ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎರಡು ತಿಂಗಳಿಗೂ ಮುನ್ನ ಭರ್ತಿ: 1.48 ಕೋಟಿ ರೂ. ಸಂಗ್ರಹ

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಕಳೆದ 55 ದಿನಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 1.48 ಕೋಟಿ ರೂ. ಸಂಗ್ರಹವಾಗಿದೆ. ಈ ಮೊತ್ತದಲ್ಲಿ 1.35 ಕೋಟಿ ರೂ. ನಗದು, 11.79 ಲಕ್ಷ ಮೌಲ್ಯದ ಚಿನ್ನ ಮತ್ತು 1.80 ಲಕ್ಷ ಮೌಲ್ಯದ ಬೆಳ್ಳಿ ಸೇರಿವೆ.

Savadatti Yallamma temple hundi filled up before two months Rs 1 48 crore Collection sat

ಬೆಳಗಾವಿ (ಸೆ.15): ರಾಜ್ಯದ ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಬಳಿಯ ಚಾಮುಂಡಿ ಬೆಟ್ಟದ ನಾಡದೇವತೆ ಚಾಮುಂಡೇಶ್ವರಿ ದೇವರಷ್ಟೇ, ಉತ್ತರ ಕರ್ನಾಟಕ ಭಾಗದಲ್ಲಿ ಮಹಿಮೆ, ಪ್ರಸಿದ್ಧಿ ಹಾಗೂ ಭಕ್ತರನ್ನು ಹೊಂದಿರುವ ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗಳು 2 ತಿಂಗಳಿಗಿಂತ ಮೊಲದೇ ಭರ್ತಿಯಾಗಿವೆ. ಈ ಹುಂಡಿಗಳಲ್ಲಿನ ಹಣವನ್ನು ಎಣಿಕೆ ಮಾಡಲಾಗಿದ್ದು, ಬರೋಬ್ಬರಿ 1.48 ಕೋಟಿ ರೂ, ಹಣ ಸಂಗ್ರಹ ಆಗಿರುವುದು ತಿಳಿದುಬಂದಿದೆ.

ಹೌದು, ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕಳೆದ 55 ದಿನಗಳಲ್ಲಿ (ಮೇ 25ರಿಂದ ಜುಲೈ 20ರವರೆಗೆ) ಹುಂಡಿಯಲ್ಲಿ ಸಂಗ್ರಗಣೆಯಾದ ಹಣವನ್ನು, ಚಿನ್ನ, ಬೆಳ್ಳಿ ತುಣುಕು ಹಾಗೂ ಆಭರಣಗಳನ್ನು ಲೆಕ್ಕ ಹಾಕಲಾಗಿದೆ. ಇದರಲ್ಲಿ 1.35 ಕೋಟಿ ಹಣ, 11.79 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ಮೌಲ್ಯದ  ಬೆಳ್ಳಿ ಸಂಗ್ರಹ ಸೇರಿದಂತೆ ಒಟ್ಟು 1,48,95,404 ಕಾಣಿಕೆ ಸಂಗ್ರಹವಾಗಿದೆ. ಮೇ 25ರಿಂದ ಜುಲೈ 20ರ ನಡುವಿನ ಅವಧಿಯಲ್ಲಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹಾಕಿದ್ದ ಕಾಣಿಕೆ ಇದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಯಾಗುವ  ಪ್ಯಾಸೆಂಜರ್ ರೈಲುಗಳು ಬಂದ್! ಸರ್ಕಾರದ  ಮುಂದಿನ ಪ್ಲಾನ್‌ ಏನು?

ಉತ್ತರ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸವದತ್ತಿ ಯಲ್ಲಮ್ಮ ದೇವಿಗೆ ಹೆಚ್ಚು ಭಕ್ತರಿದ್ದಾರೆ. ಇನ್ನು ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆ ಆರಂಭವಾದ ಬೆನ್ನಲ್ಲಿಯೇ ದೇವಸ್ಥಾನಕ್ಕೆ ಬರುವ ರೈತರು ಸೇರಿದಂತೆ ಎಲ್ಲ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಂಗ್ರಹಣೆ ಆಗುವ ಕಾಣಿಕೆ ಹೆಚ್ಚಾಗಿರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಇಂದು ದೇವಸ್ಥಾನದ 55 ದಿನಗಳ ಹುಂಡಿ ಸಂಗ್ರಹಣೆ ಮೊತ್ತ 1.48 ಕೋಟಿ ರೂ.ಗೆ ತಲುಪಿರುವುದನ್ನು ಕಂಡು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು ಸಂಸತಸ ವ್ಯಕ್ತಪಡಿಸಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಸವದತ್ತಿ ಗುಡ್ಡಕ್ಕೆ ಬರುವ ಭಕ್ತರಿಗೆ, ಮೂಲಸೌಕರ್ಯ ಒದಗಿಸಲು ಈ ಹಣ ಸದ್ಬಳಕೆ ಮಾಡಲಾಗುವುದು.
- ವಿಶ್ವಾಸ ವೈದ್ಯ, ಶಾಸಕ

Latest Videos
Follow Us:
Download App:
  • android
  • ios