ಕಾರವಾರ [ಜ.18]: ಕಳೆದ ಹಲವಾರು ದಿನಗಳಿಂದ ಬಿಜೆಪಿಗರು ತಮ್ಮ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇನೆ. ಈ ಯೋಜನೆಯ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಂಡು ಬಳಿಕ ಮಾತನಾಡಲಿ ಎಂದು ಮಾಜಿ ಶಾಸಕ ಸತೀಶ ಸೈಲ್ ಬಿಜೆಪಿಗರಿಗೆ ಟಾಂಗ್ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಮಿನುಗಾರರ ದಿಕ್ಕು ತಪ್ಪಿಸುವ ಕೆಲಸ ಸೈಲ್ ಮಾಡುತ್ತಾರೆ  ದಿದ್ದಾರೆ. ಸುನೀಲ ಹೆಗಡೆ, ಕೆ.ಜಿ. ನಾಯ್ಕ, ರಾಜೇಶ ನಾಯಕ ಒಳಗೊಂಡು ಹಲವಾರು ಜನರು ಟೀಕಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಯೋಜನೆ ಪೂರ್ವ ಸ್ಥಳೀಯ ಶಾಸಕನಾಗಿದ್ದ ತಮ್ಮ ಗಮನಕ್ಕೆ ತರಲಿಲ್ಲ. ನನ್ನ ಮೇಲೆ ವೃಥಾ ಆರೊಪವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. 

ತಮ್ಮ ಗಮನಕ್ಕೆ ಬಂದ ಕೂಡಲೇ ಬಿಜೆಪಿ ಮುಖಂಡ ಗಣಪತಿ ಉಳ್ವೇಕರ, ಮೀನುಗಾರರ ಮುಖಂಡರಾದ ಗಣಪತಿ ಮಾಂಗ್ರೆ, ಕೆ.ಟಿ. ತಾಂಡೆಲಗೆ ಹೇಳಿದ್ದೇನೆ. ಸರ್ಕಾರದ ಮಟ್ಟದಲ್ಲಿ ವಿರೋಧವಾಗಬೇಕು ಎಂದು ಸ್ಪಷ್ಟಪಡಿಸಿದ್ದೇನೆ. 2018ರ ಫೆಬ್ರವರಿಯಲ್ಲಿ ಈ ಯೋಜನೆಯ ವಿರುದ್ಧ ನಡೆದ ಹೋರಾಟದಲ್ಲಿ ತಾವು ಪಾಲ್ಗೊಂಡಿದ್ದಾಗಿ ತಿಳಿಸಿದ ಅವರು, ಶಾಸಕನಾಗಿ ನಾನು ವಿರೋಧ ಮಾಡಿದ್ದೇನೆ. ಕಡಲಿನಲ್ಲಿ ಮಾರಕ ಯೋಜನೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ. ಈ ಬಗ್ಗೆ ಬಿಜೆಪಿಗರಿಗೆ ಮಾಹಿತಿ ಇಲ್ಲ. ತಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆರೋಪಿ ಸುವವರು ಮೊದಲು ಸರಿಯಾದ ಮಾಹಿತಿ ಪಡೆದು ಕೊಳ್ಳಲಿ. ತಮ್ಮ ಸ್ಪಷ್ಟನೆಗೆ ಇಂದಿನಿಂದ ಬಾಯಿ ಮುಚ್ಚಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಸಾಗರಮಾಲಾ ಯೋಜನೆ ತಾತ್ಕಾಲಿಕ ಸ್ಥಗಿತ...

ವೇದಿಕೆ ಚರ್ಚೆಗೆ ಸಿದ್ಧ: ಬೆಂಗಳೂರಿನಲ್ಲಿ ಕುಳಿತು ಶಾಸಕರು ಸುದ್ದಿಗೋಷ್ಠಿ ನಡೆಸುವುದಲ್ಲ. ಸರ್ಕಾರದ ಕಿವಿ ಊದುವುದಲ್ಲ. ಇಲ್ಲಿಗೆ ಬಂದು ಮಾತನಾಡಲಿ. ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಲಿ. ತಾವು ಸಿದ್ಧರಿದ್ದೇವೆ ಎಂದು ರೂಪಾಲಿಗೆ ಸವಾಲು ಹಾಕಿದರು. ಮೀನುಗಾರರಿಗೆ ಪ್ರಚೋದನೆ ನೀಡಿದ್ದರೆ ನಿನ್ನೆ ಮುಂಚೂಣಿಯಲ್ಲಿ ಇರುತ್ತಿರಲಿಲ್ಲ. ತಾವು ಶಂಕುಸ್ಥಾಪನೆ ಮಾಡುವಾಗ ರೂಪಾಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಕಾರ್ಯಕಾರಿ ಸಮಿತಿ ಯಲ್ಲಿ ಇದ್ದರು. ಆಗ ಏಕೆ ಮಾತನಾಡಲಿಲ್ಲ. ವಿರೋಧ ಪಕ್ಷದವರಾಗಿ ಏಕೆ ಬಾಯಿ ಮುಚ್ಚಿ ಕುಳಿತಿದ್ದರು. ಯಾವುದಕ್ಕೂ ಪ್ರಚೊದನೆ ನೀಡುವ ವ್ಯಕ್ತಿತ್ವ ತಮ್ಮದಲ್ಲ ಎಂದರು.

ಚೇಲಾಗಳು ಸುಮ್ಮನಿರಲಿ: ಇನ್ನಾದರೂ ಅವರ ಚೇಲಾಗಳು ಸುಮ್ಮನಿರಲಿ. ಈ ರೀತಿ ತಪ್ಪು ಮಾಹಿತಿ ಶಾಸಕರಿಗೆ ನೀಡುವ ಬದಲು ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರ ಗಮನಕ್ಕೆ ತರಲಿ. ಕ್ಷೇತ್ರದ ಅಭಿವೃದ್ಧಿಗೆ ನಾವೂ ಸಹಕಾರ ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.

ಕಾರವಾರದಲ್ಲಿ ಬಂದರು ಕಾದಾಟ: ರೂಪಾಲಿ ನಾಯ್ಕ್‌ಗೆ ಸತೀಶ್ ಸೈಲ್ ತಿರುಗೇಟು

ತಾವು ಶಾಸಕರಾಗಿದ್ದಾಗ ಜನರು ವಿರೋಧಿಸಿದ, ಬದಲಾವಣೆ ಬಯಸಿದ 48 ಕೆಲಸಕ್ಕೆ ಚೆಂಜ್ ಆಫ್ ವರ್ಕ್ ಮಾಡಲಾಗಿದೆ. ಬಂದರು ವಿಸ್ತರಣೆ ಕಾಮಗಾರಿಯನ್ನು ಸ್ಥಳಾಂತರಿಸುವ ಬಗ್ಗೆ ಶಾಸಕರು ಈಗ ಪ್ರಯತ್ನ ಮಾಡಲಿ ಎಂದು ಸವಾಲು ಹಾಕಿದರು. ತಮ್ಮ ಅವಧಿಯಲ್ಲಿ ಬಂದರು ವಿಸ್ತರಣೆ ಬಗ್ಗೆ ಒಂದೇ ಒಂದು ಲೆಟರ್ ಸರ್ಕಾರಕ್ಕೆ ಹೋಗಿದ್ದರೂ ಕಾರವಾರ ವನ್ನೇ ಬಿಟ್ಟು ಹೋಗುತ್ತೇನೆ. ಬಿಜೆಪಿಗರಿಗೆ ಸಾಕ್ಷಿಯಿದ್ದರೆ ತಂದು ತೋರಿಸಲಿ ಎಂದು ಹೇಳಿದರು. ಗುರುವಾರ ನಡೆದ ಹೋರಾಟದ ವೇಳೆ ಆನಂದ ಅಸ್ನೋಟಿಕರ್, ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬರಬೇಕು ಎಂದು ವ್ಯಂಗ್ಯ ವಾಡುತ್ತಿ ದ್ದರು. ಅವರನ್ನೂ ಕರೆಸುತ್ತೇನೆ. ಸಿದ್ದರಾಮಯ್ಯ ಅವರನ್ನು ಕರೆಸುವ ತಾಕತ್ ಇದೆ. ಚಾಲೆಂಜ್ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಕಮಿಷನ್ ಆರೋಪ: ಮಾಜಿ ಸಚಿವ ಆನಂದ ಕೆಲವು ದಿನದ ಹಿಂದೆ ಸೈಲ್ ಶಾಸಕರಾಗಿದ್ದಾಗ ಶೇ. 20 ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿ ಸಿದ್ದಾರೆ. ಇದು ನಿಜವೇ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಅವನಿಗೆ ಕಮಿಷನ್ ಪಡೆದು ಅಭ್ಯಾಸವಿದೆ. ಅದಕ್ಕೆ ಹೇಳುತ್ತಾನೆ. ಯಾರ ಬಳಿ ತಗಂಡಿದ್ದೇನೆ ಎಂದುದನ್ನು ಸಾಕ್ಷಿ ಸಮೇತ ಸ್ಪಷ್ಟಪಡಿಸಲಿ ಎಂದರು. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಟೀಕೆ
ಬಗ್ಗೆ ಕೇಳಿದಾಗ, ಸೋಷಿಯಲ್ ಮಿಡಿಯಾ ನೊಡಲು ತಮಗೆ ಸಮಯವಿಲ್ಲ. ಕ್ಷೇತ್ರದಲ್ಲಿ ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಅಭಿಮಾನಿಗಳಿಗಾಗಿ ಹಾಕುತ್ತೇನೆ. ಅಲ್ಲಿ ಬರುವ ಟೀಕೆ ಟಿಪ್ಪಣಿಗೆ ಉತ್ತರಿಸುವಷ್ಟು ಸಮಯವಿಲ್ಲ ಎಂದು ಹೇಳಿದರು.