ಕಾರವಾರ [ಜ.18]:  ‘ಸಾಗರಮಾಲಾ’ ಯೋಜನೆ ವಿರೋಧಿಸಿ ಗುರುವಾರ ಕಾರವಾರ ಬಂದ್‌ ನಡೆದಿದ್ದು, ಇದರ ಬೆನ್ನಲ್ಲೇ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಂದ್‌ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು, ಅಂಗಡಿ ಮುಂಗಟ್ಟು ಮುಚ್ಚಿದ್ದವು. ಹೋಟೆಲ್‌ಗಳು ಇಲ್ಲದ ಕಾರಣ ಪ್ರವಾಸಿಗರಿಗೆ ಸ್ವಲ್ಪ ತೊಂದರೆ ಉಂಟಾಯಿತು. ಮಿತ್ರಸಮಾಜದಿಂದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕಾರವಾರದಲ್ಲಿ ಬಂದರು ಕಾದಾಟ: ರೂಪಾಲಿ ನಾಯ್ಕ್‌ಗೆ ಸತೀಶ್ ಸೈಲ್ ತಿರುಗೇಟು...

ಹಾಸನದ ನಂಜುಂಡಿ ರೈತ ಸಂಘದ ಸದಸ್ಯರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಗರದ ಬಿಲ್ಟ್‌ ಸರ್ಕಲ್‌ ಬಳಿ 2 ತಾಸು ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!

ಸಚಿವರ ಸಭೆ ಬಳಿಕ ನಿರ್ಧಾರ:  ಬೃಹತ್‌ ಪ್ರತಿಭಟನೆ ಬೆನ್ನಲ್ಲೇ ಬಂದರು ವಿಸ್ತರಣೆ ಕಾಮಗಾರಿ (ಸಾಗರಮಾಲಾ)ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಂಬಂಧ ಸಭೆ ನಡೆಸಲಿದ್ದು, ಯೋಜನೆಯ ಜಾರಿಗೆ ಬಗ್ಗೆ ಪುನರ್‌ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಕಾಮಗಾರಿಯ ಭವಿಷ್ಯ ನಿರ್ಧಾರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.