ಇಮ್ಯುನಿಟಿ ಹೆಚ್ಚಿಸಿಕೊಳ್ಳುವತ್ತ ಸಿಎಂ ಗಮನ: ಡ್ರೈ ಫ್ರೂಟ್ಸ್, ಕಷಾಯ ಸೇರಿ ಪೌಷ್ಟಿಕ ಆಹಾರ ಸೇವನೆ

ಡ್ರೈ ಫ್ರೂಟ್ಸ್, ತಾಜಾ ತರಕಾರಿ, ಕಷಾಯ ಸೇರಿದಂತೆ ಹಲವು  ಪೌಷ್ಟಿಕ ಆಹಾರ ಸೇವಿಸುತ್ತಿರುವ ಸಿಎಂ ಜೊತೆಗೆ ತಮ್ಮ ನಿವಾಸ ಕಾವೇರಿ ಯಲ್ಲಿ ಪ್ರೀತಿಯಿಂದ ಸಾಕಿರುವ ಹಸುವಿನ ಹಾಲನ್ನೇ  ಟೀ, ಕಾಫಿಗೆ ಬಳಸುತ್ತಿದ್ದಾರೆ.

BS Yediyurappa follows food diet to increase immunity power

ಬೆಂಗಳೂರು(ಜು.11): ಕೊರೋನಾ ವ್ಯಾಪಕವಾಗಿ ಹರುಡುತ್ತಿರುವ ಹಿನ್ನಲೆಯಲ್ಲ್ಲಿ ವೈದ್ಯರ ಸಲಹೆಯಂತೆ ಸಿಎಂಇಮ್ಯುನಿಟಿ ಹೆಚ್ಚಿಸಿಕೊಳ್ಳುವತ್ತ ಗಮನ ನೀಡಿದ್ದಾರೆ. ತಮ್ಮ ಆಹಾರ ಪದ್ದತಿಯಲ್ಲಿ ಪೌಷ್ಟಿಕ ಆಹಾರಕ್ಕೆ ಸಿಎಂ ಮಹತ್ವ ನೀಡಿದ್ದಾರೆ.

ಡ್ರೈ ಫ್ರೂಟ್ಸ್, ತಾಜಾ ತರಕಾರಿ, ಕಷಾಯ ಸೇರಿದಂತೆ ಹಲವು  ಪೌಷ್ಟಿಕ ಆಹಾರ ಸೇವಿಸುತ್ತಿರುವ ಸಿಎಂ ಜೊತೆಗೆ ತಮ್ಮ ನಿವಾಸ ಕಾವೇರಿ ಯಲ್ಲಿ ಪ್ರೀತಿಯಿಂದ ಸಾಕಿರುವ ಹಸುವಿನ ಹಾಲನ್ನೇ  ಟೀ, ಕಾಫಿಗೆ ಬಳಸುತ್ತಿದ್ದಾರೆ.

ಡ್ರೈವರ್ ಸೇರಿದಂತೆ ಸಿಎಂ ಗೃಹ ಕಚೇರಿಯ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..!

ಸಿಎಂ ಬದಲಿ ಚಾಲಕ, ಅವರನ್ನು ಭೇಟಿ ಮಾಡಿದ ಶಾಸಕರು, ಸಂಸದಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಕಂಟಕ ಕಾಡತೊಡಗಿದ್ದು, ಬಿಎಸ್‌ ಯಡಿಯೂರಪ್ಪ ಸುತ್ತಲಿರುವವರಿಗೆ ಕೊರೋನಾ ತಗುಲಿರುವುದು ಆತಂಕಕ್ಕೆ ಕಾರಣವಾಗಿತ್ತು.

ಸಿಎಂ ಯಡಿಯೂರಪ್ಪ ತಮ್ಮ ಎಲ್ಲ ಕಾರ್ಯಚಟುವಟಿಕೆಗೆ ಪೋನ್ ಮೊರೆ ಹೋಗಿದ್ದಾರೆ. ಸಿಎಂ ಕಾರು ಚಾಲಕನಿಗೆ ಕೊರೋನಾ ಕಾಣಿಸಿಕೊಂಡಿದೆ ಎಂಬುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. 

Latest Videos
Follow Us:
Download App:
  • android
  • ios