾರದ ಹಣ ಜಮೆಯಾಗಿತ್ತು. ಪಿಎಂ ಕಿಸಾನ್ ಹಾಗೂ ಬೆಳೆ ಪರಿಹಾರದ ಹಣ ಜಮೆಯಾಗಿತ್ತು. ಆದ್ರೆ ಹೊಸಕೇರಾ SBI ಬ್ಯಾಂಕ್ ಸಾಲಕ್ಕೆ ಜಮೆ ಮಾಡಿಕೊಂಡಿದೆ. 60 ಸಾವಿರ ರೂ. ಕ್ಕೂ ಹೆಚ್ಚು ಹಣ ಸಾಲಕ್ಕೆ ಜಮೆ ಮಾಡಿಕೊಂಡಿದೆ.  ಈಗಾಗಲೇ ಬರಗಾಲಕ್ಕೆ ತುತ್ತಾಗಿ ಸಾಲದ ಸುಳಿಯಲ್ಲಿ ರೈತರು ಸಿಲುಕಿದ್ದಾರೆ. ಈಗ ಬ್ಯಾಂಕ್ ಅಧಿಕಾರಿಗಳ ಮೋಸದಾಟಕ್ಕೆ ರೈತರು ಮತ್ತಷ್ಟು ಹೈರಾಣಾಗಿದ್ದಾರೆ. 

ಯಾದಗಿರಿ: ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದುಬಿದ್ದ ವಿದ್ಯುತ್ ವೈರ್, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು..!

ಈಗಾಗಲೇ ಸಾಕಷ್ಟು ಸಮಸ್ಯೆಯಿಂದ ಬಳಲಿ ಹೋಗಿದ್ದೇವೆ. ಮಾಡಿದ ಸಾಲವನ್ನು ತೀರಿಸಲಾರದಂತ ದುಸ್ಥಿತಿ ಬಂದಿದೆ. ಇಷ್ಟಾದ್ರೂ ಸರ್ಕಾರ ಹಾಗೂ ಬ್ಯಾಂಕ್‌ನವರು ನಮ್ಮ‌ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸಾಲಕ್ಕೆ ಜಮೆ ಮಾಡಿದ ಹಣವನ್ನು ವಿತ್ ಡ್ರಾಗೆ ಸೂಚಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios