ಪುಟ್ಟ ಜಿಲ್ಲೆಯ ದಿಟ್ಟ ನಿರ್ಧಾರ: ಶನಿವಾರ, ಭಾನುವಾರ ಲಾಕ್‌ಡೌನ್
ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 26ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸಲಿದ್ದು, ಜುಲೈ 18 ಹಾಗೂ 25ರ ಶನಿವಾರ ಕಡ್ಡಾಯವಾಗಿ ಲಾಕ್‌ಡೌನ್ ಮಾಡಲು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ.
ಮಡಿಕೇರಿ(ಜು.11): ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 26ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸಲಿದ್ದು, ಜುಲೈ 18 ಹಾಗೂ 25ರ ಶನಿವಾರ ಕಡ್ಡಾಯವಾಗಿ ಲಾಕ್‌ಡೌನ್ ಮಾಡಲು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಚೇಂಬರ್ ನಗರಾಧ್ಯಕ್ಷ ಎಂ.ಧನಂಜಯ್, ಕೊಡಗಿನಂತಹ ಪುಟ್ಟಜಿಲ್ಲೆಯಲ್ಲಿ ಅತ್ಯಧಿಕ ಎನ್ನುವಷ್ಟರ ಮಟ್ಟಿಗೆ ಸೋಂಕು ಪ್ರಕರಣಗಳು ವ್ಯಾಪಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಇಮ್ಯುನಿಟಿ ಹೆಚ್ಚಿಸಿಕೊಳ್ಳುವತ್ತ ಸಿಎಂ ಗಮನ: ಡ್ರೈ ಫ್ರೂಟ್ಸ್, ಕಷಾಯ ಸೇರಿ ಪೌಷ್ಟಿಕ ಆಹಾರ ಸೇವನೆ
ನಗರದ ವರ್ತಕರು, ಸಾರ್ವಜನಿಕರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ವ-ನಿಬಂರ್‍ಧಕ್ಕೊಳಗಾಗುವ ಮೂಲಕ ಚೇಂಬರ್ ಆಫ್ ಕಾಮರ್ಸ್‌ನ ಪ್ರಯತ್ನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ನಗರ ಚೇಂಬರ್, ಜನರ ಕಾಳಜಿ ಹಾಗೂ ಬೇಡಿಕೆಯಂತೆ ಮಡಿಕೇರಿ ನಗರದ ವರ್ತಕರಿಂದ ಅಭಿಪ್ರಾಯ, ಪ್ರತಿಕ್ರಿಯೆ ನೀಡುವ ಸಲುವಾಗಿ ನಿಗದಿತ ನಮೂನೆಯನ್ನು ನೀಡಿ, ಲಿಖಿತ ರೂಪದಲ್ಲಿ, ವಾಟ್ಸಾಪ್ ಸಂದೇಶ ಹಾಗೂ ಮಾಧ್ಯಮಗಳಲ್ಲಿ 300ಕ್ಕೂ ಅಧಿಕ ವರ್ತಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಈ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಚೇಂಬರ್ ತುರ್ತು ಸಭೆಯಲ್ಲಿ ಮಂಡಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಧನಂಜಯ್ ತಿಳಿಸಿದ್ದಾರೆ.